Belagavi

ಅಪರಿಚಿತ ಮಹಿಳೆ ಸಾವು


ಬೆಳಗಾವಿ, ಫೆ. ೦೨: ಬೆಳಗಾವಿ ನಗರದ ಕೇಂದ್ರ ಬಸ್‌ನಿಲ್ದಾಣದ ಆಟೋ ಸ್ಟಾö್ಯಂಡ ಹತ್ತಿರ ಅಪರಿಚಿತ ಮಹಿಳೆ (೬೦ ವರ್ಷ) ಫೆ. ೦೨ ರಂದು ಇವಳು ಕಣ್ಣಿಗೆ ಚಕ್ಕರ ಬಂದು ಕೆಳಗೆ ಬಿದ್ದಿದ್ದು ಅವಳನ್ನು ಅಲ್ಲಿದ್ದ ಆಟೋ ಚಾಲಕರು ಕೂಡಲೇ ಉಪಚಾರ ಕುರಿತು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗದ ಮಧ್ಯದಲ್ಲಿ ಅವಳು ಮರಣ ಹೊಂದಿದ್ದು ಇರುತ್ತದೆ. ಸದರಿ ಮೃತಳ ವಾರಸುದಾರರು ಪತ್ತೆಯಾಗಿರುವದಿಲ್ಲಾ ಕಾರಣ ಅವಳ ವಾರಸುದಾರರು ಪತ್ತೆಯಾದಲ್ಲಿ ಬೆಳಗಾವಿ ಮಾರ್ಕೆಟ ಪೊಲೀಸ್ ಠಾಣೆಗೆ ಅಥವಾ ಬೆಳಗಾವಿ ಕಂಟ್ರೋಲ ರೂಮಗೆ ಮಾಹಿತಿ ತಿಳಿಸಲು ಕೋರಲಾಗಿದೆ.
ಈ ಮಹಿಳೆಯ ಗುರುತು ಸಿಕ್ಕಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ಮಾರ್ಕೆಟ್ ಪೊಲೀಸ್ ಠಾಣೆ ಫೋನ ನಂ ೦೮೩೧-೨೪೦೫೨೪೨, ಪೊಲೀಸ್ ಇನ್ಸಪೆಕ್ಟರ್ ಮಾರ್ಕೆಟ್ ಪೊಲೀಸ್ ಠಾಣೆ ೯೪೮೦೮೦೪೦೪೫ ಸಂಪರ್ಕಿಸಿ ಎಂದು ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply