ರಸ್ತೆ ಸಂಚಾರ ನಿಯಮ ಹಾಗೂ ಕಾನೂನಿನ ಅರಿವು ಮೂಡಿಸಬೇಕು: ಎಸ್.ಪಿ. ಲಕ್ಷö್ಮಣ ನಿಂಬರಗಿ

ಬೆಳಗಾವಿ ಫೆ.೦೧: ರಸ್ತೆ ಸಂಚಾರ ನಿಯಮದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ. ಭವಿಷ್ಯದ ಪ್ರಜೆಗಳಿಗೆ ಸಂಚಾರಿ ನಿಯಮ ಪಾಲನೆ ಹಾಗೂ ಕಾನೂನು ಅರಿವು ಮೂಡಿಸಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷö್ಮಣ ನಿಂಬರಗಿ
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಾರ್ಯಾಲಯ ಸಭಾಂಗಣದಲ್ಲಿ ಸೋಮವಾರ(ಫೆ.೧) ನಡೆದ ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಸ್ತೆ ಸಂಚಾರ ನಿಯಮದ ಜೊತೆಗೆ ಕಾನೂನಿನ ನಿಯಮ ಪಾಲನೆ ಬಗ್ಗೆ ಶೈಕ್ಷಣಿಕ ಹಂತದಲ್ಲೆ ಪಠ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು.
ವಾರಕ್ಕೆ ಒಂದು ಗಂಟೆ ವಿದ್ಯಾರ್ಥಿಗಳಿಗೆ ಸಮಯ ನಿಗದಿ ಮಾಡಬೇಕು ಈ ಕುರಿತು ಖಾಸಗಿ ಶಾಲೆಗಳಿಗೂ ಸೂಚನೆ ನೀಡಲು ತಿಳಿಸಿದರು.ಪ್ರತಿ ೨ ತಿಂಗಳಿಗೆ ಪಾಲಕರ ಸಭೆ ಏರ್ಪಡಿಸಬೇಕು. ಪ್ರಾಥಮಿಕ , ಪ್ರೌಢ, ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಈ ಹಂತದಲ್ಲಿ ಶಿಕ್ಷಣ ಇಲಾಖೆಯ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.ಪಠ್ಯಕ್ರಮದಲ್ಲಿ ಸಂಚಾರಿ ನಿಯಮ ಅಳವಡಿಸುವುದು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ವಾಹನ ಚಾಲನೆ ಪರವಾನಿಗೆ ಪಡೆಯಲು ಇನ್ನಷ್ಟು ಪರೀಕ್ಷೆ ನೀಡಬೇಕು, ಆನ್ಲೆöÊನ್ ಪರೀಕ್ಷೆ, ವಾಹನ ಚಾಲನೆ ಪರೀಕ್ಷೆ ಜೊತೆಗೆ ಸಿಗ್ನಲ್ ಅರಿವು ಹೀಗೆ ಪರವಾನಿಗೆ ಪಡೆಯಲು ಸಂಚಾರಿ ನಿಯಮದ ಬಗ್ಗೆ ಹೆಚ್ಚು ತಿಳಿಸಬೇಕು ಎಂದು ರ್ಟಿ.ಓ ಅಧಿಕಾರಿಗಳಿಗೆ ತಿಳಿಸಿದರು.ವಾಹನ ಅಪಘಾತಗಳು ಕಡಿಮೆ ಮಾಡಲು ರಾಷ್ಟಿöçÃಯ ಹೆದ್ದಾರಿ ರಸ್ತೆ ಬದಿಯ ಹಾಗೂ ಮಧ್ಯದ ಮರಗಳನ್ನು ವರ್ಷದಲ್ಲಿ ೩ ರಿಂದ ೪ ಬಾರಿ ಕಟಾವು ಮಾಡಬೇಕು ಎಂದು ಹೇಳಿದರು.ಬಸ್ ನಿಲ್ದಾಣಗಳಲ್ಲಿ ಎಲ್.ಇ.ಡಿ ಫಲಕಗಳ ಮೂಲಕ ಅಪಘಾತ ಫೋಟೋ ಮತ್ತು ವಿಡಿಯೋ ಪ್ರದರ್ಶನ ಹಾಗೂ ರಸ್ತೆ ಸಂಚಾರ ನಿಯಮಗಳ ಬಗ್ಗೆ ಜನರಿಗೆ ತಿಳಿಸಬೇಕು ಎಂದು ಕೆ.ಎಸ್.ರ್ಟಿ.ಸಿ ಅಧಿಕಾರಿಗಳಿಗೆ ಎಸ್.ಪಿ. ಲಕ್ಷö್ಮಣ ನಿಂಬರಗಿ ಅವರು ಸೂಚಿಸಿದರು.ಸಾರ್ವಜನಿಕರಿಗೆ ಹತ್ತಿರದ ಪ್ರದೇಶದಲ್ಲಿ ಮತ್ತು ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಭಾಗಗಳಲ್ಲಿ ಅಂಬುಲೆನ್ಸ್ ಸೌಲಭ್ಯ ನೀಡಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್.ಕೆ. ಹೆಚ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.