vijayapur

ನಗರದಲ್ಲಿ ಹುತಾತ್ಮರ ದಿನ ಆಚರಣೆ ಜಿಲ್ಲಾಧಿಕಾರಿಗಳು ಗಣ್ಯರಿಂದ ಹುತಾತ್ಮರ ಸ್ಮರಣೆ – ಸ್ಮಾರಕಕ್ಕೆ ಗೌರವ ಅರ್ಪಣೆ


ವಿಜಯಪುರ.ಜ.೩೦: ರಾಷ್ಟçಪಿತ ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿ ಅಂಗವಾಗಿ ಜಿಲ್ಲಾಡಳಿತದವತಿಯಿಂದ ಇಂದು ಹುತಾತ್ಮರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಾನಗರ ಪಾಲಿಕೆ, ಭಾರತ ಸೇವಾ ದಳ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ನೆಹರು ಯುವಕೇಂದ್ರದ ವತಿಯಿಂದ ನಗರದ ಹುತಾತ್ಮ ಚೌಕ್‌ದಲ್ಲಿ ಹುತಾತ್ಮರ ದಿನಾಚರಣೆ, ಸರ್ವಧರ್ಮ ಪ್ರಾರ್ಥನೆ, ಭಕ್ತಿಭಾವದಿಂದ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಗಣ್ಯರು ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೀನಾಕ್ಷಿ ಚೌಕ್‌ದಲ್ಲಿನ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಅರ್ಪಣೆ ಮಾಡಿದರು.
ಹುತಾತ್ಮರ ಸ್ಮರಣಾರ್ಥ ಎರಡು ನಿಮಿಷ ಮೌನ ಆಚರಿಸಿ, ಗೌರವ ಸಲ್ಲಿಸಲಾಯಿತು. ಭಾರತ ಸೇವಾ ದಳ ಜಿಲ್ಲಾ ಸಮಿತಿಯ ಶ್ರೀ ನಾಗೇಶ ಡೋಣೂರ, ಎಸ್.ಎಲ್ ರಾಠೋಡ ಸಂಗಡಿಗರು ಸರ್ವಧರ್ಮ ಪ್ರಾರ್ಥನೆ ಸಲ್ಲಿಸಿದರು. ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ, ವೈಷ್ಣವ ಜನತೋ ಹಾಗೂ ಓಂ ಅಸತೋಮಾ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಪ್ರಾರ್ಥನೆಗಳ ಮೂಲಕ ಹುತಾತ್ಮರ ಸ್ಮರಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಹುತಾತ್ಮರ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದ ಬಾಲಕರ ಸರ್ಕಾರಿ ಪ.ಪೂ ಕಾಲೇಜಿನ ವಿದ್ಯಾರ್ಥಿ ಕುಮಾರ ಕಾಳೆ ಅವರು, ಮಹಾತ್ಮಾ ಗಾಂಧಿಜೀಯವರ ಪುಣ್ಯತಿಥಿ ಅಂಗವಾಗಿ ಇಂದು ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ. ಮಹಾತ್ಮಾ ಗಾಂಧೀಜಿಯವರು ಅಹಿಂಸೆ ಮತ್ತು ಶಾಂತಿ ಮಂತ್ರದ ಮೂಲಕ ಹೋರಾಟ ನಡೆಸಿ, ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸಿ ಸ್ವಾತಂತ್ರö್ಯ ಗಳಿಸಿ ಕೊಟ್ಟಿದ್ದಾರೆ. ಗಾಂಧೀಜಿ ಅವರು ಸೇರಿದಂತೆ ಭಾರತದ ವೀರ ಭಗತ್‌ಸಿಂಗ್, ಕಿತ್ತೂರ ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಸೇರಿದಂತೆ ಹಲವಾರು ವೀರರು ತ್ಯಾಗ ಬಲಿದಾನ ಮಾಡಿ ಸ್ವಾತಂತ್ರö್ಯವನ್ನು ದೊರಕಿಸಿ ಕೊಟ್ಟಿದ್ದು, ಅವರೆಲ್ಲರನ್ನು ಈ ಸಂದರ್ಭದಲ್ಲಿ ಸ್ಮರಿಸುವುದಾಗಿ ತಿಳಿಸಿದರು.