Belagavi

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪತ್ರಕರ್ತ ಮಹಾಂತೇಶ ರೇಶ್ಮಿಗೆ ಸನ್ಮಾನ


ಬೈಲಹೊಂಗಲ ೧: ಕಾಗವಾಡದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಪತ್ರಕರ್ತ ಮಹಾಂತೇಶ ರೇಶ್ಮಿ ಅವರನ್ನು ಸನ್ಮಾನಿಸಲಾಯಿತು.
ಗಡಿ ಭಾಗವಾದ ಕಾಗವಾಡದಲ್ಲಿ ಕಳೆದ ದಿ.೩೦ ಹಾಗೂ ೩೧ ರಂದು ಎರಡು ದಿನಗಳವರೆಗೆ ಜರುಗಿದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರವಿವಾರ ದಿ.೩೧ ರಂದು ಜರುಗಿದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಕಳೆದ ೩೫ ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಮಹಾಂತೇಶ ರೇಶ್ಮಿ ಅವರನ್ನು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು ಹಾಗೂ ಈ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಗೈದ ಸುಮಾರು ೨೫ ಜನ ಸಾಧಕರನ್ನು ಸನ್ಮಾನಿಸಲಾಯಿತು.
ಅಥಣಿಯ ಮರುಳಸಿದ್ದ ಮಹಾಸ್ವಾಮಿಗಳು, ಕೃಷ್ಣಾ ಕಿತ್ತೂರಿನ ಬಸವೇಶ್ವರ ಸ್ವಾಮಿಗಳು ಸಾಧಕರನ್ನು ಸನ್ಮಾನಿಸಿದರು. ಸಮ್ಮೇಳನಾಧ್ಯಕ್ಷ ಡಾ.ಪ್ರಭಾಕರ ಕೋರೆ, ಜಿಲ್ಲಾ ಕ.ಸಾ.ಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಮಾಜಿ ಅಧ್ಯಕ್ಷ ಯ.ರು.ಪಾಟೀಲ, ಕಾಗವಾಡ ಕ.ಸಾ.ಪ ಅಧ್ಯಕ್ಷ ಡಾ.ಸಿದ್ದಗೌಡ ಕಾಗೆ, ಸಾಹಿತಿಗಳಾದ ಡಾ.ಎಂ.ಬಿ.ಹೂಗಾರ, ಅಪ್ಪಾಸಾಬ ಅಲಿಬಾದಿ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಇದ್ದರು.
ಪಾಂಡುರAಗ ಜಟಗನ್ನವರ ಸ್ವಾಗತಿಸಿದರು, ವಿಜಯ ಬಡಿಗೇರ ವಂದಿಸಿದರು, ಎ.ಎಸ್.ಪಾಟೀಲ, ಅಜಿತ ನಾಯಕ ನಿರೂಪಿಸಿದರು.


Leave a Reply