bagalkotBallaryBelagavibidarGadaggulburgakarwar uttar kannadaKoppalStatevijayapur

ಬಳ್ಳಾರಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಬದಲಾವಣೆಗೆ ಆನಂದ್ ಸಿಂಗ್ ಪತ್ರ


ಬಳ್ಳಾರಿ :  ಬುಡಾ ಅಧ್ಯಕ್ಷರಾಗಿ  ನೇಮಕ ಗೊಂಡು ಅದ್ಬುತವಾಗಿ ಕಾರ್ಯ ನಿರ್ವಹಣೆ ಮಾಡುತ್ತಾ ಇರುವ ದಮ್ಮೂರು ಶೇಖರ್  ಅವರನ್ನು ಬದಲಾವಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಸಚಿವ ಆನಂದ್ ಸಿಂಗ್ ಪತ್ರ ಬರೆದಿದ್ದಾರೆ .

ಸ್ವಲ್ಪ ಬಿಸಿ ರಕ್ತ ಪ್ರಸ್ತುತ ಕಾಲಮಾನದಲ್ಲಿ ಅಡ್ವಾನ್ಸ್ ಅಗಿ ಕೆಲಸಮಾಡುವ ಚೈತನ್ಯದ ಉತ್ಸಾಹದ ಯುವ ನಾಯಕ.ಚಿಕ್ಕ ವಯಸ್ಸಿನಲ್ಲಿ, ರಾಜ್ಯಮಟ್ಟದ ಕೇಂದ್ರ,ಮಟ್ಟದ ಬಿಜೆಪಿ ಹಿರಿಯ ನಾಯಕರ ಅಭಿಮಾನವನ್ನು ಗಳಿಸಿದ ರಾಜಕಾರಣಿ.

ಬಳ್ಳಾರಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅತಿವೇಗವಾಗಿ ಮಾಡಿದ ಖ್ಯಾತಿಯನ್ನು ಪಡೆದಿದ್ದಾರೆ.ಬಳ್ಳಾರಿಯಲ್ಲಿ ಕೆಲ ಹಿರಿಯ ರಾಜಕಾರಣಿಗಳು ಶೇಖರ್ ಅವರನ್ನು ದಾರಿ ತಪ್ಪಿಸಲು ಮಾಡಿದ ಪ್ರಯತ್ನಗಳು ವಿಫಲವಾಗಿವೆ .

ಅದನ್ನು ಒಪ್ಪದೆ ಇರುವ ಹಿನ್ನೆಲೆಯಲ್ಲಿ, ಉಸ್ತುವಾರಿ ಸಚಿವರಿ೦ದ ಒತ್ತಾಯ ಮಾಡಿಸಿದ್ದರು ಏಂದು ಆರೋಪಗಳು ಬರುತ್ತಿದ್ದವು. ಬಿಜೆಪಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸೇರಿಕೊಂಡು ಶೇಖರ್ ಬೆನ್ನಿಗೆ ಚೂರಿ ಹಾಕಿದ್ದಾರೆ  ಮತ್ತು ಅವರನ್ನು ವಜಾ ಮಾಡಿಸುವ ಷಡ್ಯಂತ್ರ ರೂಪಿಸಿದ್ದಾರೆ ಅನ್ನುವ ಆರೋಪಗಳು ಕೇಳಿ ಬರುತ್ತಿವೆ.

ಇದಕ್ಕೆ ಉಸ್ತುವಾರಿ ಸಚಿವರು ಪೂರಕ ಎನ್ನುವಂತೆ ಮುಖ್ಯಮಂತ್ರಿಗಳುಗೆ ಪತ್ರ ಬರೆದಿದ್ದಾರೆ.ಪತ್ರ ಬಹಿರಂಗಗೊಂಡಿದೆ, ಈಗಾಗಲೆ ಶೇಖರ್ ಬಳ್ಳಾರಿ ನಗರದ ಪ್ರಭಾವಿ ರಾಜಕಾರಣಿಗಳ ಬಡಾವಣೆಗಳ ಭ್ರಷ್ಟಾಚಾರ ಗಳನ್ನು ರಹಸ್ಯವಾಗಿ ಪರಿಶೀಲನೆ ಮಾಡಲು ಮುಂದಾಗಿದ್ದರು ಎನ್ನಲಾಗಿದೆ ?

ಬಳ್ಳಾರಿ ನಗರದಲ್ಲಿ ನಿರ್ಮಾಣಗೊಂಡಿರವ ಅಕ್ರಮ ಬಡಾವಣೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಅನ್ನವ ಭಯ ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ಇದೆ.ಅಪ್ಪಿತಪ್ಪಿ ಶೇಖರ್ ಅವರು ಬಹಿರಂಗ ಮಾಡಿದರೆ ಬಡಾವಣೆ ಮಾಲೀಕರಿಗೆ ಸಂಕಷ್ಟ ಕಾದು ನಿಂತಿದೆ ಏಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಇದೇ ಸಂದರ್ಭದಲ್ಲಿ  ಬಳ್ಳಾರಿ ವಿಭಜನೆ  ಹಿನ್ನೆಲೆಯಲ್ಲಿ ಜನರು ತುಂಬಾ ಆಕ್ರೋಶಗೊ೦ಡಿದ್ದಾರೆ.ಖಾತೆ ಬದಲಾವಣೆ ವಿಷಯದಲ್ಲಿ ಅಸಮಾಧಾನಗೊಂಡಿರುವ ಸಚಿವ ಆನಂದ ಸಿಂಗ್ ರಾಜೀನಾಮೆಗೆ ಮುಂದಾಗಿದ್ದಾರೆಂಬ ವಿಷಯ ಕೂಡ ಇಲ್ಲಿ ಗಮನಾರ್ಹವಾಗಿದೆ.ಪ್ರಸ್ತುತ ಸಚಿವ ಆನಂದ್ ಸಿಂಗ್ ಅವರನ್ನು ಸಮಾಧಾನಗೊಳಿಸುವ ನಿಟ್ಟಿನಲ್ಲಿ ಬುಡ ಅಧ್ಯಕ್ಷರ ಬದಲಾವಣೆಗೆ ಮುಖ್ಯಮಂತ್ರಿಗಳು ಮುಂದಾಗುತ್ತಾರೋ ಅಥವಾ ದಮ್ಮೂರು ಶೇಖರ್ ಅವರು ತಮ್ಮ ಪ್ರಭಾವ ಬಳಸಿ ಕುರ್ಚಿ ಉಳಿಸಿಕೊಳ್ಳುತ್ತಾರೋ ಏಂದು ಕಾದು ನೋಡಬೇಕಾಗಿದೆ.!!

(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


Leave a Reply