Belagavi

ರುಸ್ತುಂಪೂರ ಗ್ರಾಮ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ


ಯಮಕನಮರಡಿ : ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಪಾಶ್ಚಾಪೂರ ಜಿಲ್ಲಾ ಪಂಚಾಯತ ಸದಸ್ಯ ಮಂಜುನಾಥ ಪಾಟೀಲ ಇವರ ನೇತೃತ್ವದಲ್ಲಿ ಮಂಗಳವಾರ ದಿ ೦೨ ರಂದು ರುಸ್ತುಂಪೂರ ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಾಮಾನ್ಯ ಅ ವರ್ಗದ ಸದಸ್ಯ ಕನವಿನಟ್ಟಿ ಗ್ರಾಮದ ನಾಗಪ್ಪಾ ಮಲ್ಲಪ್ಪ ಚನ್ನವರ, ಮತ್ತು ಸಾಮಾನ್ಯ ಮಹಿಳಾ ಸದಸ್ಯರಾದ ಸುಹಾಸಿನಿ ಶೆಟ್ಟೆಪ್ಪಾ ಹಾಲಬಾವಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಹಿಡಕಲ್ ಡ್ಯಾಮ್ ಕ.ನಿ.ನಿ ಸ.ಕಾ.ನಿ ಅಭಿಯಂತರಾದ ಅರವಿಂದ ಜಮಖಂಡಿ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ರುಸ್ತುಂಪೂರ ಗ್ರಾ.ಪಂ ಪಿ.ಡಿ.ಓ ಸಿ.ಆರ್ ನಂದಗಾAವಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.


Leave a Reply