Ballary

ಬಳ್ಳಾರಿ ಬುಡ ಆಯಿತು ,ಇದೀಗ ವಿಜಯನಗರ ವುಡಾ ಅಧ್ಯಕ್ಷರ ನೇಮಕಾತಿಗೆ ವಿರೋಧ

ಮುಖ್ಯಮಂತ್ರಿಗಳು ಆದೇಶ ಮಾಡಿದರೆ ಭಾಜಪ ಜಿಲ್ಲಾ ಅಧ್ಯಕ್ಷರ ವಿರೋಧ !!

ಬಳ್ಳಾರಿ ; ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಆದೇಶಕ್ಕೆ ಕಿಮ್ಮತ್ತು ಇಲ್ಲವೆ ಅನ್ನುವಂಥ ವಾತಾವರಣ ನಿರ್ಮಾಣವಾಗಿದೆ.

ರಾಜ್ಯದ ಮುಖ್ಯಮಂತ್ರಿಗಳು ವಿಜಯನಗರ ಅಧ್ಯಕ್ಷರನ್ನಾಗಿ ರಾಮಲಿಂಗಪ್ಪ ಅವರನ್ನು ನೇಮಕ ಮಾಡಿದ್ದಕ್ಕೆ  ಬಳ್ಳಾರಿ ಜಿಲ್ಲೆಯ ಬಿಜೆಪಿ ಅಧ್ಯಕ್ಷರು ಚನ್ನಬಸವನಗೌಡ,ಮತ್ತು,ಪಕ್ಷದ ಕಾರ್ಯಕರ್ತರು, ವಿರೋಧ ಮಾಡುವ ಪರಿಸ್ಥಿತಿ,ಸೃಷ್ಟಿ ಅಗಿದೆ.!!

ಬಳ್ಳಾರಿಯಲ್ಲಿ ಇತ್ತೀಚಿಗೆ ಬುಡಾ ಅಧ್ಯಕ್ಷರ ನೇಮಕಾತಿಯ ವಿಚಾರ ಅಚ್ಚರಿ ಮೂಡಿಸಿತ್ತು,ಬುಡಾ ಅಧ್ಯಕ್ಷರಾಗಿ ಯುವ ನಾಯಕ ದಮ್ಮೂರು ಶೇಖರ್ ನೇಮಕ ಮಾಡಲಾಗಿತ್ತು.

ಉಸ್ತುವಾರಿ ಸಚಿವರು ಆನಂದ್ ಸಿಂಗ್, ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಶೇಖರ್ ಅವರನ್ನು ಬದಲಾವಣೆ ಮಾಡಿ, ರಾಜ್ಯದ ಗ್ರಾಮೀಣ ಅಭಿವೃದ್ಧಿ ಸಚಿವರು ಕೆ.ಎಸ್ ಈಶ್ವರಪ್ಪ ಅಳಿಯರು, ಸಂಬಂದಿ ಗಳು ಅಗಿರವ ರಾಮಲಿಂಗಪ್ಪ ಅವರನ್ನು ನೇಮಕ ಮಾಡಲು ಸೂಚನೆ ಕೊಟ್ಟಿದ್ದರು. ಆತುರಾತುರದಲ್ಲಿ ರಾಮಲಿಂಗಪ್ಪ  ನೇಮಕವೂ ಅಯಿತು.

ಇದನ್ನು ಸಹಿಸಕೊಳ್ಳಲು,ಅಗದೆ ದಮ್ಮೂರು ಶೇಖರ್ ಅವರು,48,ಗಂಟೆಯಲ್ಲಿ, ಮುಖ್ಯಮಂತ್ರಿಗಳಿ೦ದ ರಾಮಲಿಂಗಪ್ಪ ಅವರ ಆದೇಶವನ್ನು, ರದ್ದು ಮಾಡಿಸಿ ಮತ್ತೊಮ್ಮೆ ತಾವೇ ಪಟ್ಟಕ್ಕೇರಿದರು.

ರಾಮಲಿಂಗಪ್ಪ ಅವರನ್ನು ಬಳ್ಳಾರಿ ಬುಡ ಬದಲಿಗೆ ವಿಜಯನಗರ ವುಡಾ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಇದನ್ನು ಗಮನಿಸಿದ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡರು ಅಸಮಾಧಾನಗೊಂಡು ಪಕ್ಷದ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮುಖ್ಯಮಂತ್ರಿಗಳು ಮಾಡಿದ ಆದೇಶಗಳ ವಿರುದ್ಧ ಅಸಮಾಧಾನ ಮತ್ತು  ವಿರೋಧ ವ್ಯಕ್ತಪಡಿಸಿದರು. ಜಿಲ್ಲಾ ಅಧ್ಯಕ್ಷರು ಗಮನಕ್ಕೆ ಯಾವುದೇ ಮಾಹಿತಿ ಇಲ್ಲದೆ ಪಕ್ಷದ ಅಭಿವೃದ್ಧಿ ಗೆ ಶ್ರಮಿಸಿದ ಕಾರ್ಯಕರ್ತರ ಸೇವೆಯನ್ನು ಪರಿಗಣಿಸದೇ, ನಿರ್ಣಯಗಳನ್ನು ಮಾಡುತ್ತಾ ಇದ್ದಾರೆ, ಇಂತಹ ಬೆಳೆವಣೆಗಳು,ಕಾರ್ಯಕರ್ತರ ಕಡೆಗಣಿಸಿದಂತಾಗುತ್ತದೆ ಎಂದು  ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರಗಳನ್ನು ರಾಜ್ಯ ಅಧ್ಯಕ್ಷರು ಗಮನಕ್ಕೆ ತರಲಾಗಿದೆ ಏಂದುರು. ರಾಮಲಿಂಗಪ್ಪ ಅವರು ಕೂಡಾ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಅವರ ನೇಮಕ ವಿರುದ್ಧ ಜಿಲ್ಲಾಅಧ್ಯಕ್ಷರ ಅಸಮಾಧಾನ  ಅಚ್ಚರಿ,ಮೂಡಿಸಿದೆ.!!ಪತ್ರಿಕಾಗೋಷ್ಠಿಯಲ್ಲಿ,ಅನಿಲ್ ನಾಯ್ಡು, ವಿರೂಪಾಕ್ಷ ಗೌಡ,ಮುರಾರಿ ಗೌಡ,ವಿಜಯಕುಮಾರ್. ರಾಘವೇಂದ್ರ. ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker