vijayapur

ಜಿಎಸ್‌ಟಿ ಕಾಯಿದೆಯಲ್ಲಿ ಬದಲಾವಣೆಗಳಿಗೆ ವಿರೋಧಿಸಿ ಮನವಿ


ಇಂಡಿ :- ಕೇಂದ್ರ ಸರಕಾರ ೨೦೧೭ರಲ್ಲಿ ಜಿಎಸ್‌ಟಿ ಕಾಯಿದೆಯನ್ನು ಜಾರಿಯಲ್ಲಿ ತಂದಿದ್ದು ಕಾಲಕಾಲಕ್ಕೆ ಮೂರು ವರ್ಷಗಳಲ್ಲಿ ೧೦೦೫ (ಸರಾಸರಿ ಮೂರು ದಿನಕ್ಕೊಂದು) ತಿದ್ದು ಪಡಿಗಳನ್ನು ತಂದಿದ್ದು ವ್ಯಾಪಾರಸ್ಥರಿಗೆ/ವಾಣಿಜ್ಯೋದ್ಯಮಿಗಳಿಗೆ ಆರ್ಥಿಕವಾಗಿಯೂ ಹಾಗೂ ಮಾನಸಿಕವಾಗಿಯೂ ಒತ್ತಡವಾಗುತ್ತಿದೆ. ಇನ್‌ಪುಟ್ ಟ್ಯಾಕ್ಸ ಕ್ರೆಡಿಟ ನಿರಾಕರಣೆ, ಪರಿಷ್ಕೃತ ಜಿಎಸ್‌ಟಿ ರಿಟರ್ನ ಸಲ್ಲಿಕೆ ನಿರಾಕರಣೆ ಹಾಗೂ ರಾತ್ರೋರಾತ್ರಿ ಕಾಯಿದೆಗೆ ತಿದ್ದುಪಡಿಗಳ ಪರಿಣಾಮದಿಂದ ಅಧಿಕಾರಿಗಳಿಂದ ನೊಂದಣಿ ರದ್ದುಗೊಳಿಸುವ ಹಾಗೂ ಇನ್‌ಪುಟ್ ಟ್ಯಾಕ್ಸ ಕ್ರೆಡಿಟನ್ನು ತಡೆಹಿಡಿಯಲಾಗುತ್ತಿದೆ. ಈ ದಿಶೆಯಲ್ಲಿ ವಾಣಿಜ್ಯೋದ್ಯಮ ರಂಗದಿAದ ಅನೇಕ ಮನವಿಗಳನ್ನು ಸಲ್ಲಿಸಿದರೂ ಸರಕಾರ ಸ್ಪಂದಿಸುತ್ತಿವಾದ್ದರಿAದ ವ್ಯಾಪಾರಸ್ಥರು ಅನವ್ಯಶಕವಾಗಿ ದಂಡ ಭರಿಸುತ್ತಿದ್ದಾರೆ. ಪರಿಹಾರಕ್ಕಾಗಿ ಜಿಎಸ್‌ಟಿ ಪೋರ್ಟಲಿಗೆ ಸಂರ್ಪಕಿಸಿದರೂ ಸೂಕ್ತವಾಗಿ ಸ್ಪಂದನೆ ಸಿಗುತ್ತಿಲ್ಲ. ಜಿಎಸ್‌ಟಿ ಕಮೀಟಿಯಲ್ಲಿ ವಾಣಿಜ್ಯೋದ್ಯಮಿಗಳ ವತಿಯಿಂದ ಪ್ರತಿನಿಧಿಗಳು ಸಮಸ್ಯೆ ತಿಳಿಸಿದರೂ ಸಹ ಪ್ರಯೋಜವಾಗುತ್ತಿಲ್ಲ.
ಮೇಲ್ಕಂಡ ವ್ಯವಹಾರಿಕ ತೊಂದರೆಗಳನ್ನು ಪರಿಗಣಿಸಿ ಮರ್ಚಂಟ್ಸ ಅಸೋಸಿಯೇಶನದ ನೇತೃತ್ವದಲ್ಲಿ ಹಾಗೂ ಟ್ಯಾಕ್ಸ ಬಾರ್ ಅಸೋಸಿಯೇಶನದ ಸಹಯೋಗದೊಂದಿಗೆ ಹಾಗೂ ಸ್ಥಳೀಯ ವಿವಿಧ ವ್ಯಾಪಾರಿ ಸಂಘಟಣೆಗಳ ಪದಾಧಿಕಾರಿಗಳೊಂದಿಗೆ ಜಿಎಸ್‌ಟಿ ಕಾಯಿದೆಯಲ್ಲಿನ ಬದಲಾವಣೆಗಳಿಂದ ಆಗುವ ಆರ್ಥಿಕವಾಗಿ/ ವ್ಯವಹಾರಿಕವಾಗಿರುವ ತೋಂದರೆಗಳನ್ನು ಪರಿಗಣಿಸಿ ಪರಿಹಾರಗಳನ್ನು ಅನಮೋದಿಸಿ/ತಿದ್ದುಪಡಿಗಳನ್ನು ವಿರೋಧಿಸಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರದ ಮಾನ್ಯ ಹಣಕಾಸು ಸಚಿವರಿಗೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ತೆರಳಿ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಮರ್ಚಂಟ್ಸ ಅಸೋಸಿಯೇಶನದ ಅಧ್ಯಕ್ಷರಾದ ಶ್ರೀ ರವೀಂದ್ರ ಬಿಜ್ಜರಗಿ ಹಾಗೂ ಪದಾಧಿಕಾರಿಗಳಾದ ಜಯಾನಂದ ತಾಳಿಕೋಟಿ, ಪ್ರವೀಣ ವಾರದ, ಮನೋಜ ಬಗಲಿ, ಸಿದ್ದಪ್ಪ ಸಜ್ಜನ, ಕುಮಾರ ಹಕ್ಕಾಪಕ್ಕಿ ಹಾಗೂ ಜವಳಿ ವರ್ತಕರ ಸಂಘದ ಶ್ರೀ ಗೋಕುಲ ಮಹಿಂದ್ರಕರ, ವಿಶ್ವನಾಥ ಬೀಳಗಿ,ರೆಡಿಮೆಡ ಚ ಪ್ರದೀಪ ಮೊಗಲಿ, ಕಿರಾÀಣಾ ಮರ್ಚಂಟ್ಸ ಅಸೋಸಿಯೇಶನದ ಅಶೋಕ ಗುಡ್ಡೋಡಗಿ, ಟ್ಯಾಕ್ಸ ಬಾರ ಅಸೋಸಿಯೇಶನದ ಅಧ್ಯಕ್ಷರಾದ ಬಾಬು ಮಿಣಜಗಿ, ರಾಜ್ಯ ಸಮಿತಿ ಸದಸ್ಯರಾದ ಶ್ರೀ ಎಸ್.ಆರ್.ಮಠಪತಿ ಮತ್ತು ಪ್ರಭು ಮೋತಿಮಠ, ಇವರು ಉಪಸ್ಥಿತರಿದ್ದರು.


Leave a Reply