Belagavi

ಫೆ.೧ ಮತ್ತು ೨ ರಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ


ಕೊಪ್ಪಳ, ಜ.೩೦: ಕೊಪ್ಪಳ ಜೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ದುರಸ್ಥಿ ಕಾರ್ಯ ಇರುವುದರಿಂದ ಫೆ.೦೧ ಮತ್ತು ೨ ರಂದು ಕೊಪ್ಪಳ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಫೆ.೦೧ ರಂದು ೩೩/೧೧ ಕೆ.ವಿ. ಸಿಂದೋಗಿ ಸ್ಟೇಷನ್ನಲ್ಲಿ ತುರ್ತು ಕೆಲಸ ನಡೆಸುತ್ತಿರುವ ಪ್ರಯುಕ್ತ ಎಫ್-೧ ಮೈನಳ್ಳಿ, ಎಫ್-೩ ಎಂ.ಐ.(ಗೊAಡಬಾಳ) ಮತ್ತು ಎಫ್-೫ ಫೀಡರ್‌ಗೆ ಒಳಪಡುವ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೦೫ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಫೆ.೦೨ ರಂದು ಭಾಗ್ಯನಗರ ಫೀಡರ್‌ಗೆ ಒಳಪಡುವ ತುರ್ತು ಕಾಮಗಾರಿ ಪ್ರಯುಕ್ತ ಫೀಡರ್ ವ್ಯಾಪ್ತಿಯ ಕಿನ್ನಾಳ ರಸ್ತೆ, ಕಲ್ಯಾಣ ನಗರ, ಟೀಚರ್ಸ್ ಕಾಲೋನಿ, ಚನ್ನಬಸವ ನಗರ, ರಾಮಚಂದ್ರ ರಾವ್ ಪೊಲೀಸ್ ಕಾಲೋನಿ, ಗಣೇಶ ತೆಗ್ಗು, ಪ್ರಗತಿ ನಗರ, ಶಾಸ್ತಿç ಕಾಲೋನಿ, ಹಳೆ ಭಾಗ್ಯನಗರ, ಯತ್ನಟ್ಟಿ, ಹುಚ್ಚಿರೇಶ್ವರ ಕ್ಯಾಂಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ ೦೯ ಗಂಟೆಯಿAದ ಸಂಜೆ ೦೪ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕು.
ವಿದ್ಯುತ್ ದುರಸ್ಥಿ ಕಾರ್ಯ ಬೇಗನೆ ಮುಗಿದಲ್ಲಿ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್ ದುರಸ್ಥಿ ಕಾರ್ಯಗಳಲ್ಲಿ ತೊಡಗಬಾರದು. ಒಂದು ವೇಳೆ ವಿದ್ಯುತ್ ಅವಘಡ ಸಂಭವಿಸಿದಲ್ಲಿ ಅದಕ್ಕೆ ಕಂಪನಿಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಕೊಪ್ಪಳ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply