bagalkotBallaryBelagavibidarGadaggulburgakarwar uttar kannadaKoppalStatevijayapur

ಕನ್ನಡ ಕಲಿಸಿ ,ಕನ್ನಡ ಬಳಸಿ,ಕನ್ನಡ ಬೆಳೆಸಿ ಕರ್ನಾಟಕ ಉಳಿಸಿ ; ಡಾ. ಪ್ರಭಾಕರ್ ಕೋರೆ


ಕಾಗವಾಡ : ಮಕ್ಕಳಿಗೆ ಕನ್ನಡವನ್ನು ಕಲಿಸಿ , ಮನೆಯಲ್ಲಿ ಕನ್ನಡವನ್ನೇ ಬಳಸಿ ವ್ಯವಹಾರದಲ್ಲಿಯೂ ಕನ್ನಡವನ್ನು ಬಳಸುವ ಮೂಲಕ ಕನ್ನಡ ಭಾಷೆಯನ್ನು ಬೆಳೆಸಬೇಕು ಆಗ ಮಾತ್ರ ಕನ್ನಡ ಭಾಷೆ ಉಳಿಯುತ್ತದೆ ,ಕನ್ನಡ ಭಾಷೆ ಉಳಿದರೆ ಮಾತ್ರ ಕರ್ನಾಟಕ ಉಳಿಯುತ್ತದೆ ಎಂದು ಬೆಳಗಾವಿ ಜಿಲ್ಲಾ ೧೪ ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು .
ಕಾಗವಾಡದಲ್ಲಿ ಇಂದು ಬೆಳಗಾವಿ ಜಿಲ್ಲಾ ೧೪ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡುತ್ತಿದ್ದರು .
ನಾವಿಂದು ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸಲು ತಯಾರಿಲ್ಲ ಕನ್ನಡ ಕಲಿತವರಿಗೆ ಉದ್ಯೋಗವಿಲ್ಲ ದ ಸ್ಥಿತಿ ಇಂಗ್ಲಿಷ್ ಕಲಿತವರಿಗೆ ಉನ್ನತ ಸ್ಥಾನಗಳು ಲಭಿಸುತ್ತಿವೆ ಹೀಗಾದರೆ ಕನ್ನಡ ಉಳಿಯುವುದು ಹೇಗೆ ಎಂದು ಪ್ರಶ್ನಿಸಿದ ಸರ್ವಾಧ್ಯಕ್ಷರು ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ 50% ಮೆಡಿಕಲ್ ಮತ್ತು ಇಂಜಿನಿಯರಿಂಗ್ ಸೀಟ್ ಗಳನ್ನು ಮೀಸಲಿಡುವ ಕಾರ್ಯವನ್ನು ಸರ್ಕಾರ ಮಾಡಬೇಕು ಆಗ ಕನ್ನಡ ಶಾಲೆಗಳಿಗೆ ಜನ ತಾನಾಗಿಯೇ ಬರುತ್ತಾರೆ .ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು .
ಅಷ್ಟೇ ಅಲ್ಲ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿಗಳನ್ನು ಸರಕಾರ ಉತ್ತಮಪಡಿಸಬೇಕು ,ಕನ್ನಡ ಶಾಲೆಗಳಲ್ಲಿ ಪ್ರಾಥಮಿಕ ಸೌಲಭ್ಯಗಳನ್ನು ಮೂಲಭೂತ ಸೌಕರ್ಯಗಳನ್ನು ನೀಡಬೇಕು ಗಡಿಭಾಗದ ಕನ್ನಡ ಶಾಲೆಗಳ ಸ್ಥಿತಿ ಗಳಂತೂ ಅವ್ಯವಸ್ಥೆಯ ಆಗರವಾದ ಆದಂತಾಗಿದೆ ಕೆಲವು ಕನ್ನಡ ಶಾಲೆಗಳ ಸ್ಥಿತಿಗತಿ ಗಳಂತೂ ಕನ್ನಡಿಗರಲ್ಲಿ ಮುಜುಗರ ಮೂಡಿಸುವಂತ ಸ್ಥಿತಿಗೆ ಬಂದಿವೆ ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ಮಾಡಬೇಕು ,ಕನ್ನಡ ಶಾಲೆಗಳಿಗೆ ಎಲ್ಲ ರೀತಿಯ ಸೌಕರ್ಯಗಳು ಸೌಲಭ್ಯಗಳು ಸಿಗುವಂತಾಗಬೇಕು .
ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಏನೆಲ್ಲ ನಡೆಯುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಭಾಕರ ಕೋರೆ ಅವರು ಕನ್ನಡದಲ್ಲಿ ಶಿಕ್ಷಣವನ್ನು ಪಡೆದವರಿಗೆ ಮಾತ್ರ ಸರಕಾರಿ ನೌಕರಿ ಎಂಬ ನಿಯಮ ಜಾರಿಗೆ ಬಂದಾಗ ಮಾತ್ರ ಕನ್ನಡಕ್ಕೆ ಬೇಡಿಕೆ ಬರುತ್ತದೆ ಕನ್ನಡ ಶಾಲೆಗಳಿಗೆ ಮಕ್ಕಳು ಬರುತ್ತಾರೆ ಎಂದರು .
ಉತ್ತಮ ಗುಣಮಟ್ಟದ ಶಿಕ್ಷಕರು ಬೇಕು ,ಉತ್ತಮ ಗುಣಮಟ್ಟದ ಶಾಲಾ ಕಟ್ಟಡಗಳು ,ಉತ್ತಮ ಗುಣಮಟ್ಟದ ಶಾಲಾ ಆವರಣಗಳು ಬೇಕು ,ಉತ್ತಮ ಗುಣಮಟ್ಟದ ಪೀಠೋಪಕರಣಗಳು ಮತ್ತು ಪಾಠೋಪಕರಣಗಳು ಬೇಕು ಪ್ರಾಮಾಣಿಕ ಮತ್ತು ಮತುವರ್ಜಿಯಿಂದ ಕೆಲಸ ಮಾಡುವ ಶಿಕ್ಷಕ ಸಿಬ್ಬಂದಿ ಬೇಕು ಅಂದಾಗ ಮಾತ್ರ ಸರಕಾರಿ ಶಾಲೆಗಳಿಗೆ ಕನ್ನಡ ಶಾಲೆಗಳಿಗೆ ಮಕ್ಕಳು ಬರುತ್ತಾರೆ ಅವರನ್ನು ಕರೆತರುವ ಕಾರ್ಯವನ್ನು ಸರಕಾರ ಮಾಡಬೇಕಿದೆ ಎಂದರು .
ಎಷ್ಟೇ ಕಡಿಮೆ ವಿದ್ಯಾರ್ಥಿಗಳಿದ್ದರೂ ಕನ್ನಡ ಶಾಲೆಗಳನ್ನು ಮುಚ್ಚಬೇಡಿ ಕನ್ನಡ ಶಾಲೆಗೆ ಮಕ್ಕಳು ಏಕೆ ಬರುತ್ತಿಲ್ಲ ಎಂಬುದನ್ನು ತಿಳಿದುಕೊಂಡು ಶಾಲೆಯ ಸುಧಾರಣೆಗೆ ಪ್ರಯತ್ನಿಸಬೇಕು ಎಂದ ಅವರು ಇತ್ತೀಚೆಗೆ ಕನ್ನಡ ಶಾಲೆಗಳನ್ನು ಶಾಸಕರು ಸಚಿವರು ದತ್ತು ತೆಗೆದುಕೊಳುತ್ತಿರುವುದು ಅಭಿನಂದನೀಯವಾಗಿದೆ ಎಂದರು .
ನಾವು ಅಕ್ಕಪಕ್ಕದ ಭಾಷೆ ಕಲಿಯಬೇಕು ಕಾಗವಾಡದಲ್ಲಿ ಯು 2ಭಾಷೆಗಳ ಮಧ್ಯೆ ಸೌಹಾರ್ದತೆ ಇದೆ ಎಲ್ಲ ಭಾಷಿಕರು ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ .1ಭಾಷೆಯ ಮೇಲೆ ಮತ್ತೊಂದು ಭಾಷೆಯನ್ನು ತಂದುಬಿಟ್ಟರೆ ಮೊದಲಿದ್ದ ಭಾಷೆ ನಾಶವಾಗುತ್ತದೆ ಆಂಗ್ಲರು ನಮ್ಮಲ್ಲಿ ಇಂಗ್ಲಿಷ್ ಭಾಷೆಯನ್ನು ತಂದರು ಅದರ ಪರಿಣಾಮ ಪ್ರಾದೇಶಿಕ ಭಾಷೆಗಳು ಮತ್ತು ಸಂಸ್ಕೃತಿ ಎಲ್ಲವೂ ಹಾಳಾದವು ಕರ್ನಾಟಕ ಮತ್ತು ಕನ್ನಡ ಭಾಷೆ ಕೂಡ ಇದಕ್ಕೆ ಹೊರತಲ್ಲ ಇಂಗ್ಲಿಷ್ ಭಾಷೆಯ ಪ್ರಭಾವದಿಂದ ಕನ್ನಡಕ್ಕೆ ಕುತ್ತು ಬಂದಿದೆ ಕನ್ನಡ ಭಾಷೆ ಅವಸಾನದತ್ತ ಸಾಗುತ್ತಿದೆ ಅದನ್ನು ನಾವು ತಡೆಯಲೇಬೇಕು ಎಂದು ಸರ್ವಾಧ್ಯಕ್ಷರು ನುಡಿದರು .
ಗಡಿಯಲ್ಲಿ ಕನ್ನಡ ಮರಾಠಿ ಬಾಂಧವರ ಸಂಬಂಧಗಳನ್ನು ಬೆಸೆಯುವಲ್ಲಿ ಸಾಂಸ್ಕೃತಿಕ ಸಾಮರಸ್ಯಕ್ಕೆ ಹೊಸ ಭಾಷ್ಯ ವನ್ನು ಬರೆಯುವಲ್ಲಿ ಕನ್ನಡಿಗರ ಸಾಹಿತ್ಯ ಸಾಧನೆಯನ್ನು ಇತರರಿಗೆ ಪರಿಚಯಿಸುವಲ್ಲಿ ಇಂತಹ ಸಾಹಿತ್ಯ ಸಮ್ಮೇಳನಗಳು ಪೂರಕವಾಗಿ ನಿಲ್ಲುತ್ತವೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರ ಅವಧಿಯಲ್ಲಿ ಬೆಳಗಾವಿ ಜಿಲ್ಲೆ ಅತಿ ಹೆಚ್ಚು ಸಾಹಿತ್ಯ ಸಮ್ಮೇಳನಗಳನ್ನು ಕಂಡಿತು ೪ ಜಿಲ್ಲಾ ಸಮ್ಮೇಳನಗಳು ಸೇರಿದಂತೆ ಒಟ್ಟು ಮೂವತ್ತೇಳು ಸಮ್ಮೇಳನಗಳನ್ನು ಅವರ ಅವಧಿಯಲ್ಲಿ ನಡೆಸಲಾಯಿತು .ಸಕ್ಕರೆ ಜಿಲ್ಲೆ ಕುಂದಾನಗರಿ ಸಾಂಸ್ಕೃತಿಕ ಸಂಗಮ ಕೇಂದ್ರ ಗಂಡುಮೆಟ್ಟಿನ ನಾಡೆಂಬ ವಿವಿಧ ಹೆಸರುಗಳಿಂದ ಖ್ಯಾತಿ ಹೊಂದಿದ ಬೆಳಗಾವಿ ಜಿಲ್ಲೆಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಸರ್ವಸ್ವವನ್ನೂ ಧಾರೆಯೆರೆದ ಮಹಾದಾನಿ ಶಿರಸಂಗಿ ಲಿಂಗರಾಜರು ರಾಜಾಲಖಮಗೌಡರು ಅರಟಾಳ ರುದ್ರಗೌಡರು ಶಿ ಶಿ ಬಸವನಾಳರು ಡೆಪ್ಯುಟಿ ಚನ್ನಬಸಪ್ಪನವರ ಗಿಲಗಂಚಿ ಗುರುಸಿದ್ದಪ್ಪನವರು ವೈಜಪ್ಪ ಚಚಡಿಯ ವಿಜಿ ದೇಸಾಯಿಯವರು ರ್ಯಾಂಗ್ಲರ್ ಡಿ ಸಿ ಪಾವಟೆ ಮುಂತಾದವರನ್ನು ನೆನಪಿಸಿಕೊಂಡ ಪ್ರಭಾಕರ ಕೋರೆ ಅವರು ಬೆಳಗಾವಿಯಲ್ಲಿ ಕೆಎಲ್ ಇ ಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ಗಡಿನಾಡಿನಲ್ಲಿ ಕನ್ನಡದ ಬೀಜವನ್ನು ಬಿತ್ತಿ ನಾಡು ನುಡಿಗಳ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ಸಪ್ತರ್ಷಿಗಳನ್ನು ಕನ್ನಡಕ್ಕೆ ನೆಲೆ ಹಾಗೂ ಬೆಲೆ ಇಲ್ಲದ ದಿನಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿದ ಮಹನೀಯರನ್ನು ಅವರು ಸ್ಮರಿಸಿಕೊಂಡರು .
ಶೈಕ್ಷಣಿಕವಾಗಿ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕೆಎಲ್ ಇ ವೈದ್ಯಕೀಯ ವಿಶ್ವವಿದ್ಯಾಲಯ ಹೀಗೆ 3ವಿಶ್ವವಿದ್ಯಾಲಯಗಳ ತ್ರಿವೇಣಿ ಸಂಗಮ ಬೆಳಗಾವಿ ಜಿಲ್ಲೆಯಾಗಿದೆ ಸಂತರ ಪರಂಪರೆ ಶೈಕ್ಷಣಿಕ ಸೇವೆ ಸಂಗೀತ ಕ್ಷೇತ್ರ ಸಾಹಿತ್ಯ ಕ್ಷೇತ್ರ ಮುಂತಾದ ಕ್ಷೇತ್ರಗಳಲ್ಲಿ ತನ್ನದೇ ಆದ ಹಿರಿಮೆ ಗರಿಮೆಯನ್ನು ಸಾಧಿಸಿದ ಬೆಳಗಾವಿ ಜಿಲ್ಲೆ ಕನ್ನಡದ ಶಕ್ತಿ ಕೇಂದ್ರವೂ ಹೌದು ಎಂದು ಪ್ರಭಾಕರ್ ಕೋರೆ ನುಡಿದರು .
ಭಾಷಾ ವಾದವೇ ಬೇರೆ ಭಾಷಾ ದ್ವೇಷವೇ ಬೇರೆ ಎಂದ ಸರ್ವಾಧ್ಯಕ್ಷರು ರಾಜಕೀಯ ಕಾರಣಗಳಿಗಾಗಿ ಮತ್ತು ಪ್ರಚಾರಕ್ಕಾಗಿ ಭಾಷಾ ವಿವಾದವನ್ನು ಕೆದಕುತ್ತಿರುವುದು ಬೆಳಗಾವಿಯ ಮಹಾನಗರ ಪಾಲಿಕೆ ಚುನಾವಣೆಗಾಗಿ ನಡೆದ ನಾಟಕ ಇದಕ್ಕಾಗಿ ಮಹತ್ವ ನೀಡುವುದು ಬೇಡ ಎಂದು ಪರೋಕ್ಷವಾಗಿ ಮಹಾರಾಷ್ಟ್ರದ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು ಬೆಳಗಾವಿಯಲ್ಲಿರುವ ಮರಾಠಿಗರು ಮೂಲ ಬೆಳಗಾವಿಯವರು ಅಲ್ಲವೇ ಅಲ್ಲ 1ಕಾಲದಲ್ಲಿ ಉದ್ಯೋಗಕ್ಕಾಗಿ ಬೇರೆ ಬೇರೆ ಕಡೆಯಿಂದ ಬಂದು ಬೆಳಗಾವಿಯಲ್ಲಿ ಉಳಿದು ಕೊಂಡವರಿವರು ,ಮುಂಬೈ ಪ್ರಾಂತದ ವ್ಯಾಪಾರಸ್ಥರೆಲ್ಲ ವ್ಯಾಪಾರ ವ್ಯವಹಾರಗಳಿಗಾಗಿ ಮೊಡಿ ಭಾಷೆಯನ್ನು ಬಳಸುತ್ತಿದ್ದರು . ಎಲ್ಲಿಂದಲೋ ಬೆಳಗಾವಿಗೆ ಬಂದು ಉಳಿದವರು ಇಂದು ಬೆಳಗಾವಿ ನಮ್ಮದು ಎಂದರೆ ಹೇಗೆ ಎಂದವರು ಪ್ರಶ್ನಿಸಿದರು .
