Belagavi

ರಾಷ್ಟಿçÃಯ ಹೊಸ ಶಿಕ್ಷಣ ನೀತಿ’ ಕುರಿತು ಕಾರ್ಯಾಗಾರ


ಗೋಕಾಕ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಘಟಕಗಳು ಹಾಗೂ ತಾಲೂಕಿನ ವಿವಿಧ ಸರ್ಕಾರಿ ನೌಕರರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ದಿ.೧ರಂದು ಮುಂಜಾನೆ ೧೦ ಗಂಟೆಗೆ ತಾಲೂಕಾ ಪಂಚಾಯತ ಸಭಾಂಗಣದಲ್ಲಿ ‘ರಾಷ್ಟಿçÃಯ ಹೊಸ ಶಿಕ್ಷಣ ನೀತಿ’ ಕುರಿತು ಕಾರ್ಯಾಗಾರ, ಪ್ರತಿಭಾ ಮತ್ತು ಸಾಧನಾ ಪುರಸ್ಕಾರ, ತಾಲೂಕಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭವು ಜರುಗಲಿದೆ. ಸಮಾರಂಭವನ್ನು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಉದ್ಘಾಟಿಸುವರು.
ಪುರಸ್ಕಾರ ವಿತರಣೆಯನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ನೆರವೇರಿಸುವರು. ಬೆಳಗಾವಿಯ ಸಿಟಿಇ ನ ಉಪನ್ಯಾಸಕ ನಾಗರಾಜ ಕಾಳೆ ರಾಷ್ಟಿçÃಯ ಹೊಸ ಶಿಕ್ಷಣ ನೀತಿಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ಈ ಸಮಾರಂಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕದ ಅಧ್ಯಕ್ಷ ಬಿ.ಆರ್.ಮುರಗೋಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Leave a Reply