State

ರಾಯಚೂರದಿಂದ ಬಾಚಿ ಯವರಿಗೆ ಮರು ಡಾಂಬರಿಕರಣಕ್ಕೆ ಯರಗಟ್ಟಿಯಲ್ಲಿ ಭೂಮಿ ಪೂಜೆ ಸಲ್ಲಿಸಿದ ಡಿಸಿಎಮ್ ಗೋವಿಂದ ಕಾರಜೋಳ


ಯರಗಟ್ಟಿ: ರಾಯಚೂರ-ಬಾಚಿ(ರಾ.ಹೆ-20) ರಸ್ತೆ ಕಿ.ಮೀ 272.390 ರಿಂದ 292.600ರವರೆಗೆ ಅಂದಾಜು ವೆಚ್ಚ 9ಕೋಟಿ ವೆಚ್ಚದ
ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಲೆಕ್ಕ ಶಿರ್ಷಿಕೆ 5054 ರಾಜ್ಯ ಹೆದ್ದಾರಿ ಸುಧಾರಣೆ ಅಡಿಯಲ್ಲಿ ಸವದತ್ತಿ ತಾಲೂಕಿನ
(ಕೊರಕೊಪ್ಪ ಗ್ರಾಮದಿಂದ ಯರಝರ್ವಿ ಕ್ರಾಸ್ ವರೆಗೆ) ಮರುಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ಸಮಾರಂಭದ ಕಾರ್ಯಕ್ರಮವನ್ನು ಮಾನ್ಯ ಉಪ ಮುಖ್ಯಮಂತ್ರಿ ಗಳು ಹಾಗೂ ಲೋಕೋಪಯೋಗಿ ಸಚಿವರಾದ ಶ್ರೀ ಗೋವಿಂದ ಕಾರಜೋಳ ಹಾಗೂ ವಿಧಾನ ಸಭಾ ಉಪಸಭಾಧ್ಯಕ್ಷರಾದ ಆನಂದ ಮಾಮನಿ ಮತ್ತು ಶ್ರೀ ಗಳೊಂದಿಗೆ ಭೂಮಿ ಪೂಜೆ ನೆರವೆರಿತು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಮ. ಘ. ಚ. ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಭಾಗೋಜಕೋಪ್ಪ, ಜಿಲ್ಲಾ ಪಂಚಾಯತ ಸದಸ್ಯರಾದ ಅಜೀತಕುಮಾರ ದೇಸಾಯಿ, ವಿದ್ಯಾರಾಣಿ ಸೊನ್ನದ,ಎ.ಪಿ.ಎಂ.ಸಿ ಅಧ್ಯಕ್ಷರಾದ ಪ್ರಕಾಶ ನರಿ, ಉಪಾಧ್ಯಕ್ಷರಾದ ಚಂದ್ರು ಅಳಗೋಡಿ, ತಾಲೂಕ ಪಂಚಾಯತ ಸದಸ್ಯರಾದ ಮಹಾದೇವ ದೊಡ್ಡಲಿಂಗನವರ, ಬಿಜೆಪಿ ಮಂಡಳ ಅಧ್ಯಕ್ಷರಾದ ಈರಣ್ಣಾ ಚಂದರಗಿ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ವೆಂಕಟೇಶ ದೇವರಡ್ಡಿ, ಮಾಜಿ ಎ ಪಿ ಎಂ ಸಿ ಅಧ್ಯಕ್ಷರಾದ ಬಸಯ್ಯ ಹಿರೇಮಠ, ಪಿ ಕೆ ಪಿ ಎಸ್ ಅಧ್ಯಕ್ಷರಾದ ರಮೇಶ ದೇವರಡ್ಡಿ, ಸದಾನಂದ ಪಾಟೀಲ, ಕುಮಾರ ಜಕಾತಿ, ಸದಾನಂದ ಹಣಬರ, ಚೇತನ ಜಕಾತಿ, ದಾವಲಸಾಬ ಚಪ್ಟಿ ಮತ್ತು ಕಾರ್ಯಕರ್ತರು, ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರು ಯರಗಟ್ಟಿ.)


Leave a Reply