Koppal

ವಿಕಲಚೇತನ ಮಹಿಳೆಯರಿಗೆ ನೆರಳಿನಲ್ಲಿ ಕುಳಿತ ಮಕ್ಕಳನ್ನು ಆರೈಕೆ ಮಾಡಿದರೆ ಅವರಿಗೂ ನೆರಗಾ ದಿಂದ ದಿನಗೂಲಿ


ಗಂಗಾವತಿ :ವಿಕಲಚೇತನ ಮಹಿಳೆಯರಿಗೆ ನೆರಳಿನಲ್ಲಿ ಕುಳಿತ ಮಕ್ಕಳನ್ನು ಆರೈಕೆ ಮಾಡಿದರೆ ಅವರಿಗೂ ನೆರಗಾ ದಿಂದ ದಿನಗೂಲಿ ನೀಡಲಾಗುತ್ತಿದೆ .

ಮೊದಲ ಹಂತದ ಮಹಿಳಾ ಕಾಯಕೋತ್ಸವಕ್ಕೆ ಆಯ್ಕೆಯಾದ ಕನಕಗಿರಿ ತಾಲೂಕಿನ ಮುಸಲಾಪುರ ಗ್ರಾಮ ಪಂಚಾಯಿತಿಯಿಂದ ಒಬಳಬಂಡಿ ಗ್ರಾಮದಲ್ಲಿ 250 ಮಹಿಳಾ ಕೂಲಿಕಾರರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನಾಲಾ ಹೂಳೆತ್ತುವ ಕೆಲಸ ನೀಡಲಾಯಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಡಿ.ಮೋಹನ್ ಸರ್ ಅವರು ನಾಲೆ ಹೂಳೆತ್ತುವ ಕೆಲಸ ವೀಕ್ಷಣೆ ಮಾಡಿ, ಮಹಿಳಾ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆ ಮಾಹಿತಿ ನೀಡಿದರು. ಪುರುಷರಿಗೂ ಮಹಿಳೆಯರಿಗೂ ಸಮಾನ ಕೂಲಿ 275 ರೂ. ನೀಡಲಾಗುತ್ತಿದೆ. ವರ್ಷದಲ್ಲಿ ನೂರು ದಿನ ಕೆಲಸ ಮಾಡಬಹುದು. ಪ್ರತಿಯೊಬ್ಬರೂ ನರೇಗಾ ಸೌಲಭ್ಯ ಪಡೆದುಕೊಳ್ಳುವಂತೆ ಹೇಳಿದರು.
ಕೆಲಸ ಮಾಡುವ ನಾಲೆ ಹತ್ತಿರದಲ್ಲೇ ಅಂಗವಿಕಲ ಮಹಿಳೆಯರು ಹಾಗೂ ವೃದ್ಧರಿಗೆ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಹಾಕಿದ್ದ ಪೆಂಡಾಲ್ ವ್ಯವಸ್ಥೆಯನ್ನು ತಾಪಂ ಇಒ ವೀಕ್ಷಿಸಿ, ವಿಕಲಚೇತನ ಮಹಿಳೆಯರಿಗೆ ನೆರಳಿನಲ್ಲೇ ಕುಳಿತು ಮಕ್ಕಳ ಹಾರೈಕೆ ಮಾಡಿದರೆ ನಿಮಗೆ ದಿನಕ್ಕೆ 275 ರೂ. ಕೂಲಿ ದೊರೆಯಲಿದೆ. ಸೌಲಭ್ಯ ಸದ್ಬಳಕೆ ಮಾಡಿಕೊಂಡು ಮನೆಯವರಿಗೂ ನೆರವಾಗುವಂತೆ ಕಿವಿಮಾತು ಹೇಳಿದರು.

ಪಿಡಿಒ ಶರಣಗೌಡ, ತಾಲೂಕು ಐಇಸಿ ಕೋಡಿನೆಟರ್ ಬಾಳಪ್ಪ ತಾಳಕೇರಿ, ಟಿಎಇ ಮುರುಳಿದರ್, ಗ್ರಾಪಂ ಸಿಬ್ಬಂದಿ ಮಹೇಶಗೌಡ ಇದ್ದರು.


Leave a Reply