bagalkotBallaryBelagavibidarGadaggulburgaKarnatakakarwar uttar kannadaKoppalvijayapur

48 ತಾಸಿನೊಳಗಾಗಿ ಮರು ನೇಮಕಗೊ೦ಡು ದಮ್ಮು ತೋರಿಸಿದ!! ದಮ್ಮೂರು ಶೇಖರ್!!!

ಳ್ಳಾರಿ ; ಸಚಿವ ಆನಂದ್ ಸಿಂಗ್ ಅವಕೃಪೆಗೆ ಒಳಗಾಗಿ ಕುರ್ಚಿ ಕಳೆದುಕೊಂಡಿದ್ದ ದಮ್ಮೂರು ಶೇಖರ 48 ತಾಸಿನ ಒಳಗಾಗಿ ಕಳೆದ ಕಳೆದುಕೊಂಡಿದ್ದ ಕುರ್ಚಿ ಮೇಲೆ ಮರು ಸ್ಥಾಪನೆಗೊಂಡಿದೆ ಹೆಸರಿಗಷ್ಟೇ ದಮ್ಮೂರಲ್ಲ ತಾಕತ್ತಿನಲ್ಲಿಯೂ ಧಮ್ ಇದೆ ಎಂದು ಸಾಬೀತುಪಡಿಸುವ ಮೂಲಕ  ಬಳ್ಳಾರಿ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಅನಂದ್ ಸಿಂಗ್  ಮುಖ್ಯಮಂತ್ರಿಗಳಿಗೆ ಪತ್ರ ಬರೆದು ದಮ್ಮೂರು ಶೇಖರ್ ಬದಲಾಗಿ  ರಾಮಲಿಂಗಪ್ಪ ಅವರನ್ನು ನೇಮಕ ಮಾಡಿಸಿದ್ದರು. ವಿಷಯ ತಕ್ಷಣವೇ ಮುಖ್ಯಮಂತ್ರಿಗಳ ಗಮನಕ್ಕೆ ಹೊಗಿ ಮುಖ್ಯಮಂತ್ರಿಗಳು ದಮ್ಮೂರು ಶೇಖರ್ ಅವರನ್ನು ರಾತ್ರೋರಾತ್ರಿ ಬೆಂಗಳೂರಿಗೆ ಬರುವಂತೆ ಹೇಳಿದ್ದರು. ಬಳ್ಳಾರಿ ಬುಡಾ ಅಧ್ಯಕ್ಷ ರನ್ನಾಗಿ ದಮ್ಮೂರು ಶೇಖರ್ ಅವರನ್ನು ನೇಮಕ ಮಾಡಿ ಆದೇಶ ಪತ್ರವನ್ನು ನೀಡಿದ್ದಾರೆ.!!ಇದೇ ಸಂದರ್ಭದಲ್ಲಿ ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ರಾಮಲಿಂಗಪ್ಪ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ .

ಮೇಲ್ನೋಟಕ್ಕೆ ಮುಖ್ಯಮಂತ್ರಿಗಳು ತಮ್ಮ ಕಟ್ಟಾ ಹಿಂಬಾಲಕ ದಮ್ಮೂರು ಶೇಖರ್ ಅವರ ಕೈ ಬಿಡಲು ಇಲ್ಲ ,ಮತ್ತೊಂದೆಡೆ ಸಚಿವ ಆನಂದ್ ಸಿಂಗ್ ಅವರ ಕ್ಯಾಂಡಿಡೇಟ್ ರಾಮಲಿಂಗಪ್ಪ ಅವರನ್ನು ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ  ನೇಮಕ ಮಾಡುವ ಮೂಲಕ ಸಚಿವರನ್ನು ಸಮಾಧಾನ ಪಡಿಸುವ ಕಾರ್ಯವನ್ನು ಮಾಡಿದ್ದಾರೆ .

ಏನೇ ಆಗಲಿ  ದಮ್ಮೂರು ಶೇಖರ್     ಹೆಸರಿಗಷ್ಟೇ ದಮ್ಮೂರಲ್ಲ ತಾಕತ್ತಿನಲ್ಲಿಯೂ ಧಮ್ ಇದೆ ಎಂದು ಸಾಬೀತುಪಡಿಸುವ ಮೂಲಕ  ಬಳ್ಳಾರಿ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು ಮಾತ್ರ ಸುಳ್ಳಲ್ಲ …..

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker