Koppal

ಗುಮಗೇರಾ ಗ್ರಾಮ ಪಂಚಾಯತಿ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆ.


ಕುಷ್ಟಗಿ-ಗುಮಗೇರಾ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸ್ಥಾನಗಳಿಗೆ ಚುನಾವಣೆ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ನಡೆಸಲಾಯಿತು.ಒಟ್ಟು 13 ಸದಸ್ಯರುಗಳು ಚುನಾವಣೆಯಲ್ಲಿ ಮತದಾನ ಮಾಡಿದರು. ಅಧ್ಯಕ್ಷ ಸ್ಥಾನಕ್ಕೆ ಶ್ರೀ ಮತಿ ಲಕ್ಷ್ಮವ್ವ ಹೊಳಿಯಪ್ಪ ತಳವಾರ. ಹಾಗೂ ಸವಿತಾ ರವಿಕುಮಾರ್ ಮ್ಯಾಗೇರಿ ಸ್ಪರ್ದಿಸಿದ್ದರು. ಲಕ್ಷ್ಮವ್ವ ಹೊಳಿಯಪ್ಪ ತಳವಾರ 09 ಮತಗಳಿಸಿ ಆಯ್ಕೆಯಾದರು. ಪ್ರತಿಸ್ಪರ್ದಿ ಸವಿತಾ ರವಿಕುಮಾರ್ 04 ಮತಗಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಪರಸಪ್ಪ ಹನಮಪ್ಪ ಗಂಗನಾಳ 08 ಮತಗಳಿಸಿ ಆಯ್ಕೆಯಾದರು ಪ್ರತಿಸ್ಪರ್ದಿ ಬಸಮ್ಮ ಶಿವರಾಜ ಗುಡಿಯಿಂದಲ್ 05 ಮತಗಳಿಸಿದರು. ಚುನಾವಣೆ ಅಧಿಕಾರಿ ಶ್ರೀ ನೀಲಪ್ಪ ಶೆಟ್ಟಿಯವರು ಅಧ್ಯಕ್ಷ &ಉಪಾಧ್ಯಕ್ಷರು ಹೆಸರು ಘೋಷಣೆ ಮಾಡಿದರು.ನಂತರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಹಾಗೂ ಇನ್ನೂಳಿದ ಸದಸ್ಯರುಗಳಿಗೆ ಗ್ರಾಮ ಪಂಚಾಯತಿ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಗುಮಗೇರಾ ಗ್ರಾಮ ಪಂಚಾಯತಿ ಪಿಡಿಓ,ಬಸಣ್ಣ ನಂದಿಹಾಳ, ಮಾತನಾಡಿ ಇಲ್ಲಿಯ ವರೆಗೂ ನಮ್ಮ ಗ್ರಾಮ ಪಂಚಾಯತಿ ಆಡಳಿತ ಅಧಿಕಾರಿಗಳಾದ ನೀಲಪ್ಪ ಶೆಟ್ಟಿರವರು ,ಕೆಲಸ ಮಾಡಿ,ನಮಗೂ ಉತ್ತಮ ಮಾರ್ಗದರ್ಶನ ನೀಡಿದ್ದಕ್ಕಾಗಿ ಅವರಿಗೆ ಸನ್ಮಾನಿಸಿ ಅಭಿನಂದಿಸಿ ದರು.ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರನ್ನೊಳಗೊಂಡ ಎಲ್ಲಾ ಸದಸ್ಯರು ಕೂಡ ನಮಗೆ ಅಭಿವೃದ್ಧಿ ಕೆಲಸ ಮಾಡಲು ಎಲ್ಲ ರೀತಿಯ ಸಹಕಾರ ನೀಡಿದ್ದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಹೊಸ ದಾಗಿ ಆಯ್ಕೆಯಾಗಿರುವ ಅಧ್ಯಕ್ಷರನ್ನೊಳಗೊಂಡ ಎಲ್ಲಾ ಸದಸ್ಯರಿಗೂ ನಾಲ್ಕು ಗ್ರಾಮಗಳ ಅಭಿವೃದ್ಧಿ ಗೆ ಉತ್ತಮ ಸಹಕಾರ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಪೋಲಿಸ್ ಬಂದೋಬಸ್ಥ ಮಾಡಿದ ಪೋಲಿಸ್ ಇಲಾಖೆಯವರಿಗೂ ಧನ್ಯವಾದ, ತಿಳಿಸಿದರು.ಈ ಸಂದರ್ಭದಲ್ಲಿ ಗುಮಗೇರಾ. ನಾಗರಾಳ.ಗಂಗನಾಳ.ಗುಡದೂರ. ಗ್ರಾಮದ ಹಿರಿಯರು ,ಯುವ ಮುಖಂಡರು ಉಪಸ್ಥಿತರಿದ್ದರು.


Leave a Reply