Karnataka
ಯಲ್ಲಮ್ಮನ ಹಡ್ಡಲಗಿ ತುಂಬಿದ ಭಕ್ತರು

ಸವದತ್ತಿ : ಹುಣ್ಣುಮೆ ನಿಮಿತ್ಯ ಯಲ್ಲಮ್ಮನ ಭಕ್ತರು ಜೋಗಳಬಾವಿ ಸತ್ಯಮ್ಮ ದೇವಸ್ಥಾನದ ಆವರಣ ಹಾಗೂ ಮಲಪ್ರಭಾ ನದಿಯ ತೀರದಲ್ಲಿ ಹಡ್ಡಲಗಿ ತುಂಬುವ ಮೂಲಕ ವಿಧಿ ವಿಧಾನಗಳನ್ನು ನೇರವೆರಿಸಿದರು.
ಕೋವಿಡ್-19 ನಿಂದಾಗಿ 11 ತಿಂಗಳಿನಿಂದ ದೇವಿಯ ದರ್ಶನಕ್ಕೆ ಬಂದ ಆಗಿದ್ದು ಜನೇವರಿ 30 ರ ವರೆಗೆ ಸಾರ್ವಜನಿಕ ದರ್ಶನಕ್ಕೆ ನಿರ್ಭಂದ ಹೇರಿ ಜಿಲ್ಲಾಧಿಕಾರಿ ಎಂ.ಜಿ.ಹೀರೆಮಠ ಆದೇಶ ಹೊರಡಿಸಿದ್ದಾರೆ.
ಗುರುವಾರ ಬನದ ಹುಣ್ಣುಮೆ ನಿಮಿತ್ತ ಮೂಲೆ ಮೂಲೆಯಿಂದ ಸಾವಿರಾರು ಭಕ್ತರು ಆಗಮಿಸಿ ವಿಧಿ ವಿಧಾನಗಳ ಮೂಲಕ ಹಡ್ಡಲಗಿ ತುಂಬಿದ ದೃಶ್ಯ ಕಂಡುಬಂದಿದೆ.
ಪ್ರತಿವರ್ಷ ಹುಣ್ಣುಮೆ ನಿಮಿತ್ತ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ ಆದರೆ ದೇವಸ್ಥಾನ ನಿರ್ಭಂದ ಇರುವುದರಿಂದ ದೇವಿಯ ದರ್ಶನ ಸಿಗಲಿಲ್ಲಾದ್ದರಿಂದ ದೂರದಿಂದ ದೇವಿಗೆ ನಮಸ್ಕರಿಸಿದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)