Koppal

ಕಾರ್ಯಕರ್ತರೇ ಪಕ್ಷದ ಜೀವಾಳು ಕಾರ್ಯಕರ್ತರೆ ನನ್ನ ಆಸ್ತಿ.ಬಿಜೆಪಿ ಕೊಪ್ಪಳ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಹೇಳಿಕೆ.


ಕುಷ್ಟಗಿ:ದಿನಾಂಕ 2-2-2021 ರಂದು ನಡೆದ ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪಾ ಗ್ರಾಮದಲ್ಲಿ ಕ್ಯಾದಿಗುಪ್ಪಾ ಗ್ರಾಮ ಪಂಚಾಯತಿಯಲ್ಲಿ ಜಯಶಾಲಿಯಾದ ಎಲ್ಲಾ ಗ್ರಾಮ ಪಂಚಾಯತ ಸದಸ್ಯರಿಗೆ ಮತ್ತು ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ ಹಾಗೂ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರು ಮಾಜಿ ಶಾಸಕರಾದ ದೊಡ್ಡನಗೌಡ ಎಚ್ ಪಾಟೀಲ್ ಸಾಹೇಬರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾದಿಗುಪ್ಪಾ ಗ್ರಾಮ ಪಂಚಾಯತ ಅಧ್ಯಕ್ಷರಾದ ರೇಣುಕಾ ಸಂಗಪ್ಪ ವಾಲಿಕಾರ ವಹಿಸಿದ್ದರು.
ಮುಖ್ಯಅತಿಥಿಗಳಾಗಿ ತಾಲೂಕ ಹಾಲುಮತ ಸಮಾಜದ ಅಧ್ಯಕ್ಷರಾದ ಮಲ್ಲಣ್ಣ ಪಲ್ಲೇದ,ಜಿಲ್ಲಾ ಪಂಚಾಯತ ಸದಸ್ಯರಾದ ವಿಜಯನಾಯಕ,ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ತಿಪ್ಪವ್ವ ಹೊಸಮನಿ,ಗ್ರಾಮ ಪಂಚಾಯತ ಸದಸ್ಯರಾದ ಶೇಖರಪ್ಪ ಉಪ್ಪಾರ, ಶರಣಪ್ಪ ಹರಿಜನ,ಬಸವರಾಜ ತಳವಾರ,ದೊಡ್ಡಬಸವ ಕರಡಿ,ಮುತ್ತಣ್ಣ ಕರಡಿ,ಮುತ್ತಮ್ಮ ರುಳ್ಳಿ,ಲಕ್ಷ್ಮೀಬಾಯಿ ಕಮ್ಮಾರ,ಭಾಗ್ಯಮ್ಮ ಶಿರಧರ,ಸಣ್ಣ ದೊಡ್ಡನಗೌಡ ಪಾಟೀಲ್,ರಮೇಶ ರಾಠೋಡ,ದುರಗವ್ವ ಹರಿಜನ, ಅಶೋಕ ಬೂದಿಹಾಳ,ನೇತ್ರಾವತಿ ಹಡಪಾದ ಗ್ರಾಮದ ಅನೇಕ ಮುಖಂಡರು,ತಾಯಂದಿರು,ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Leave a Reply