ಬಾಲಕಿಯರ ಸರ್ಕಾರಿ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಕು.ಗೌರಮ್ಮ ಹಿರೇಮಠ ಅವರು ಮಾತನಾಡಿ ದೇಶಕ್ಕಾಗಿ ತ್ಯಾಗ ಮಾಡಿದ ವೀರ ಭಗತ್‌ಸಿಂಗ್ ಅವರ ಅಭಿಪ್ರಾಯದಂತೆ ಯುವಕರು ದೇಶದ ಚುಕ್ಕಾಣಿ ಹಿಡಿಯುವ ಜೊತೆಗೆ ಆರ್ಥಿಕ ಪರಿಸ್ಥಿತಿ ಮತ್ತು ಇತರೆ ಸಮಸ್ಯೆಗಳ ನಿವಾರಣೆ ಮತ್ತು ಪರಿಹಾರದ ಜ್ಞಾನ ಹೊಂದಬೇಕು. ಜ್ಞಾನವಂತ ಶಿಕ್ಷಕರು ಮತ್ತು ವಿದ್ಯಾರ್ಥಿಗಳಾಗಬೇಕು. ಮಾನವನಿಂದ ಮಾನವರ ಮೇಲೆ ಶೋಷಣೆ ತಡೆಯುವ ಬಗ್ಗೆ ಕ್ರಾಂತಿ ಸಂದೇಶಗಳನ್ನು ಈ ದೇಶದಲ್ಲಿ ಮೂಲೆ ಮೂಲೆಗೂ ಹಬ್ಬಿಸಿದ್ದರು.
ನೇತಾಜಿ ಸುಭಾಸ್ ಚಂದ್ರ ಬೋಸ್‌ರಂತಹ ಮಹಾನ್ ನಾಯಕರು ಬಡವರನ್ನು ಕಂಡು ಮರಗುತ್ತಿದ್ದರು. ಅಂತಹ ಕಳಕಳಿ, ಜ್ಞಾನ, ಜ್ಞಾನವುಳ್ಳವರು ಅನ್ಯಾಯದ ವಿರುದ್ಧ ಹೋರಾಡಬೇಕು. ಅನ್ಯಾಯದ ವಿರುದ್ಧ ಹೋರಾಡದವರು ಅದಕ್ಕಿಂತಲೂ ದೊಡ್ಡ ಅಪರಾಧಿಗಳು ಎಂಬ ಅಮೂಲ್ಯವಾದ ಘೋಷವಾಕ್ಯಗಳ ಉದಾಹರಣೆ ನೀಡಿ ಮಹಾತ್ಮಾ ಗಾಂಧೀಜಿಯವರು ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ ಸೇರಿದಂತೆ ಅನೇಕ ಚಳವಳಿಗಳ ಮೂಲಕ ಸಮಾನತೆ ಸಾರಿದರು. ತಮ್ಮ ಪ್ರಾಣ ದೇಶಕ್ಕಾಗಿ ಪಣಕ್ಕಿಟ್ಟು ಭಾರತಕ್ಕೆ ಸಂಪೂರ್ಣ ಸ್ವಾತಂತ್ರö್ಯವನ್ನು ಗಳಿಸಿಕೊಟ್ಟರು. ಇಂತಹ ಮಹಾನ್ ಹುತಾತ್ಮರನ್ನು ಇಂದಿನ ಮಹತ್ವದ ದಿನದಂದು ಸ್ಮರಿಸುವುದಾಗಿ ಹೇಳಿದರು.
ನಂತರ ಪಾದಯಾತ್ರೆಯ ಮೂಲಕ ತೆರಳಿ ಜಿಲ್ಲಾಧಿಕಾರಿಗಳು ಹಾಗೂ ಗಣ್ಯರು ನಗರದ ಮಹಾತ್ಮಾ ಗಾಂಧೀ ವೃತ್ತದಲ್ಲಿ ಮಹಾತ್ಮಾ ಗಾಂಧೀಜಿ ಮೂರ್ತಿಗೆ ಮಾಲಾರ್ಪಣೆ ಮಾಡಿ, ಗೌರವ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಉಪವಿಭಾಗಾಧಿಕಾರಿ ರಾಮಚಂದ್ರ ಗಢಾದೆ, ವಿಜಯಪುರ ತಹಶೀಲ್ದಾರ ಶ್ರೀಮತಿ ಮೋಹನಕುಮಾರಿ, ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ರಾಹುಲ ಡೆಂಗ್ರೆ, ಡಿಎಸ್ಪಿ ಲಕ್ಷಿö್ಮÃ ನಾರಾಯಣ, ಭಾರತ ಸೇವಾ ದಳದ ಜಿಲ್ಲಾ ಮುಖ್ಯಸ್ಥ ಎಸ್.ಪಿ ಬಿರಾದಾರ, ವಿದ್ಯಾವತಿ ಅಂಕಲಗಿ, ಅಬ್ದುಲ್ ರಜಾಕ್ ಲೋಣಿ, ಪೀಟರ್ ಅಲೆಕ್ಸಾಂಡರ್ ಸೇರಿದಂತೆ ಇತರರು ಉಪಸ್ಥಿತರಿದ್ದು, ಗೌರವಾರ್ಪಣೆ ಮಾಡಿದರು.


Leave a Reply