State

ಸ್ಪರ್ಧಾತ್ಮಕ ಪರೀಕ್ಷೆ ಉಚಿತ ತರಬೇತಿ ರದ್ದುಪಡಿಸಿದ್ದಕ್ಕೆ ಶಾಸಕಿ ಲಕ್ಷಿ÷್ಮ ಹೆಬ್ಬಾಳಕರ್ ಆಕ್ರೋಶ


ಬೆಂಗಳೂರು – ರಾಜ್ಯದಲ್ಲಿ ೨೦೨೦ -೨೧ನೇ ಸಾಲಿನಲ್ಲಿ ಐಎಎಸ್, ಕೆಎಎಸ್, ಬ್ಯಾಂಕಿAಗ್ ಉಚಿತ ತರಬೇತಿ ರದ್ದುಪಡಿಸಲಾಗಿದೆ. ಇದಕ್ಕೆ ಕಾರಣ ಕೊರೋನಾ.
ಕೊರೋನಾ ಕಾರಣದಲ್ಲಿ ಅನುದಾನ ಕೊರತೆಯಾಗಿದ್ದರಿಂದ ಈ ಉಚಿತ ತರಬೇತಿಗಳ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗಿಲ್ಲ ಎಂದು ರಾಜ್ಯ ಸರಕಾರ ವಿಧಾನಸಭೆಯಲ್ಲಿ ತಿಳಿಸಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀ£ವಾಸ ಪೂಜಾರಿ ಶಾಸಕಿ ಲಕ್ಷಿ÷್ಮ ಹೆಬ್ಬಾಳಕರ್ ಅವರ ಪ್ರಶ್ನೆಗೆ ಈ ಉತ್ತರ £Ãಡಿದ್ದಾರೆ.
ಪ್ರತಿ ವರ್ಷ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಐಎಎಸ್, ಕೆಎಎಸ್ ಮತ್ತು ಬ್ಯಾಂಕಿAಗ್ ತರಬೇತಿಯನ್ನು £Ãಡಲಾಗುತ್ತದೆ. ೨೦೧೯ರಲ್ಲಿ ಐಎಎಸ್ ತರಬೇತಿಗೆ ೩೩೦ ಹಾಗೂ ಬ್ಯಾಂಕಿAಗ್ ಪರೀಕ್ಷೆಗಾಗಿ ೧೬೨ ಅಭ್ಯರ್ಥಿಗಳು ಉಚಿತ ತರಬೇತಿ ಪಡೆದಿದ್ದಾರೆ. ಪ್ರತಿ ವರ್ಷ ಐಎಎಸ್ ಮತ್ತು ಕೆಎಎಸ್ ಗೆ ೭ ತಿಂಗಳು ಹಾಗೂ ಬ್ಯಾಂಕಿAಗ್ ಪರೀಕ್ಷೆಗೆ ೨ ತಿಂಗಳ ಉಚಿತ ತರಬೇತಿ £Ãಡಲಾಗುತ್ತದೆ ಎಂದು ಸಚಿವರು ವಿವರಣೆ £Ãಡಿದ್ದಾರೆ.
ತರಬೇತಿ £Ãಡುವ ಸಂಸ್ಥೆಗೆ ತರಬೇತಿ ಶುಲ್ಕವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದಲೇ ತುಂಬಲಾಗುತ್ತದೆ. ಅಭ್ಯರ್ಥಿಗಳಿಗೆ ಕೋರ್ಸ್ ಮಟೀರಿಯಲ್ಸ್ £Ãಡಲಾಗುತ್ತದೆ. ಜೊತೆಗೆ ಅಭ್ಯರ್ಥಿಗೆ ಮಾಸಿಕ ತರಬೇತಿ ಭತ್ಯೆಯನ್ನು ಸಹ £Ãಡಲಾಗುತ್ತದೆ.
ಐಎಎಸ್ ಪರೀಕ್ಷೆಗೆ ದೆಹಲಿಯಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಮಾಸಿಕ ೧೦ ಸಾವಿರ ರೂ. ಹೈದರಾಬಾದ್ ನಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ೮ ಸಾವಿರ ರೂ. ಬೆಂಗಳೂರಿನಲ್ಲಿ ತರಬೇತಿ ಪಡೆಯುವ ಸ್ಥಳೀಯ ಅಭ್ಯರ್ಥಿಗಳಿಗೆ ೪ ಸಾವಿರ ರೂ ಹಾಗೂ ಹೊರ ಜಿಲ್ಲೆಗಳ ಅಭ್ಯರ್ಥಿಗಳಿಗೆ ೬ ಸಾವಿರ ರೂ ಮಾಸಿಕ ಭತ್ಯೆ £Ãಡಲಾಗುತ್ತದೆ. ಕೆಎಎಸ್ ಮತ್ತು ಬ್ಯಾಂಕಿAಗ್ ತರಬೇತಿ ಪಡೆಯುವ ಸ್ಥಳೀಯ ಅಭ್ಯರ್ಥಿಗಳಿಗೆ ೪ ಸಾವಿರ ರೂ. ಹಾಗೂ ಹೊರ ಜಿಲ್ಲೆಗಳ ಅಭ್ಯರ್ಥಿಗಳಿಗೆ ೬ ಸಾವಿರ ರೂ. £Ãಡಲಾಗುತ್ತದೆ.
ಆದರೆ ಸಚಿವರ ಉತ್ತರದಿಂದ ತೃಪ್ತರಾಗದ ಶಾಸಕಿ ಲಕ್ಷಿ÷್ಮ ಹೆಬ್ಬಾಳಕರ್, ಈ ವರ್ಷ ಉಚಿತ ತರಬೇತಿ ರದ್ದುಪಡಿಸಿರುವ ಸರಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಇಂತಹ ಅವಕಾಶದಿಂದ ಯಾವುದೇ ಕಾರಣಕ್ಕೆ ವಂಚಿತರಾಗಬಾರದು. ಕೂಡಲೇ ಉಚಿತ ತರಬೇತಿಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.


Leave a Reply