Belagavi

ಖಾನಟ್ಟಿ ಗ್ರಾ.ಪಂಗೆ ಲಂಗೋಟಿ ಮತ್ತು ಹಾದಿಮನಿ ಆಯ್ಕೆ


ಮೂಡಲಗಿ: ೧೩ಸದಸ್ಯರ ಬಲ ಹೊಂದಿದ ತಾಲೂಕಿನ ಖಾನಟ್ಟಿ ಗ್ರಾಮ ಪಂಚಾಯತಗೆ ಮಂಗಳವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ತಲಾ ೭ಮತಗಳನ್ನು ಪಡೆದು ಅಧ್ಯಕ್ಷರಾಗಿ ಮಾಯವ್ವಾ ಅಡಿವೆಪ್ಪಾ ಲಂಗೋಟಿ ಉಪಾಧ್ಯಕ್ಷರಾಗಿ ರಾಧಾ ಸಿದ್ದಪ್ಪ ಹಾದಿಮನಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ತಿಳಿಸಿದ್ದಾರೆ.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ನಾಗಪ್ಪ ಯ.ಹಳ್ಳೂರ, ನಿಂಬೆವ್ವಾ ವೆಂಕಪ್ಪ ಮೇತ್ರಿ ೧ ಮತಗಳ ಮತÀದಿಂದ ಪರಾಭವಗೊಂಡರು.
ಈ ಸಂಧರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಚೇತನ ರಡ್ಡೇರಟ್ಟಿ, ಗೋಪಾಲ ನಿಂಗನ್ನೂರ, ವಂದನಾ ಸೂನಾರ, ಮಹಾದೇವಿ ತುಪ್ಪದ, ಶಾಂತವ್ವಾ ಶಾಬನ್ನವರ, ವಿಠ್ಠಲ್ ಅಂಗಡಿ, ಬಸಲಿಂಗವ್ವ ಮುಗಳಖೋಡ, ಈಶ್ವರ ಮುಗಳಖೋಡ, ಮಲ್ಲೇಶ ಮುಗಳಖೋಡ ಹಾಗೂ ಮುಖಂಡರಾದ ಶಿವನಪ್ಪ ಗುದಗನ್ನವರ, ಮಲ್ಲಪ್ಪ ಕೌಜಲಗಿ, ಸದಾಶಿವ ತುಪ್ಪದ, ದುಂಡಪ್ಪ ಲಂಗೋಟಿ, ತಮ್ಮಣ್ಣಾ ಲಂಗೋಟಿ, ಹೊಳೇಪ್ಪ ನಿಂಗನ್ನೂರ, ರಾಮಪ್ಪ ತುಪ್ಪದ, ಮಹಾಂತೇಶ ರಡ್ಡೇರಟ್ಟಿ, ಶ್ರೀಶೈಲ್ ತುಪ್ಪದ, ರಂಗಣ್ಣ ಸೊನ್ನಾರ, ಬಸಲಿಂಗ ನಿಂಗನ್ನೂರ, ಶಿವಲಿಂಗಪ್ಪ ದೊಡಮನ್ನಿ, ಸಿದ್ಧಪ್ಪ ಹಾದಿಮನಿ, ಶಿವನಪ್ಪ ಗಾಣಿಗೇರ, ಸಿದ್ದಪ್ಪ ಹಾದಿಮನಿ, ಈಶ್ವರ ತುಪ್ಪದ, ಗುರು ಪಾಟೀಲ, ಮಹಾದೇವ ಕರಗಣಿ, ಗ್ರಾ.ಪಂ ಪಿಡಿಒ ಎಚ್.ಎಲ್.ಬಸಳಗುಂದಿ, ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಮತ್ತಿತರು ಇದ್ದರು.


Leave a Reply