State

ಬೆಳಗಾವಿಯಲ್ಲಿ ಖಾಸಗಿ ಶಾಲಾ ಶಿಕ್ಷಕರ ಪ್ರತಿಭಟನೆ


ಬೆಳಗಾವಿ : ಫೀಸ್‍ ವಿನಾಯಿತಿ ಮಾಡಿರುವ ರಾಜ್ಯ ಸರ್ಕಾರದ ಆದೇಶ ವಿರೋಧಿಸಿ ಬೆಳಗಾವಿಯ ವಿವಿಧ ಖಾಸಗಿ ಶಾಲೆಗಳ ಶಿಕ್ಷಕರು ಬೃಹತ್ ಪ್ರತಿಭಟನೆ ನಡೆಸಿದರು. ನೀವು ಎಷ್ಟು ಬೇಕಾದಷ್ಟು ಫೀಸ್‍ ವಿನಾಯಿತಿ ಮಾಡಿ ಆದರೆ ನಮಗೆ ಸರ್ಕಾರದಿಂದಲೇ ಶುಲ್ಕವನ್ನು ನೀಡುವ ಕೆಲಸ ಮಾಡಿ ಎಂದು ಆಗ್ರಹಿಸಿದ್ದಾರೆ.

ಕೊರೊನಾ ಹಿನ್ನೆಲೆ ಜನಸಾಮಾನ್ಯರು ಸಂಕಷ್ಟದಲ್ಲಿರುವ ಹಿನ್ನೆಲೆ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಪಾಲಕರ ಒತ್ತಡದಿಂದ ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಫೀಸ್‍ದಲ್ಲಿ ಶೇ.30ರಷ್ಟು ವಿನಾಯಿತಿ ನೀಡಿ ಆದೇಶ ಹೊರಡಿಸಿದ್ದಾರೆ. ಸಧ್ಯ ಇದು ಖಾಸಗಿ ಶಾಲಾ ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಫೀಸ್‍ದಲ್ಲಿ ವಿನಾಯಿತಿ ನೀಡುವ ಮೂಲಕ ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಿರಿ, ಬರೀ ಬೆಂಗಳೂರು ಕೇಂದ್ರಿತವಾದ ಶಾಲೆಗಳನ್ನು ದೃಷ್ಟಿಯಿಂದ ಈ ರೀತಿ ಆದೇಶ ಹೊರಡಿಸಿದ್ದಿರಿ ಎಂದು ಬೆಳಗಾವಿಯ 60ಕ್ಕೂ ಹೆಚ್ಚು ಖಾಸಗಿ ಶಾಲೆಗಳ ಶಿಕ್ಷಕರು ಬುಧವಾರ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿನ ಫೀಸ್‍ಗೂ ಬೆಳಗಾವಿ ನಗರದ ಖಾಸಗಿ ಶಾಲೆಗಳಲ್ಲಿನ ಫೀಸ್‍ಗೂ ಸಾಕಷ್ಟು ವ್ಯತ್ಯಾಸವಿದೆ ಎಂಬುದು ಶಿಕ್ಷಣ ಸಚಿವರಿಗೆ ತಿಳಿಯಬೇಕಿತ್ತು. ಬರೀ ವಿದ್ಯಾರ್ಥಿಗಳು, ಪಾಲಕರ ಬಗ್ಗೆ ಮಾತ್ರ ಸರ್ಕಾರ ಗಮನಹರಿಸುತ್ತಿದೆ. ಆದರೆ ಅವರ ಫೀಸ್‍ನ್ನೆ ನಂಬಿಕೊಂಡಿರುವ ನಮ್ಮ ಬಗ್ಗೆ ಕಿಂಚಿತ್ತೂ ಯೋಚನೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಒಟ್ಟಾರೆ ಖಾಸಗಿ ಶಾಲೆಯ ಶಿಕ್ಷಕರಿಗೆ ಸರ್ಕಾರವೇ ವೇತನ ನೀಡಲಿ, ಸರ್ಕಾರಿ ಶಿಕ್ಷಕರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ನಮಗೂ ನೀಡಿ, ಎಷ್ಟು ಬೇಕಾದಷ್ಟು ಶುಲ್ಕವನ್ನು ವಿನಾಯಿತಿ ಮಾಡಲಿ ಎಂದು ಶಿಕ್ಷಕರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಶಿಕ್ಷಕರು ಭಾಗಿಯಾಗಿದ್ದರು.


Leave a Reply