ಮುರಗೋಡ ಮಹಾಂತ ದುರದುಂಡೇಶ್ವರಮಠದ ಶ್ರೀ ನೀಲಕಂಠೇಶ್ವರ ಮಹಾಸ್ವಾಮೀಜಿಯವರು ಮತ್ತು ಉಗಾರ ಖುರ್ದ ಮಲ್ಲಿಕಾರ್ಜುನ ಗುರುದೇವಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು .ಸಮ್ಮೇಳನ ಆರಂಭಕ್ಕೂ ಮುನ್ನ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಯನ್ನು ಸಾಲಂಕೃತ ಸಾರೋಟಿನಲ್ಲಿ ನಡೆಸಲಾಯಿತು .ಅಲಂಕೃತಗೊಂಡ ಆನೆ ಕುದುರೆಗಳು ಮೆರವಣಿಗೆಗೆ ವಿಶೇಷ ಆಕರ್ಷಣೆಗಳಾಗಿದ್ದವು ಮೆರವಣಿಗೆಯಲ್ಲಿ ನೂರಾರು ಮೀಟರ್ ಉದ್ದದ ಕನ್ನಡ ಧ್ವಜ ವನ್ನು ಶಾಲಾಮಕ್ಕಳು ಎತ್ತಿಕೊಂಡು ಮೆರವಣಿಗೆಯಲ್ಲಿ ಹೊರಟಿದ್ದು ಆಕರ್ಷಣೀಯವಾಗಿತ್ತು .ಸಮ್ಮೇಳನದ ಮಂಟಪ ಸಂಪೂರ್ಣ ಕನ್ನಡಮಯ ವಾಗಿತ್ತು ಕನ್ನಡ ಧ್ವಜದ ಕೆಂಪು ಮತ್ತು ಹಳದಿ ವರ್ಣಗಳು ಎಲ್ಲ ಕಡೆ ಎದ್ದು ಕಾಣುತ್ತಿತ್ತು .

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮನು ಬಳಿಗಾರ್ ಪ್ರಭಾಕರ್ ಕೋರೆ ಅವರ ಧರ್ಮಪತ್ನಿ ಶ್ರೀಮತಿ ಆಶಾ ಕೊರೆ , ಸಚಿವ ಶ್ರೀಮಂತ ಪಾಟೀಲ್ ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲ ಮೆಟಗುಡ್ಡ ಕಳೆದ ಬಾರಿಯ ಜಿಲ್ಲಾ ಕಸಾಪ ಸಮ್ಮೇಳನ ಸರ್ವಾಧ್ಯಕ್ಷೆ ಗುರುದೇವಿ ಹುಲೆಪ್ಪನವರಮಠ ,ಜಿಲ್ಲಾ ವೀರಶೈವ ಮಹಾಸಭೆಯ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಡಿಡಿಪಿಐ ಮನ್ನಿಕೇರಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಗದೀಶ್ ಪಾಟೀಲ ಸಾಹಿತಿ ಸರಜೂ ಕಾಟ್ಕರ್ ಉತ್ತರ ಕರ್ನಾಟಕ ದಿನಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಯ ರು ಪಾಟೀಲ ಬೆಳಗಾವಿ ಡಿಡಿಪಿಐ ಎ ಬಿ ಪುಂಡಲೀಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಂ ವೈ ಮೆಣಸಿನಕಾಯಿ ಜ್ಯೋತಿ ಬದಾಮಿ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು .ಕಾಗವಾಡ ತಾಲ್ಲೂಕು ಕಸಾಪ ಅಧ್ಯಕ್ಷ ಸಿದಗೌಡ ಕಾಗೆ ಸ್ವಾಗತಿಸಿದರು .ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಆಶಯ ಭಾಷಣ ಮಾಡಿದರು .ಪ್ರಧಾನ ಕಾರ್ಯದರ್ಶಿ ಎಂ ವೈ ಮೆಣಸಿನಕಾಯಿ ವಂದಿಸಿದರು .


Leave a Reply