Koppal

ಹನಮಸಾಗರ ಗ್ರಾಮ ಪಂಚಾಯತಿ ಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ


ಕೊಪ್ಪಳ:ಕುಷ್ಟಗಿ ತಾಲೂಕಿನ ಹನಮಸಾಗರ ಗ್ರಾಮ ಪಂಚಾಯತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಇಂದು ನಡೆಯಿತು.ಈ ಸಂದರ್ಭದಲ್ಲಿ ಹನಮಸಾಗರ ಗ್ರಾಮ ಪಂಚಾಯತಿ ಆಡಳಿತಾಧಿಕಾರಿಯಾದ ಶ್ರೀಶೈಲ ಸೋಮನಕಟ್ಡಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಪ್ರಕ್ರಿಯೆಯನ್ನು ಮಾಡಿದರು.ಹನಮಸಾಗರ ನೂತನ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಶಂಕ್ರವ್ವ,ನಾಗಪ್ಪ,ನಿರ್ವಾಣಿ,ಉಪಾಧ್ಯಕ್ಷ ರಾಗಿ ಮಂಜುನಾಥ ರಾಮಣ್ಣ ಹುಲ್ಲೂರು,ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡಿದರು. ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಪಿಡಿಓ ನಿಂಗಪ್ಪ ಮೂಲಿಮನಿ ಮಾತನಾಡಿ ನೂತನ ಅಧ್ಯಕ್ಷರು ,ಉಪಾಧ್ಯಕ್ಷ ರು,ಹಾಗೂ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಿದರು. ಇದುವರೆಗೆ ನಮ್ಮ ಪಂಚಾಯತಿ ಆಡಳಿತ ಅಧಿಕಾರಿಯಾಗಿ ಅಭಿವೃದ್ಧಿ ಕೆಲಸಗಳಿಗೆ ನಮಗೆ ಸಹಕಾರ ನೀಡಿ ,ಉತ್ತಮ ಆಡಳಿತ ನಿರ್ವಹಿಸಿದ, ಶ್ರೀ ಶೈಲ ಸೋಮನಕಟ್ಟಿರವರಿಗೆ ಗ್ರಾಮ ಪಂಚಾಯತಿ ಅಭಿನಂದನೆ ಸಲ್ಲಿಸಿದರು.ಮುಂದಿನ ದಿನಮಾನಗಳಲ್ಲಿ ಅಭಿವೃದ್ಧಿ ಪರ ಕೆಲಸಗಳನ್ನು ಎಲ್ಲಾ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಲಾಗುವದು ಎಂದು ಪಿಡಿಓ ನಿಂಗಪ್ಪ ಮೂಲಿಮನಿ ಹೇಳಿದರು.
ಈ ಸಂದರ್ಭದಲ್ಲಿ ಹನಮಸಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು.


Leave a Reply