vijayapur

ಉಚಿತ ಕೌಶಲ್ಯ ಆಧಾರಿತ ತರಬೇತಿಗೆ ಅರ್ಜಿ ಆಹ್ವಾನ


ವಿಜಯಪುರ:ಜ.: ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ೧೮ ರಿಂದ ೪೫ ನಿರುದ್ಯೋಗಿ ಯುವಕರಿಗಾಗಿ ೧೩ ದಿನಗಳ ಉಚಿತ ಟ್ರಾವೆಲ್ಸ್ ಅಂಡ್ ಟೂರಿಸ್ಟ್ ಗೈಡ್ ತರಬೇತಿಯನ್ನು ದಿನಾಂಕ ೮-೨- ೨೦೨೧ ರಿಂದ ಪ್ರಾರಂಭಿಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಈ ತರಬೇತಿಯು ಸ್ವ ಉದ್ಯೋಗ ಪ್ರಾರಂಭಿಸಿ, ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿದೆ. ಈ ತರಬೇತಿಯು ಉಚಿತವಾಗಿರುತ್ತದೆ. ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುವುದು.
ತರಬೇತಿಯಲ್ಲಿ ಬ್ಯಾಂಕಿAಗ್, ಸರ್ಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಬಗೆಗಿನ ಸೇರಿದಂತೆ ಇನ್ನೀತರ ಮಾಹಿತಿಯನ್ನು ಉಚಿತವಾಗಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸಲು ಆಸಕ್ತರು ಕೆನರಾ ಬ್ಯಾಂಕ್ ದೇಶಪಾಂಡೆ, ಆರ್‌ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ಸಂಪರ್ಕಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ :೯೪೪೯೭೮೨೪೨೫, ೯೪೮೩೪೮೫೪೮೯, ೯೪೮೨೧೮೮೭೮೦, ೦೮೨೮೪-೨೨೦೮೦೭, ೦೮೨೮೪-೨೯೫೩೦೭ ಸಂಪರ್ಕಿಸಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply