Koppal

ಕೂಲಿಕಾರರ ಸಮ್ಮುಖದಲ್ಲಿ ನರೇಗಾ ದಿವಸ ಆಚರಣೆ


ಕೊಪ್ಪಳ, ಫೆ.೦೨ : ಕೊಪ್ಪಳ ತಾಲ್ಲೂಕು ಪಂಚಾಯತ ವತಿಯಿಂದ ಇತ್ತೀಚೆಗೆ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಐಇಸಿ ಕಾರ್ಯಕ್ರಮದಡಿ ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಾಲಹಳ್ಳಿ ಗ್ರಾಮದ ಬಳಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರ ಸಮ್ಮುಖದಲ್ಲಿ ನರೇಗಾ ದಿವಸ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕ ಪಂಚಾಯತನ ಸಹಾಯಕ ನಿರ್ದೇಶಕರಾದ ಕೆ.ಸೌಮ್ಯ ಮಾತನಾಡಿ, ಪ್ರತಿವರ್ಷ ತನ್ನದೇ ಆದ ಬದಲಾವಣೆ ಹೊಂದುತ್ತಾ ಬಂದಿರುವ ನರೇಗಾ ಯೋಜನೆಯಲ್ಲಿ ಮುಂಚೆ ಕೂಲಿಕಾರರಿಗೆ ಕೂಲಿಯನ್ನು ಧಾನ್ಯಗಳ ರೂಪದಲ್ಲಿ ನೀಡಲಾಗುತ್ತಿತ್ತು. ಜಾಬ್‌ಕಾರ್ಡ್ ಹೊಂದಿದ ಯಜಮಾನ ಮಾತ್ರ ಬ್ಯಾಂಕ್ ಖಾತೆ ಹೊಂದಿದ್ದರೆ ಸಾಕು ಕೂಲಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಆದರೆ, ಸರ್ಕಾರ ಹೊರಡಿಸಿರುವ ಸುತ್ತೋಲೆ ಅನ್ವಯ ಜಾಬ್‌ಕಾರ್ಡ್ನಲ್ಲಿರುವ ಎಲ್ಲಾ ಸದಸ್ಯರು ವೈಯಕ್ತಿಕ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಜೊತೆಗೆ ಆಧಾರಕಾರ್ಡ ಬ್ಯಾಂಕ್ ಖಾತೆಗೆ ಜೋಡಣೆ ಮಾಡಲು ಆಧಾರ ಕಾರ್ಡ್ನ ಜೆರಾಕ್ಸ್ ಪ್ರತಿಯನ್ನು ಸಂಬAಧಪಟ್ಟ ಬ್ಯಾಂಕ್‌ಗೆ ನೀಡಿ ಲಿಂಕ್ ಮಾಡಿದಲ್ಲಿ ಮಾತ್ರ ಕೂಲಿ ಹಣ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಪ್ರತಿಯೊಬ್ಬರಿಗೆ ದಿನಕ್ಕೆ ಅಳತೆಗೆ ಅನುಗುಣವಾಗಿ ಕೆಲಸ ನಿರ್ವಹಿಸಿದಲ್ಲಿ, ಪೂರ್ತಿ ಪ್ರಮಾಣದಲ್ಲಿ ಕೂಲಿ ಹಣವನ್ನು ಪಾವತಿಸಲಾಗುತ್ತದೆ. ಕೆಲಸದ ಪ್ರಮಾಣ ಕಡಿಮೆಯಾದಲ್ಲಿ ಕೂಲಿ ಹಣವನ್ನು ಕಡಿಮೆ ಪಾವತಿಸಲಾಗುತ್ತದೆ. ಕೂಲಿಕಾರರು ಗುಳೆ ಹೋಗದೇ ಗ್ರಾಮ ಪಂಚಾಯತಿಯ ಕ್ರಿಯಾ ಯೋಜನೆಯಲ್ಲಿರುವ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿ ಕೂಲಿ ಪಡೆದು ಆರ್ಥಿಕ ಜೀವನಮಟ್ಟ ಸುಧಾರಿಸಿಕೊಳ್ಳಲು ಇದೊಂದು ಸದವಕಾಶ ಎಂದು ತಿಳಿಸಿದರು.
ಕೊಪ್ಪಳ ತಾಲೂಕು ಪಂಚಾಯತಿಯ ನರೇಗಾ ಐಇಸಿ ಸಂಯೋಜಕರಾದ ದೇವರಾಜ ಪತ್ತಾರ ಮಾತನಾಡಿ, ನರೇಗಾ ಯೋಜನೆಯ ಹಳೆ ಜಾಬ್‌ಕಾರ್ಡ್ಗಳನ್ನು ಗ್ರಾಮ ಪಂಚಾಯತಿಗೆ ಹಿಂತಿರುಗಿಸಿ ಹೊಸ ಮಾದರಿಯ ಜಾಬ್‌ಕಾರ್ಡ್ಗಳನ್ನು ಪಡೆಯಬೇಕು. ಎನ್‌ಎಂಆರ್‌ನಲ್ಲಿರುವ ಕೂಲಿಕಾರರು ಮಾತ್ರ ಕೂಲಿ ಕೆಲಸಕ್ಕೆ ಹಾಜರಾಗತಕ್ಕದ್ದು. ಜೊತೆಗೆ ಕಾಮಗಾರಿ ನಡೆದ ಸ್ಥಳದಲ್ಲಿ ಕೂಲಿಕಾರರು ಯಾವುದೇ ರೀತಿಯ ಅವಘಡಗಳು ನಡೆಯದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ನರೇಗಾ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಕುಟುಂಬಗಳ ಸರ್ವೆ ಕೈಗೊಳ್ಳಲಾಗುತ್ತಿದ್ದು, ಮಹಿಳೆಯರು ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಸದೃಢರಾಗಬೇಕೆಂದು ಕರೆ ನೀಡಿದರು. ಪ್ರತಿ ದಿನ ರೂ. ೨೭೫ ಕೂಲಿ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗುಳದಳ್ಳಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವಬಸಪ್ಪ ಹಂಚಿನಾಳ, ತಾಂತ್ರಿಕ ಸಂಯೋಜಕ ಬಸವರಾಜ, ತಾಂತ್ರಿಕ ಸಹಾಯಕ ಪ್ರವೀಣ ಗದಗ, ಕೂಲಿಕಾರರು, ಕಾಯಕ ಬಂಧುಗಳು, ೧೨೩೧ ಜನ ಕೂಲಿಕಾರರು ಹಾಜರಿದ್ದರು.


Leave a Reply