Koppal

ಕೊಪ್ಪಳದಲ್ಲಿ ಕಾರ್ಮಿಕರಿಂದ ಉಪವಾಸ ಸತ್ಯಾಗ್ರಹ

ಕೊಪ್ಪಳ : ಗಾಂಧಿ ಹುತಾತ್ಮ ದಿನದ ಅಂಗವಾಗಿ ಮತ್ತು ಸಾಜಾನಪುರದಲ್ಲಿ ರೈತರ ಹೋರಾಟವನ್ನು ಹತ್ತಿಕ್ಕಲು ಮೋದಿ-ಯೋಗಿ ಸರಕಾರ ನಡೆಸಿರುವ ಕ್ರಮವನ್ನು ವಿರೋಧಿಸಿ. ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರೈತ ಕಾರ್ಮಿಕರು ಮತ್ತು ಕೂಲಿಕಾರರು ಉಪವಾಸ ಸತ್ಯಾಗ್ರಹ ನಡೆಸಿದರು.
ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿ ರೈತರು ನಡೆಸಿದ ಪರ್ಯಾಯ ಜನಪರ ಗಣರಾಜ್ಯೋತ್ಸವ ಪೆರೇಡನ್ನು ದಿಕ್ಕು ತಪ್ಪಿಸಲು ನಡೆಸಿದ ಪ್ರಯತ್ನ ಹಾಗು ಹಿಂಸಾಚಾರಕ್ಕೆ ಹೋರಾಟವನ್ನು ದಿಕ್ಕು ತಪ್ಪಿಸುವ ಪ್ರಯತ್ನಗಳನ್ನು ಕೇಂದ್ರ ಬಿಜೆಪಿ ಸರಕಾರ ಹಾಗೂ ಉತ್ತರ ಪ್ರದೇಶದ ಯೋಗಿ ಸರಕಾರ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಹೋರಾಟವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯಲು ರೈತ ಸಂಘಟನೆಗಳು ತೀರ್ಮಾನಿಸಿವೆ.
ರೈತ ಸಂಘಟನೆಗಳ ಅಖಿಲ ಭಾರತ ಸಮನ್ವಯ ಸಮಿತಿಯ ನೇತ್ರತ್ವದಲ್ಲಿ ದೆಹಲಿಯ ಗಡಿಭಗಗಳಲ್ಲಿ ನಡೆಯುವ ಶಾಂತಿಯುತ ಹೋರಾಟದಲ್ಲಿ ಮತ್ತಷ್ಟು ದೊಡ್ಡ ಸಂಖ್ಯೆಯ ಜನರು ಸೇರತೊಡಗಿದ್ದಾರೆ.
ಈ ಹೋರಾಟ ನಿರ್ಣಯಾಕ ಹಂತ ತಲುಪುವುದನ್ನು ತಡೆಯಲು ೨೮ಜನವರಿ ರಾತ್ರಿಯಿಂದ ಪ್ಯಾರಾಮಿಲಿಟರಿ ಶಕ್ತಿಗಳನ್ನು ಬಳಸಿಕೊಂಡು ಒತ್ತಾಯ ಪೂರಕವಾಗಿ ಹೊರಾಟ ನಿರತ ರೈತರನ್ನು ಚದುರಿಸಲು ಸರ್ಕಾರಗಳು ಪ್ರಯತ್ನ ಮಾಡಲು ಪ್ರಾರಂಭಿಸಿದ್ದಾರೆ.
ಈ ಹಿನ್ನಲೆಯಲ್ಲಿ ಮಹಾತ್ಮಾ ಗಾಂಧಿಯವರ ಹುತಾತ್ಮದಿನದಂದು ರಾಷ್ಟ್ರವ್ಯಾಪಿ ಉಪವಾಸ ಸತ್ಯಾಗ್ರಹವನ್ನು* ನಡೆಸಲು ಕರೆ ನೀಡಲಾಗಿದ್ದರಿಂದ ಕೊಪ್ಪಳ ಜಿಲ್ಲೆಯಲ್ಲಿ ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ ಕರ್ನಾಟಕ ಪ್ರಾಂತ ಕೂಲಿಕಾರರರ ಸಂಘ ಹಾಗೂ ಡಿವೈಎ ನೇತೃತ್ವದಲ್ಲಿ ಈ ಸತ್ಯಾಗ್ರಹ ಸಂಘಟಿಸಲಾಗಿತ್ತು.
ಈ ಸತ್ಯಾಗ್ರಹ ವನ್ನು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ ಉದ್ಘಾಟಿಸಿ ಮಾತನಾಡಿ ಕೇಂದ್ರ ಸರಕಾರದ ಜಾರಿಮಾಡುತ್ತಿರುವ ರೈತ ಮತ್ತು ಕಾರ್ಮಿಕ ಕಾನೂನುಗಳಿಂದ ಭವಿಷ್ಯದ ಭಾರತದ ಕರಾಳವಾಗಲಿದೆ ಹೀಗಾಗಿ ಈ ರೈತ ಹಾಗೂ ಕಾರ್ಮಿಕ ನೀತಿಗಳನ್ನು ಹಿಮ್ಮೆಟ್ಟಿಸುವುದು ಇವತ್ತಿನ ಅನಿವಾರ್ಯವಾಗಿದೆ ಹೀಗಾಗಿ ರೈತರು ಕಳಿಸಿ ದಎರಡು ತಿಂಗಳಿAದ ನಡೆಸುತ್ತಿರುವ ಈ ದೇಶಪ್ರೇಮಿ ಹೋರಾಟವನ್ನು ಯಾವುದೇ ಬೆಲೆ ತೆತ್ತಾದರೂ ಯಶಸ್ವಿಗೊಳಿಸುವುದು ಅಗತ್ಯವಿದೆ ಎಂದು ಹೇಳಿದರು.
Àತ್ಯಾಗ್ರಹದಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ನಿರುಪಾದಿ ಬೆಣಕಲ್, ಜಿಲ್ಲಾ ಕಾರ್ಯದರ್ಶಿ ಕಾಶಿಂ ಸರದಾರ ಸತ್ಯಗ್ರಹದಲ್ಲಿ ಭಾಗವಹಸಿದ್ದವರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಸುಂಕಪ್ಪ ಗದಗ ಫಕೀರಮ್ಮ ಶೀಪ್ರಿ ಅಂಗನವಾಡಿ ನೌಕರರು ಸಾವಿತ್ರಿ ಜೋಷಿ ದುರ್ಗಮ್ಮ ಬಿಸಿಯೂಟ ಸಂಘ ರಾಜ್ಯ ಅಧ್ಯಕ್ಷರು ಲಕ್ಷ್ಮಿ ಸೋನಾರೆ ಶಿವನ ಗೌಡ ಆಙಈI ಹುಲುಗಪ್ಪ ಗೋಕಾವಿ ಹುಸೇನಸಾಬ ನದಾಫ ಕಟ್ಟಡ ಕಾರ್ಮಿಕರು ಉಮೇಶ್ ಹನುಮೇಶ ಸುರೆಶ ರಮೇಶ್ ಭೋವಿ ರಂಗಪ್ಪ ಶರಣಪ್ಪ ಅಬ್ದುಲ್ ರಜಾಕ್ ಮಂಜುನಾಥ ಡಗ್ಗಿ ಖಾಲಿಚೀಲ ಸಂಘ ಟಿ ನಬಿಸಾಬ ಮದರ್ ನಿಂಗಪ್ಪ ಮತ್ತಿತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker