vijayapur

ಹಲವು ವೈವಿಧ್ಯತೆ ನಡುವೆ ಏಕತೆ ಸಾಧಿಸುವುದೇ, ಏಕÀ ಭಾರತ ಶ್ರೇಷ್ಠ ಭಾರತದ ಪರಿಕಲ್ಪನೆ: ಡಾ.ಆನಂದ ಕುಲಕರ್ಣಿ

ವಿಜಯಪುರ:ಜ.೨೮ : ವಿವಿಧ ವೇಷ ಭೂಷಣ, ಉಡುಗೆ ತೊಡುಗೆ, ಆಚಾರ ವಿಚಾರಗಳು ಅನೇಕ ರೀತಿಯಾಗಿದ್ದರೂ ಸಹ ನಾವೆಲ್ಲಾ ಭಾರತೀಯರು, ನಾವೆಲ್ಲಾ ಒಂದೇ ಎಂದು ಇತಿಹಾಸ ತಜ್ಞ ಡಾ ಆನಂದ ಜೆ ಕುಲಕರ್ಣಿ ಹೇಳಿದರು.
ಭಾರತ ಸರಕಾರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ವಿಜಯಪುರ,(ವಾರ್ತಾ ಮತ್ತು ಪ್ರಸಾರ ಸಚಿವಾಲಯ), ವೇದಾಂತ ಶಿಕ್ಷಣ ಸಂಸ್ಥೆಯ ವೇದಾಂತ ಬಿಸಿಎ ಮತ್ತು ಬಿಕಾಂ ಕಾಲೇಜು, ಹಾಗೂ ಸ್ವಚ್ಛ ಭಾರತ ಸಂಸ್ಥೆ, ವಿಜಯಪುರ ಇವರ ಸಹಯೋಗದಲ್ಲಿ ಏಕ ಭಾರತ ಶ್ರೇಷ್ಠ ಭಾರತ-ವಿವಿಧತೆಯಲ್ಲಿ ಏಕತೆಯ ಸಾಕಾರತೆ ಎಂಬ ವಿಷಯದ ಕುರಿತು ಮಂಗಳವಾರದAದು ವೇದಾಂತ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಎಲ್ಲ ರಂಗದಲ್ಲೂ ಸಾಕಷ್ಟು ವಿವಿಧತೆಯನ್ನು ಹೊಂದಿದೆ. ಇದರ ನಡುವೆಯೂ ಏಕತೆ ಸಾಧಿಸುವುದೇ, ಏಕ್ ಭಾರತ ಶ್ರೇಷ್ಠ ಭಾರತದ ಪರಿಕಲ್ಪನೆಯಾಗಿದೆ ಎಂದು ಅವರು ಹೇಳಿದರು.
ನಮ್ಮ ಮಾತೃಭೂಮಿಯ ಬಗ್ಗೆ ಹೆಮ್ಮೆ, ಭಾರತ ದೇಶದ ಪಾರಂಪಾರಿಕ ಸಂಸ್ಕೃತಿ- ಆಚಾರ ವಿಚಾರಗಳನ್ನು ವಿವರಿಸುತ್ತ ಅನೇಕತೆಯಲ್ಲಿ ಏಕತೆಯನ್ನು ಕಾಣುವ ಭಾರತ ದೇಶ ಜಗತ್ತಿಗೆ ಸಹೋದರತೆ ಕಾಣುವಲ್ಲಿ ಮಾದರಿ ದೇಶವಾಗಿದೆ ಎಂದರು.
ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಸಿ ಕೆ ಸುರೇಶ್ ಅವರು ಜನಸಂಪರ್ಕ ಇಲಾಖೆಯ ಧ್ಯೇಯೋದ್ದೇಶಗಳನ್ನು ವಿವರಿಸುತ್ತಾ, ಪ್ರತಿಯೊಬ್ಬ ನಾಗರೀಕನಿಗೂ ದೇಶದ ಬಗ್ಗೆ ಹೆಮ್ಮೆ ಹಾಗೂ ಏಕತೆ ಪರಿಕಲ್ಪನೆಯ ಈ ಸಂದೇಶ ತಲುಪಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದಾಂತ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ಪ್ರಾಂಶುಪಾಲ, ಎಸ್ ಜಿ ಮಠ, ಮಾತನಾಡಿ ಶಾಲಾ ಅಥವಾ ಕಾಲೇಜಿನ ಒಂದು ವರ್ಗವು ಸಹ ನಮ್ಮ ದೇಶದ ಸಂಸ್ಕೃತಿ ಹಾಗೂ ಏಕತೆಯನ್ನು ಸಾರುವ ಮಾದರಿ ಉದಾಹರಣೆಯಾಗಿರುತ್ತದೆ. ಇಲ್ಲಿಯೂ ಸಹ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತೇವೆ. ಇಂತಹ ಜಾಗೃತಿ ಕಾರ್ಯಕ್ರಮಗಳು ಇಂದಿನ ಯುವಕರಿಗೆ ಅತ್ಯಂತ ಅವಶ್ಯಕವಾಗಿವೆ ಎಂದು ಹೇಳಿದರು.
ಕರೋನಾ ವೈರಸ್ ಭೀತಿಯಿಂದ ಲಾಕ್‌ಡೌನ್ ಉಂಟಾದ ಸಂದರ್ಭದಲ್ಲಿ ಗ್ರಾಮೀಣ ಮಹಿಳಾ ಮತ್ತು ಮಕ್ಕಳ ಆರೋಗ್ಯ ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುತ್ತಾ ಅವರ ಸಾಮಾಜಿಕ, ಆರ್ಥಿಕ ಸಭಲತೆಗಾಗಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಸದ್ಭಳಕೆಗೆ ಸ್ವಚ್ಛ ಭಾರತ ಸಂಸ್ಥೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ವಿಜಯಕುಮಾರ ಕೋತವಾಲ ಅವರು ತಿಳಿಸಿದರು.
ಉಪನ್ಯಾಸಕಿ ನೀತಾ ಎಸ್ ಮಠ ಸ್ವಾಗತಿಸಿದರು. ಕುಮಾರಿ ಶಾಂತಾ ಬಾಗಿ ವಂದಿಸಿದರು. ಕುಮಾರಿ ಪ್ರೀತಿ ಪ್ರಾರ್ಥಿಸಿದರು. ವಾಸ್ತು ದರ್ಪಣ ಪತ್ರಿಕೆ, ಸಂಪಾದಕ ವಿಠ್ಠಲ ಲಂಗೋಟಿ, ಎಂ ಎಂ ಕಿಣಗಿ, ಹೆಚ್ ವಿ ಕುಲಕರ್ಣಿ, ಹಿರಿಯ ಉಪನ್ಯಾಸಕ ವೃಂದ, ಸ್ವಚ್ಛ ಭಾರತ ಸಂಸ್ಥೆಯ ಸ್ವಯಂ ಸೇವಕರು ಹಾಗೂ ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸಾಮಾಜಿಕ ಅಂತರ, ಮುಖಗವಸು ಧರಿಸಿ ಹಾಗೂ ಸ್ಯಾನಿಟೈಸರ್ ಬಳಸಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗ್ಗೊಂಡಿದ್ದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker