Belagavi

ಏನೋ ಮಾಡಲು ಹೋಗಿ ಏನೋ ಮಾಡಿದ ಮಹಾರಾಷ್ಟ್ರದ ಸಿಎಂ ಉದ್ಭವ್ ಠಾಕ್ರೆ…!

Mumbai: Maharashtra Chief Minister Uddhav Thackeray during a press conference on JNU violence, at Matoshree Bungalow in Mumbai, Monday, Jan. 6, 2020. (PTI Photo)(PTI1_6_2020_000226B)

ಬೆಳಗಾವಿ: ಗಡಿ ವಿಚಾರವಾಗಿ ಟ್ವಿಟ್ಟರ್‌ನಲ್ಲಿ ಪದೇಪದೆ ಕ್ಯಾತೆ ತೆಗೆಯುತ್ತಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ರಾಜ್ಯದಲ್ಲಿರುವ ಪ್ರಜ್ಞಾವಂತ ಮರಾಠಿಗರು ಹರಿಹಾಯ್ದಿದ್ದಾರೆ.
ಕರ್ನಾಟಕದಲ್ಲಿ ನಾವಿರೋದು ದೇವರ ದಯೆ. ಮೊದಲು ಮಹಾರಾಷ್ಟ್ರದಲ್ಲಿನ ಮೂಲಸೌಕರ್ಯಗಳ ಸಮಸ್ಯೆ ಬಗೆಹರಿಸಿ.
ಗಡಿ ಸಮಸ್ಯೆಗಿಂತ ಜ್ವಲಂತ ಸಮಸ್ಯೆಗಳು ಮಹಾರಾಷ್ಟ್ರದಲ್ಲಿವೆ. ನಿರುದ್ಯೋಗ ಸಮಸ್ಯೆ ಬಗೆಹರಿಸಿ, ಜನತೆಗೆ ಮೂಲಸೌಕರ್ಯ ಕಲ್ಪಿಸಿ ಎಂದು ಆಗ್ರಹಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಟ್ವೀಟ್ ಮಾಡಿದ್ದರು. ಅವರ ಟ್ವೀಟ್​ಗೆ ಮರಾಠಿಗರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.


Leave a Reply