Belagavi
ಕೃಷ್ಣಾ ಆಯುರ್ವೇದಿಕ ಮಹಾವಿಧ್ಯಾಲಯದ ವಿಧ್ಯರ್ಥಿಗಳಿಗೆ ಕೋರೋಣ ಲಸಿಕೆ

ಸಂಕೇಶ್ವರ ಜ. ಶ್ರೀ.ಬಿರೇಶ್ವರ ಶಿಕ್ಷಣ ಸಂಸ್ಥೆ ಸಂಚಾಲಿತ ಕೃಷ್ಣಾ ಆಯುರ್ವೇದಿಕ ಮಹಾವಿಧ್ಯಾಲಯ ಮತ್ತು ಹಾಸ್ಪಿಟಲ್ ನಲ್ಲಿ 40 ಡಾಕ್ಟರ ಮೆಡಿಕಲ್ ವಿದ್ಯಾರ್ಥಿ ಮತ್ತು ಸ್ಟಾಫ್ ಒಟ್ಟು 266 ಜನರಿಗೆ ಕೋವಿಶಿಲ್ಡ್ ಲಸಿಕೆ ನೀಡುವ ಕಾರ್ಯಕ್ರಮ ಉತ್ಸಾಹದಿಂದ ಜರುಗಿತು .ಹುಕ್ಕೇರಿ ತಾಲೂಕ ವೈಧ್ಯಾಧಿಕಾರಿ ಡಾ|| ಉದಯ ಕುಡಚಿ ಸಂಕೇಶ್ವರ ಸಮುದಾಯ ಆರೋಗ್ಯ ಕೇಂದ್ರ ವೈಧ್ಯಾಧಿಕಾರಿ ಡಾ|| ದತ್ತಾತ್ರೇಯ ದೊಡ್ಡಮನಿ ಇವರ ಮಾರ್ಗದರ್ಶನದಲ್ಲಿ ಮತ್ತು ಕೃಷ್ಣಾ ಆಯುರ್ವೇದಿಕ ಮಹಾವಿಧ್ಯಾಲಯ ಚೇರ್ ಮನ ಡಾ|| ಜಯಪ್ರಕಾಶ ಕರಜಗಿ ,ಸಿಕ್ರೆಟರಿ ಡಾ|| ಸಂತೋಷ ಖಜ್ಜನವರ ಇವರ ನೇತೃತ್ವದಲ್ಲಿ ಲಸಿಕರಣ ಮೊಯಿಮ ಜರುಗಿತು ಪೂನೆ ಸಿರಮ ಇನ್ಸ್ಟಿಟುಟ ಕೋವಿಶಿಲ್ಡ್ ಲಸಿಕೆ ಪ್ರಥಮ ಪ್ರಾಚಾರ್ಯ ಮಂಜುನಾಥ ಗವಿಮಠ ಇವರಿಗೆ ನೀಡಲಾಯಿತು .ಮತ್ತು ವಿಧ್ಯಾರ್ಥಿ ,ವಿಧ್ಯರ್ಥಿನಿಯರಿಗೆ ಲಸಿಕೆ ನೀಡಲಾಯಿತು .