Belagavi

ಢವಳೇಶ್ವರ: ಅಧ್ಯಕ್ಷ-ಕಳ್ಳಿಗುದ್ದಿ, ಉಪಾಧ್ಯಕ್ಷೆ-ಸತ್ತಿಗೇರಿ ಆಯ್ಕೆ


ಮೂಡಲಗಿ: ತಾಲೂಕಿನ ಢವಳೇಶ್ವರ ಗ್ರಾಮ ಪಂಚಾಯತಿಗೆ ಮಂಗಳವಾರ ಜರುಗಿದ ಅದ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಂಗಪ್ಪ ವೆಂಕಪ್ಪ ಕಳ್ಳಿಗುದ್ದಿ, ಉಪಾಧ್ಯಕ್ಷರಾಗಿ ರೇಣುಕಾ ಕರೆಪ್ಪ ಸತ್ತಿಗೇರಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಡಿ.ನವಿನಕುಮಾರ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಪ್ರಕಾಶ ಅಂಗಡಿ, ಮಹಾದೇವ ಮ್ಯಾಗಾಡಿ, ಗಂಗಾವತಿ ಉಪ್ಪಾರ, ಶಾಂತವ್ವ ಪೂಜೇರಿ, ಬಾಬುಸಾಬ ಮುಲ್ಲಾ, ಚಂದ್ರವ್ವ ಹರಿಜನ, ಕಲಾವತಿ ಸಮಗಾರ, ಮುಖಂಡರಾದ ಈರಣ್ಣಾ ಜಾಲಿಬೇರಿ. ಕೃಷ್ನಾ ಚನ್ನಾಳ, ಮಹಾದೇವ ನಾಡಗೌಡ, ಭೀಮಪ್ಪ ಆಡಿನವರ, ಪ್ರಕಾಶ ಪಾಟೀಲ, ಹನಮಂತ ನಾಯ್ಕ, ಈರಪ್ಪ ನಂದಗನ್ನವರ, ರಾಮಪ್ಪ ಬಾಗೋಜಿ, ಬಸಪ್ಪ ಬಾರ್ಕಿ ಪಿಡಿಒ ಎ.ಜಿ.ಪತ್ತಾರ, ಗ್ರಾ.ಪಂ ಸಿಬ್ಬಂದಿ ವರ್ಗ ಹಾಗೂ ಶವಳೇಶ್ವರ, ಮನ್ನಾಪೂರ, ಅರಳ್ಳಿಮಟ್ಟಿ ಗ್ರಾಮಸ್ಥರು ಇತ್ತಿತರರು ಇದ್ದರು.


Leave a Reply