Ballary

ಹರಿಶ್ಚಂದ್ರ ನಗರದ ದಲಿತರ ಕಾಲೋನಿಗೆ ಪೇಜಾವರ ಶ್ರೀಗಳ ಭೇಟಿ


ಬಳ್ಳಾರಿ: ಪೇಜಾವರ ಮಠದ ವಿಶ್ವ ಪ್ರಸನ್ನ ಶ್ರೀಪಾದಂಗಳವರು ತಾಳೂರು ರಸ್ತೆಯಲ್ಲಿರುವ ರಾಮನಗರ ಕಾಲೋನಿ ಬಳಿಯ ಹರಿಶ್ಚಂದ್ರ ನಗರದ ದಲಿತರ ಕಾಲೋನಿಗೆ ಭೇಟಿ ನೀಡಿದ್ದರು.

ಮೊದಲಿಗೆ ಹುಲಿಗೆಮ್ಮ ದೇಗುಲದವರೆಗೆ ಪಾದಯಾತ್ರೆ ಕೈಗೊಂಡರು.
ಪೇಜಾವರ ಮಠದ ಸ್ವಾಮೀಜಿಯಾದ ಬಳಿಕ ಮೊದಲ ಬಾರಿಗೆ ಬಳ್ಳಾರಿಯ ಹರಿಶ್ಚಂದ್ರ ನಗರದ ದಲಿತರ ಕಾಲೋನಿಯಲ್ಲಿ ಪಾದಯಾತ್ರೆಯನ್ನ ಕೈಗೊಂಡಿದ್ದಾರೆ. ಹರಿಶ್ಚಂದ್ರ ನಗರದ ಪ್ರಮುಖ ರಸ್ತೆಯಲ್ಲಿ ಪಾದಯಾತ್ರೆ ಮಾಡುವ ಮೂಲಕ ದಲಿತರ ಗಮನ ಸೆಳೆದಿದ್ದಾರೆ. ಅಲ್ಲದೇ, ದಲಿತರ ಮನೆಗಳಿಗೆ ತೆರಳಿ ಪಾದಪೂಜೆ‌ಯನ್ನೂ ನೆರವೇರಿಸಿಕೊಂಡಿದ್ದಾರೆ.

ಇವರ ಪಾದಯಾತ್ರೆಗೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ, ಬಿಜೆಪಿಯ ಮುಖಂಡರಾದ ಹೆಚ್.ಹನುಮಂತಪ್ಪ, ಎಸ್.ಮಲ್ಲನಗೌಡ, ಶ್ರೀನಿವಾಸ ಮೋತ್ಕರ್, ವೀರಶೇಖರರೆಡ್ಡಿ, ಗೋವಿಂದ, ಬಸವರಾಜ ಸೇರಿದಂತೆ ದಲಿತ ಮುಖಂಡರು ಸಾಥ್ ನೀಡಿದರು.


Leave a Reply