Belagavi

ಚಿಕ್ಕೋಡಿಯಲ್ಲಿಂದು ವ್ಯಕ್ತಿಯ ಕೈಲಿದ್ದ ಹಣದ ಬ್ಯಾಗ್ ದೋಚಿ ದುಷ್ಕರ್ಮಿಗಳುಪರಾರಿ..!

ಚಿಕ್ಕೋಡಿ (ಬೆಳಗಾವಿ): ಚಿಕ್ಕೋಡಿ ಪಟ್ಟಣದ ಬಸವೇಶ್ವರ ಸರ್ಕಲ್​ನಲ್ಲಿ ಬ್ಯಾಂಕ್​ನಿಂದ ಹಣ ತೆಗೆದುಕೊಂಡು ಬರುತ್ತಿದ್ದ ವ್ಯಕ್ತಿಯ ಕೈಲಿದ್ದ ಬ್ಯಾಗ್​
ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ.

*ಕಳುವಾದ ಹಣದ ವಿವರಣೆ :

ಚಿಕ್ಕೋಡಿ ತಾಲೂಕಿನ ಜೋಡಟ್ಟಿ ಗ್ರಾಮದ ಸತ್ಯಪ್ಪ ದೇವಪ್ಪ ಖೋತ ಎಂಬುವವರು ಶುಕ್ರವಾರ ಮಧ್ಯಾಹ್ನ ಸೋಮವಾರ ಪೇಠದಲ್ಲಿರುವ ಸ್ಟೇಟ್ ಬ್ಯಾಂಕ್​ನಿಂದ
5 ಲಕ್ಷ ರೂ. ಡ್ರಾ ಮಾಡಿಕೊಂಡು ಬಸವ ಸರ್ಕಲ್​ ಬಳಿ ಹೋಗುತ್ತಿದ್ದರು. ಈ ವೇಳೆ, ಬೈಕ್​ನಲ್ಲಿ ವೇಗವಾಗಿ ಬಂದ ದುಷ್ಕರ್ಮಿಗಳು, ಸತ್ಯಪ್ಪನ ಕೈಲಿದ್ದ ಹಣದ ಬ್ಯಾಗ್​ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಸತ್ಯಪ್ಪ ಕಬ್ಬೂರು ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಸಪಾಯಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ನಿವೃತರಾಗಿದ್ದು, ನಿವೃತ್ತಿ ಹಣ ತೆಗೆದುಕೊಂಡು ಬರುವಾಗ ಈ ಘಟನೆ ನಡೆದಿದೆ. ಈ ಕುರಿತು ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker