Belagavi

ಮಕ್ಕಳನ್ನು ಪೋಲಿಯೋ ರೋಗದಿಂದ ಮುಕ್ತಗೊಳಿಸಿ – ಡಾ. ಬಿ. ಎಸ್. ಬಳ್ಳೂರ 


ಯರಗಟ್ಟಿ: ಮಕ್ಕಳು ದೇಶದ ಆಸ್ತಿ ಅವರನ್ನು ಪೋಲಿಯೋ ರೋಗದಿಂದ ಮುಕ್ತಗೊಳಿಸಲು ಲಸಿಕೆ ಕೊಡಿಸುವ ಮೂಲಕ ಆರೋಗ್ಯವಂತರನ್ನಾಗಿಸೋಣ ಎಂದು ಡಾ. ಬಿ. ಎಸ್ ಬಳ್ಳೂರ ಕರೆನೀಡಿದ್ದಾರೆ.

ಅವರು ಯರಗಟ್ಟಿ ಮರಡಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಪಲ್ಸ್ ಪೋಲಿಯೊ ಲಸಿಕೆ ವಿತರಣಾ ಕಾರ್ಯಕ್ರಮ ಇದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಇಂದು ರಾಜ್ಯದೆಲ್ಲೆಡೆ ೬೪ ಲಕ್ಷ ಮಕ್ಕಳಿಗೆ ನೀಡುವ ಉದ್ದೇಶವನ್ನು ಹೊಂದಿದೆ. ಈ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆ ಸುಮಾರು ೩೩ ಸಾವಿರ ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ನಾವೂ ಒಬ್ಬರು ಎಂದು ಗುರುತಿಸಿಕೊಳ್ಳಲು ನಿಜಕ್ಕೂ ಸಂತಸವೆನ್ನಿಸುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿಗಳಾದ ಡಾ ಆಯ್. ಆ. ಗಂಜಿ ಅವರು ಮಾತನಾಡುತ್ತ, ಸುಧೃಢ ಆರೋಗ್ಯ ಮತ್ತು ಶಿಕ್ಷಣ ಇವು ಮಗುವಿನ ಜನ್ಮಸಿದ್ದ ಹಕ್ಕಾಗಿದೆ. ಯಾವುದೇ ಮಗು ಪೊಲಿಯೊ ೨ ಹನಿಗಳಿಂದ ವಂಚಿತರಾಗದಂತೆ ನೋಡಿಕೊಂಡು ಮಕ್ಕಳು ಜೀವನವೆಲ್ಲಾ ಸಂತಸದಿಂದಿರುವಂತೆ ನೋಡಿಕೊಳ್ಳುವುದು ಪೋಷಕರ ಆದ್ಯ ಕರ್ತವ್ಯವಾಗಿದೆ. ಆರೋಗ್ಯದ ವಿಷಯಕ್ಕೆ ಬಂದಾಗ ಯಾವುದೇ ರೀತಿಯ ನಿರ್ಲಕ್ಷ್ಯ ಸಲ್ಲದು. ಪಲ್ಸ್ ಪೊಲಿಯೊ ಲಸಿಕೆಯು ವೈಜ್ಞಾನಿಕ ಮನ್ನಣೆಯನ್ನು ಪಡೆದಿದ್ದು ಯಾವುದೇ ಅಳುಕಿಲ್ಲದೇ ಹಾಕಿಸಿ ಸುಧೃಢ ಹಾಗೂ ಆರೋಗ್ಯವಂತ ಸಮಾಜ ನಿರ್ನಾಮಮಾಡಲು ಎಲ್ಲ ಪೋಷಕರು ಕೈ ಜೋಡಿಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷವೆಂಬಂತೆ ವೈದ್ಯ ತಂದೆ, ತಾಯಂದಿರು ತಮ್ಮ ಮಕ್ಕಳಿಗೆ ತಮ್ಮ ಕೈಯಾರೆ ಪೋಲಿಯೊ ಹನಿಗಳನ್ನು ತಾವೇ ಹಾಕಿದರು. ಇಂದಿನ ಶಿಬಿರದಲ್ಲಿ ೧೦೮ ಮಕ್ಕಳಿಗೆ ಪೊಲಿಯೋ ಹನಿಗಳನ್ನು ಹಾಕಲಾಯಿತು. ಈ ಸಂದರ್ಭದಲ್ಲಿ ಯರಗಟ್ಟಿ: ಮಕ್ಕಳು ದೇಶದ ಆಸ್ತಿ ಅವರನ್ನು ಪೋಲಿಯೋ ರೋಗದಿಂದ ಮುಕ್ತಗೊಳಿಸಲು ಲಸಿಕೆ ಕೊಡಿಸುವ ಮೂಲಕ ಆರೋಗ್ಯವಂತರನ್ನಾಗಿಸೋಣ ಎಂದು ಡಾ. ಬಿ. ಎಸ್ ಬಳ್ಳೂರ ಕರೆನೀಡಿದ್ದಾರೆ.
ಅವರು ಯರಗಟ್ಟಿ ಮರಡಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಪಲ್ಸ್ ಪೋಲಿಯೊ ಲಸಿಕೆ ವಿತರಣಾ ಕಾರ್ಯಕ್ರಮ ಇದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಇಂದು ರಾಜ್ಯದೆಲ್ಲೆಡೆ ೬೪ ಲಕ್ಷ ಮಕ್ಕಳಿಗೆ ನೀಡುವ ಉದ್ದೇಶವನ್ನು ಹೊಂದಿದೆ. ಈ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆ ಸುಮಾರು ೩೩ ಸಾವಿರ ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ನಾವೂ ಒಬ್ಬರು ಎಂದು ಗುರುತಿಸಿಕೊಳ್ಳಲು ನಿಜಕ್ಕೂ ಸಂತಸವೆನ್ನಿಸುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿಗಳಾದ ಡಾ ಆಯ್. ಆ. ಗಂಜಿ ಅವರು ಮಾತನಾಡುತ್ತ, ಸುಧೃಢ ಆರೋಗ್ಯ ಮತ್ತು ಶಿಕ್ಷಣ ಇವು ಮಗುವಿನ ಜನ್ಮಸಿದ್ದ ಹಕ್ಕಾಗಿದೆ. ಯಾವುದೇ ಮಗು ಪೊಲಿಯೊ ೨ ಹನಿಗಳಿಂದ ವಂಚಿತರಾಗದಂತೆ ನೋಡಿಕೊಂಡು ಮಕ್ಕಳು ಜೀವನವೆಲ್ಲಾ ಸಂತಸದಿಂದಿರುವಂತೆ ನೋಡಿಕೊಳ್ಳುವುದು ಪೋಷಕರ ಆದ್ಯ ಕರ್ತವ್ಯವಾಗಿದೆ. ಆರೋಗ್ಯದ ವಿಷಯಕ್ಕೆ ಬಂದಾಗ ಯಾವುದೇ ರೀತಿಯ ನಿರ್ಲಕ್ಷ್ಯ ಸಲ್ಲದು. ಪಲ್ಸ್ ಪೊಲಿಯೊ ಲಸಿಕೆಯು ವೈಜ್ಞಾನಿಕ ಮನ್ನಣೆಯನ್ನು ಪಡೆದಿದ್ದು ಯಾವುದೇ ಅಳುಕಿಲ್ಲದೇ ಹಾಕಿಸಿ ಸುಧೃಢ ಹಾಗೂ ಆರೋಗ್ಯವಂತ ಸಮಾಜ ನಿರ್ನಾಮಮಾಡಲು ಎಲ್ಲ ಪೋಷಕರು ಕೈ ಜೋಡಿಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷವೆಂಬಂತೆ ವೈದ್ಯ ತಂದೆ, ತಾಯಂದಿರು ತಮ್ಮ ಮಕ್ಕಳಿಗೆ ತಮ್ಮ ಕೈಯಾರೆ ಪೋಲಿಯೊ ಹನಿಗಳನ್ನು ತಾವೇ ಹಾಕಿದರು. ಇಂದಿನ ಶಿಬಿರದಲ್ಲಿ ೧೦೮ ಮಕ್ಕಳಿಗೆ ಪೊಲಿಯೋ ಹನಿಗಳನ್ನು ಹಾಕಲಾಯಿತು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಆಶಾ ಕಾರ್ಯಕರ್ತೆರು, ಅಂಗನವಾಡಿ ಕಾರ್ಯಕರ್ತೆರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply