Belagavi

ಫ್ರೌಢಶಾಲಾ ಮಕ್ಕಳಿಗೆ ಗ್ರಾಹಕರ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಜಾಗೃತಿ ಕಾರ್ಯಕ್ರಮ.


ಹುಕ್ಕೇರಿ:- ಫ್ರೌಢಶಾಲಾ ಮಕ್ಕಳಿಗೆ ಗ್ರಾಹಕರ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು,ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಳಗಾವಿ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.

1.ಸೋಮವಾರ ದಿನಾಂಕ 01 ರಂದು ಹುಕ್ಕೇರಿ ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಯರಗಟ್ಟಿ ಮತ್ತು ಸರ್ಕಾರಿ ಫ್ರೌಢಶಾಲೆ ಬಸ್ತವಾಡ,
2.ಮಂಗಳವಾರ ದಿನಾಂಕ 02 ರಂದು ಅಕ್ಕಪ ನಾಯಿಕ ಫ್ರೌಢಶಾಲೆ ಹೊಸುರ,
3. ಬುಧವಾರ ದಿನಾಂಕ 03-ರಂದು ಸರ್ಕಾರಿ ಫ್ರೌಢಶಾಲೆ ಕರಗುಪ್ಪಿ,
4.ಗುರುವಾರ ದಿನಾಂಕ 04 ರಂದು ಎನ್.ಎಸ್,ಎಫ್. ಫ್ರೌಢಶಾಲೆ ಹತ್ತರಗಿ,
5. ಶುಕ್ರವಾರ ದಿನಾಂಕ 05 ರಂದು ಗೋಕಾಕ ತಾಲೂಕಿನ ಎಂ.ಬಿ.ಹೊನಾಜ ಫ್ರೌಢಶಾಲೆ ಕುಂದರಗಿ,ಹಾಗೂ
6.ಶನಿವಾರ ದಿನಾಂಕ 06 ರಂದು ಸರ್ಕಾರಿ ಫ್ರೌಢಶಾಲೆ ಕೇಸ್ತಿ.
ಆರು ಗ್ರಾಮಗಳಲ್ಲಿ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ.ಎಂ.ಎಂ.ಗಡಗಲಿ ಸಂಯೋಜಕರು ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Leave a Reply