Belagavi

ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಅಧಿಕಾರಿಗಳಿಗೆ ಕಡಕ್ ಸೂಚನೆ


ಸವದತ್ತಿ : ಬೇಸಿಗೆ ಬರುತ್ತಿದ್ದು ತಾಲೂಕಿನಲ್ಲಿ ಎಲ್ಲಿಯೂ ಯಾವ ಗ್ರಾಮದಲ್ಲಿಯೂ ನೀರಿನ ತೊಂದರೆಮಾಡಬಾರದು.
ಯರಗಟ್ಟಿ ಕುಡಿಯುವ ನೀರಿನ ಯೋಜನೆಯು ಸಮರ್ಪಕವಾಗಿ ನಡೆಯಬೇಕು ಎಂದು ಶಾಸಕ ಹಾಗೂ ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ಅವರು ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೋರ್ ಗಳ ಪೈಪ್ ಲೈನ್ ಗಳು ದುರಸ್ಥಿ ಇದ್ದರೆ ಅವುಗಳನ್ನು ಕೂಡಲೇ ದುರಸ್ತಿಗೊಳಿಸಬೇಕು ಜೆಜಿಎಮ್ ಯೋಜನೆಯಿಂದ ಎಲ್ಲರಿಗೂ ನೀರು ತಲುಪಬೇಕು ಎಂದು ಹೇಳಿದರು. ಕೋಟಿಗಟ್ಟಲೆ ಹಣ ಖರ್ಚು ಮಾಡಿದ ಕಾಮಗಾರಿ ಸಮರ್ಪಕವಾಗಿ ನಡೆಯಬೇಕು.

ಗೋಂದಿ ಗ್ರಾಮದ ಹತ್ತಿರ ಕೆಲವು ಮನೆಗಳಿದ್ದು, ಅವುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ದಡೇರಕೋಪ್ಪ ಗ್ರಾಮದಲ್ಲಿ ಕನ್ನಡ ಶಾಲೆ ಪಕ್ಕದಲ್ಲಿನ ತಿಪ್ಪೆ ಗುಂಡಿಗಳನ್ನು ತೆರವುಗೊಳಿಸಬೇಕು ಶಾಲೆಗಳು ಸರಳವಾಗಿ ನಡೆಯಬೇಕು. ಮಕ್ಕಳ ಕಲಿಕೆಯಲ್ಲಿ ತೊಂದರೆಯಾಗದಂತೆ ತಾಲೂಕು ಆಡಳಿತ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಷಯ ಬೋಧನೆಗೆ ತಕ್ಕಂತೆ ಪ್ರಶ್ನೆ ಪತ್ರಿಕೆಗಳನ್ನು ತೆಗೆಯಬೇಕು. ಗುಣಮಟ್ಟದ ವಿಷಯ ಬೋಧನೆ ಮಾಡಬೇಕು. ತಾಲೂಕಿನಲ್ಲಿ ಆರೋಗ್ಯ ಇಲಾಖೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ನೀಡಬೇಕು ಮತ್ತು ಅಧಿಕಾರಿಗಳು ಕೆಪಿಡಿ ತ್ರೈಮಾಸಿಕ ಸಭೆಗೆ ಬೆಲೆ ಕೊಡುತ್ತಿಲ್ಲ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಹೂಲಿ ಭಾಗದ ಜಿಲ್ಲಾ ಪಂಚಾಯತ ಸದಸ್ಯ ಎಮ್. ಎಸ್. ಹಿರೇಕುಂಬಿ ಮಾತನಾಡಿ, ಆಯುರ್ವೇದಿಕ ಆಸ್ಪತ್ರೆಗಳಲ್ಲಿ ವೈದ್ಯರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಾಂಪೌಂಡ್ ಇರುವುದಿಲ್ಲ ಕೂಡಲೇ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು. ನಂತರ ವಯೋ ನಿವೃತ್ತಿ ಹೊಂದಿದ ಜಿಪಂ ಅಭಿಯಂತರ ಬಿ. ಟಿ. ಬಾವಿಕಟ್ಟಿಯವರನ್ನು ಶಾಸಕರು ಸತ್ಕರಿಸಿ, ಗೌರವಿಸಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಗುರುನಾಥ ಗಂಗಲ, ವಿದ್ಯಾರಾಣಿ ಸೊನ್ನದ, ಎಂ. ಎಸ್. ಹಿರೇಕುಂಬಿ, ತಾಪಂ ಉಪಾಧ್ಯಕ್ಷ ರಾಜ್ ಸೋನವ್ವ ದೊಡಮನಿ, ತಾಪಂ ಇಒ ಯಶವಂತಕುಮಾರ, ತಾಲೂಕಾ ವೈದ್ಯಾಧಿಕಾರಿಯಾದ ಮಹೇಶ ಚಿತ್ತರಗಿ ಇನ್ನೂಳಿದ ಅಧಿಕಾರಿಗಳು ಉಪಸ್ಥಿತರಿದ್ದರು.(ವರದಿ ಈರಣ್ಣಾ ಹುಲ್ಲೂರು ಯರಗಟ್ಟಿ)


Leave a Reply