Belagavi

ಮಾವನೂರ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಶೋಭಾ ಗುಡಗನಟ್ಟಿ ಉಪಾಧ್ಯಕ್ಷರಾಗಿ ತೋಶಿ ಅವಿರೋಧ ಆಯ್ಕೆ


ಯಮಕನಮರಡಿ : ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಹುಕ್ಕೇರಿ ತಾಲೂಕಿನ ಮಾವನೂರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಶೋಭಾ ಶಿವಕುಮಾರ ಗುಡಗನಟ್ಟಿ ಉಪಾಧ್ಯಕ್ಷರಾಗಿ ವಿಜಯಲಕ್ಷಿ ತೋಶಿ ಇವರು ಅವಿರೋಧ ಆಯ್ಕೆಗೊಂಡಿದ್ದಾರೆ. ಗ್ರಾಮದಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆಯಾದ ಸುದ್ದಿ ತಿಳಿಯುತ್ತೀದ್ದಂತೆ ಕಾಂಗ್ರೇಸ್ ಕಾರ್ಯಕರ್ತರು ಪರಸ್ಪರ ಗುಲಾಲ ಏರಚಿ, ಪಟಾಕ್ಷೀ ಸಿಡಿಸಿ ವಿಜಯೋತ್ಸವ ಆಚರಿಸಿದರು. ಕಾಂಗ್ರೇಸ್ ಮುಖಂಡ ಶಿವಕುಮಾರ ಗುಡಗನಟ್ಟಿ ಮಾತನಾಡಿ ಶಾಸಕ ಸತೀಶ ಜಾರಕಿಹೊಳಿ ಅವರು ಅಂಕಲಗುಡಿಕ್ಷೇತ್ರ ಗ್ರಾಮದ ಅಭಿವೃದ್ದಿಗಾಗಿ ಪಕ್ಷಭೇದ ಮರೆತು ಅನುದಾನ ಬಿಡುಗಡೆ ಮಾಡಿದ್ದರಿಂದ ಶಾಸಕರ ಅಭಿವೃದ್ದಿ ಕಾರ್ಯಗಳನ್ನು ನೋಡಿ ಗ್ರಾಮದ ಯುವಕರು ಮುಖಂಡರು, ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದರು. ಮಾವನೂರ, ಅಂಕಲಗುಡಿಕ್ಷೇತ್ರ ಪರಕನಹಟ್ಟಿ ಗ್ರಾಮಗಳ ಸವಾಂಗೀಣ ಅಭಿವೃದ್ದಿಗಾಗಿ ದುಡಿಯಲು ನೂತನ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸದಸ್ಯರು ಸನ್ನದ್ದರಾಗುತ್ತಾರೆ. ಒಟ್ಟಾರೆಯಾಗಿ ಮಾವನೂರ ಗ್ರಾಮ ಪಂಚಾಯತಿಯನ್ನು ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡುತ್ತೇವೆ ಎಂದು ಹೇಳಿದರು. ಅಡಿವೆಪ್ಪಾ ನಾಯಿಕ ಮಾತನಾಡಿ ಮಾವನೂರ ಗ್ರಾಮ ಪಂಚಾಯತಿಯು ಹಲವಾರು ವರ್ಷಗಳಿಂದ ಕೇಲವರ ಕಪಿ ಮುಷ್ಟಿಯಲ್ಲಿತ್ತು ಈಗ ಶಾಸಕರ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಜನ ಸಾಮಾನ್ಯರು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದು ಹೇಳಿದರು. ಮಾವನೂರ ಗ್ರಾಮದ ಮುಖಂಡರಾದ ಸತ್ತೆಪ್ಪಾ ಲಠ್ಠೆ ಮಾತನಾಡಿದರು.
ಈ ಸಂದರ್ಭದಲ್ಲಿ ಆಡಳಿತ ಅಧಿಕಾರಿ ಅರವಿಂದ ಜಮಖಂಡಿ, ಚುನಾವಣಾ ಅಧಿಕಾರಿ ಪಿ.ಎಚ್.ಗಂಗನ್ನವರ, ಪಿ.ಡಿ.ಓ ಚಂದ್ರು ಗುಡದರಿ ಹಾಗೂ ಗಣ್ಯರಾದ ಪಾಂಡು ಮನ್ನಿಕೇರಿ ಮಾರುತಿ ಗುಟಗುದ್ದಿ, ವಿನೋದ ಡೊಂಗ್ರೆ, ಯಲ್ಲಪ್ಪ ರಾಮಪ್ಪ ನಾಯಿಕ, ಶಿವಪ್ಪ ಈರನಟ್ಟಿ, ಸಿದ್ದಪ್ಪ ನಿ ಶಿರೂರ, ಸಂಜು ಹುಕ್ಕೇರಿ, ಅಣ್ಣಪ್ಪ ಸಿದ್ದಗೌಡ ಪಾಟೀಲ, ಷನ್ಮುಖ ಶಿಗಿಹೋಳಿ, ಬುದಪ್ಪ ನಂದಗಾAವಿ, ಕೆಂಪಣ್ಣಾ ಖಾನಾಪೂರಿ, ಬಸವರಾಜ ಘೋಡಗೇರಿ, ಬಾಳಪ್ಪಾ ಓಂಕಾರ, ಬಾಳಪ್ಪ ಹರಿಜನ, ನಿರಂಜನ ಶಿರೂರ, ಸಂತೋಷ ಶಿರೂರ, ಕೆಂಪಣ್ಣಾ ನಾಯಿಕ, ರಾಜು ಹೆಬ್ಬಾಳ, ಚಂದ್ರು ಹೆಬ್ಬಾಳ, ಬಾಳಪ್ಪ ಚೌಗಲಾ ಹಾಗೂ ಮೂರು ಗ್ರಾಮಗಳ ಸಮಸ್ತ ಕಾಂಗ್ರೇಸ್ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.


Leave a Reply