State

ಪಂಚಮಸಾಲಿ ಪಾದಯಾತ್ರೆಗೆ ಎಂ. ಬಿ. ಪಾಟೀಲ ಬೆಂಬ


ಚಿತ್ರದುರ್ಗ : ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಬೃಹತ್ ಪಾದಯಾತ್ರೆ ಹೋರಾಟದಲ್ಲಿಂದು ಜತೆಗೂಡಿ ಪೂಜ್ಯ ಗುರು-ಹಿರಿಯರು ಹಾಗೂ ಸಮಾಜದ ಬಂಧುಗಳೊಂದಿಗೆ ನಿಂತು ಬೆಂಬಲ ವ್ಯಕ್ತಪಡಿಸಿದೆ. ಈಗ ಪಾದಯಾತ್ರೆ ಚಿತ್ರದುರ್ಗ ತಲುಪಿದ್ದು ಚಿತ್ರದುರ್ಗ ಮಹಿಳೆಯರು ಪಾದಯಾತ್ರೆಯಲ್ಲಿ ಒನಕೆ ಪ್ರದೇಶದಮಾಡಿ ಗಮನಸೆಳಿದರು ಹಾಗೂ ಪಾದಯಾತ್ರೆಗೆ ಮಾಜಿ ಗೃಹ ಸಚಿವ ಎಂ. ಬಿ. ಪಾಟೀಲ ಬೆಂಬಲ ವ್ಯಕ್ತಪಡಿಸಿದರು. ಮತ್ತು ಪಂಚಮಸಾಲಿ ಜಗದ್ಗುರುಗಳಾದ ಪೂಜ್ಯ ಬಸವಜಯ ಮೃತ್ಯುಂಜಯ ಸ್ವಾಮಿಗಳ, ವಚನಾಂದ ಸ್ವಾಮಿಗಳ ಪಾದಯಾತ್ರೆ
ಚಿತ್ರದುರ್ಗಗಕ್ಕೆ ಆಗಮಿಸಿದ ಹಿನ್ನೆಲೆ ಚಿತ್ರದುರ್ಗ ಮಠಾಧಿಪತಿಗಳಿಂದ ಪರಮಪೂಜ್ಯರ ಪಾದಯಾತ್ರೆಗೆ ಸ್ವಾಗತಿಸಿ ಗೌರವಿಸಿ ಶುಭಕೋರಿದರು ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ,
ಕಾಯಕಯೋಗಿ ಡಾ.ಶ್ರೀ ಶಾಂತವೀರ ಮಹಾಸ್ವಾಮೀಜಿ, ಮಡಿವಾಳ ಗುರುಪೀಠದ ಜಗದ್ಗುರುಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ, ನಾರಯಣ ಗುರುಪೀಠದ ಜಗದ್ಗುರು ಶ್ರೀ ರೇಣುಕಾನಂದ ಮಹಾಸ್ವಾಮೀಜಿ, ಅನ್ನಪೂರ್ಣೇಶ್ವರ ಮಠದ ಶ್ರೀ ಮಹಾಲಿಂಗ ಮಹಾಸ್ವಾಮೀಜಿ, ಭಕ್ತವೃಂದ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನ್ನವರ ಪಂಚಮಸಾಲಿ ಸಮುದಾಯ ಬಾಂಧವರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ)


Leave a Reply