Uncategorized

ಶನಿ ಗ್ರಹದ ಪ್ರಾಮುಖ್ಯತೆ


ಶನಿವಾರದಂದು ಶನಿ ಗ್ರಹದ ಬಗ್ಗೆ  ತಿಳಿಯೋಣ           : ಶನಿ ಮಂದಗತಿಯಲ್ಲಿ ಚಲಿಸುವ ಗ್ರಹ ,ಪ್ರತಿಯೊಬ್ಬರ ಜೀವನದಲ್ಲಿ ಸಾಡೇಸಾತಿ ನಡೆದೇ ನಡೆಯುತ್ತದೆ .ತಂದೆಯ ಸ್ಥಾನದಲ್ಲಿ ನಿಂತು ಜೀವನದಲ್ಲಿ ದಾರಿತೋರಿಸುವ ಏಕೈಕ ದೇವರು ಎಂದರೆ ಅದು ಶನಿದೇವ .ಬಾಲ್ಯ ಯವ್ವನ ಮುಪ್ಪು ಹೀಗೆ ಮೂರು ಭಾಗದಲ್ಲಿ ಬರುತ್ತಾರೆ, ಶನಿದೇವರು ಆಧ್ಯಾತ್ಮ ಸಾಧನೆ ಮಾಡಬೇಕೆಂದರೆ ಶನಿದೇವರ ಅನುಗ್ರಹ ಇರಲೇಬೇಕು. ಶನಿದೇವ ಆತ್ಮಕಾರಕ ,ದೇವರು ಇದ್ದಾರೆ ಅಂತ ಪರಿಚಯಿಸುವುದೇ ಶನಿ ದೇವರು. ಹಿರಿಯರನ್ನು ಪ್ರತಿನಿಧಿಸುತ್ತಾರೆ , ಹಿರಿಯರನ್ನು ಗೌರವಿಸುವುದು ಪ್ರಥಮ ಆದ್ಯತೆ .ಸೂರ್ಯ ತಂದೆ ,ಚಂದ್ರ ತಾಯಿ, ಮಂಗಳ ಅಣ್ಣ-ತಮ್ಮಂದಿರನ್ನು, ಬುಧ ಪ್ರಜ್ಞ, ಗುರು ಪುತ್ರ ,ಶುಕ್ರ ಕಳತ್ರ ,ಶನಿ ಆಯುಷ್ಯ ,ರಾಹು ಮಾತಾಮಹಿ ,ಕೇತು ಪಿತಮಹ, ಹೀಗೆ ಪ್ರತಿನಿಧಿಸುತ್ತದೆ. ಶನಿ ದೇವರು ಕರ್ಮ ದಾತ, ಕರ್ಮಕ್ಕೆ ತಕ್ಕಂತೆ ಫಲವನ್ನು ಕೊಟ್ಟೆ ಕೊಡುತ್ತಾರೆ. ಪಿತೃ ದೇವತೆಗಳ ಕಾರ್ಯವನ್ನು ಮಾಡಿದರೆ ಶನಿದೇವ ಸಂತುಷ್ಟ ಹೊಂದುತ್ತಾರೆ. ಶನಿ ದೇವರ ಆಶೀರ್ವಾದ ಪಡೆದರೆ ಅವರು ಉನ್ನತ ಸ್ಥಾನಕ್ಕೆ ಬರುವುದರಲ್ಲಿ ಯಾವುದೇ ಸಂದೇಹ ಸಂಶಯಗಳಿಲ್ಲ. ಸಾಡೇಸಾತಿಯಲ್ಲಿ ಎಷ್ಟೇ ಕಷ್ಟ ಬರಲಿ ಅದನ್ನು ಅನುಭವಿಸಿ ಕೊನೆಯಲ್ಲಿ ನಿಮಗೆ ಒಳ್ಳೆಯದನ್ನೇ ಮಾಡುತ್ತಾರೆ ಶನಿ ದೇವರು. ದಾನ ,ಧರ್ಮ, ಕರ್ಮ, ನಿತ್ಯ ಅನುಷ್ಠಾನ, ವೈದಿಕ, ಪರಿಹಾರಗಳು ಹೀಗೆ ನಾನಾ ರೀತಿಯಲ್ಲಿ ಕರ್ಮಗಳನ್ನು ಮಾಡುತ್ತಿದ್ದರೆ ಶನಿದೇವರ ಆಶೀರ್ವಾದ ಪಡೆಯಬಹುದು. ಶನಿಶ್ಚರ ಅಷ್ಟೋತ್ತರವನ್ನು ಪಠಿಸಿ ಹಾಗೂ ದೇವಸ್ಥಾನಕ್ಕೆ ಹೋಗಿ ಒಳ್ಳೆಯದಾಗುತ್ತದೆ.

ಓಂಶನೀಶ್ವರಾಯ ನಮಃ.


Leave a Reply