State

ಶ್ರೀಕ್ಷೇತ್ರ ಯಲ್ಲಮ್ಮನ ದೇವಸ್ಥಾನಕ್ಕೆ ಭಕ್ತರಿಗೆ ಮುಕ್ತ ದರ್ಶನಕ್ಕೆ ಅಗ್ರಹ


ಸವದತ್ತಿ: ಯಲ್ಲಮ್ಮನ ದೇವಸ್ಥಾನಕ್ಕೆ ಭಕ್ತರಿಗೆ ಮುಕ್ತ ದರ್ಶನಕ್ಕೆ ಅವಕಾಶ ಕಲ್ಪಿಸಲು ಒತ್ತಾಯಿಸಿ ಶ್ರೀರಾಮ ಸೇನಾ ಹಾಗೂ ವಿವಿಧ ಸಂಘಟನೆ ಪ್ರತಿಭಟನೆ ಮೂಲಕ ತಹಶೀಲ್ದಾರ ಪ್ರಶಾಂತ ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದರು.

 • ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ ಮುತಾಲಿಕ ಮಾತನಾಡಿ, ರಾಜಕೀಯ ಸಭೆ, ಸರಕಾರಿ ಸಭೆ, ಚುನಾವಣೆ ನಡೆಸಲು ಕೋವಿಡ್ ಅಡ್ಡಿಯಾಗುವುದಿಲ್ಲ.
  ಮಾಲ್, ಥಿಯೇಟರ್, ಸ್ವಿಮ್ಮಿಂಗ್ ಪೂಲ್, ಪ್ರಾರಂಭಿಸಿ ಬಂಡವಾಳ ಶಾಹಿಗಳ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟ ಸರಕಾರ, ಉತ್ತರ ಕರ್ನಾಟಕದ ದೇವಸ್ಥಾನಕ್ಕೆ ನಿರ್ಬಂಧ ವಿದಿಸಿದ್ದು ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು 5 ದಿನಗಳಲ್ಲಿ ಅವಕಾಶ ಕೊಡದಿದ್ದಲ್ಲಿ ಲಕ್ಷಾಂತರ ಜನ ಸೇರಿ ದೇವಸ್ಥಾನ ಪ್ರವೇಶ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.
  ದೇವಸ್ಥಾನವನ್ನೇಅವಲಂಬಿಸಿದ ಅತೀ ಚಿಕ್ಕ ವ್ಯಾಪಾರಸ್ಥರು ಜೀವನ ನಡೆಸಲು ದಿನ ಎಣಿಸಿ ಕಾಲ ಕಳೆಯುತ್ತಿದ್ದಾರೆ. ಈ ನಿಷೇಧವು ಹಿಂದು ಧರ್ಮಕ್ಕೆ, ಸಂಸ್ಕೃತಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಆರೋಪಿಸಿದರು.
  ಇಲ್ಲಿಂದ ಬೈಕ್ ಮತ್ತು ಕಾರ ರಾಲಿ ಮೂಲಕ ದೇವಸ್ಥಾನಕ್ಕೆ ತೆರಳಿ ದೇವಸ್ಥಾನದ ಕಾರ್ಯನಿವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಅವರಿಗೂ ಮನವಿ ಸಲ್ಲಿಸಲಾಯಿತು.

  ಈ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷರಾದ ಗಂಗಾಧರ ಕುಲಕರ್ಣಿ, ಬೆಳಗಾವಿ ಜಿಲ್ಲಾಧ್ಯಕ್ಷರಾದ ರವಿ ಕೋಕಿತಕರ, ಬೆಳಗಾವಿ ಕಾರ್ಯಾಧ್ಯಕ್ಷರಾದ ವಿನಯ ಅಂಗ್ರೋಳಿ, ಸವದತ್ತಿ ತಾಲೂಕಾ ಪ್ರಮುಕರಾದ ಶಂಕರ ವಣ್ಣೂರ, ಗದಗ ಜಿಲ್ಲಾ ಪ್ರಮುಖರಾದ ರಾಜು ಖಾನಪ್ಪನವರ, ಸವದತ್ತಿ ತಾಲೂಕಾಧ್ಯಕ್ಷರಾದ ಸುರೇಶ ಭಜಂತ್ರಿ, ಯರಗಟ್ಟಿ ತಾಲೂಕಾಧ್ಯಕ್ಷರಾದ ಶಂಕರ ಇನಾಮದಾರ, ಜೈ ಕರ್ನಾಟಕ ಸೇನೆ ರಾಜ್ಯಧ್ಯಕ್ಷರಾದ ಅನೀಲ ರಾಜ, ಚಂದ್ರು ತಲ್ಲೂರ, ಸುನೀಲ ಬೂದಿಗೊಪ್ಪ, ಗಂಗಪ್ಪ ಬಾರ್ಕಿ, ಆನಂದ ಕಾಮನ್ನವರ ಇನ್ನುಳಿದವರು ಉಪಸ್ಥಿತರಿದ್ದರು.
  (ವರದಿ ಈರಣ್ಣಾ ಹುಲ್ಲೂರ ಸವದತ್ತಿ)


Leave a Reply