Belagavi

ಇತಿಹಾಸ ಬರೆಯುವುದು ವಿಜ್ಞಾನಗಿಂತ ಕಠಿಣವಾದ ಕೆಲಸ : ಪ್ರೊ. ಕೆ.ಬಿ. ಗುಡಸಿ ಅಭಿಮತ


ಧಾರವಾಡ: ಇತಿಹಾಸವು ಒಂದು ಮಹತ್ವದ ದಾಖಲೆಯಾಗಿದ್ದು, ಪ್ರಪಂಚದಾದ್ಯAತ ಇತಿಹಾಸಕ್ಕೆ ತುಂಬಾ ಮನ್ನಣೆ ಇದೆ ಹಾಗೂ ಇತಿಹಾಸ ಬರೆಯುವುದು ವಿಜ್ಞಾನಗಿಂತ ಕಠಿಣವಾದ ಕೆಲಸ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಕೆ.ಬಿ. ಗುಡಸಿ ಅವರು ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪ್ರಾದೇಶಿಕ ಪತ್ರಾಗಾರ ಇಲಾಖೆ, ಧಾರವಾಡ ಮತ್ತು ಕಾಲೇಜಿನ ಇತಿಹಾಸ ವಿಭಾಗ, ಐಕ್ಯೂಎಸಿ ಅಡಿಯಲ್ಲಿ ಏರ್ಪಡಿಸಿದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಈ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ‘ಕರ್ನಾಟಕ ಏಕೀಕರಣ ಚಳುವಳಿ ಹಾಗೂ ಅವಿಭಜಿತ ಧಾರವಾಡ ಜಿಲ್ಲೆಯ ಸ್ವಾತಂತ್ರö್ಯ ಹೋರಾಟ’ ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ವಿಷಯದ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತç ವಿಭಾಗದ ಅಧ್ಯಕ್ಷ ಪ್ರೊ. ಎಸ್.ಕೆ. ಕಲ್ಲೋಳಿಕರ ಮಾತನಾಡಿ ಕರ್ನಾಟಕ ಸ್ವಾತಂತ್ರö್ಯ ಹೋರಾಟದ ಸಮಯದಲ್ಲಿ ಎಲ್ಲ ವರ್ಗಗಳ ಧ್ವನಿಯನ್ನು ದಾಖಲೀಕರಿಸುವ ಮೂಲಕ ನಿಜವಾದ ಇತಿಹಾಸವನ್ನು ಮರು ಪರಿಶೀಲಿಸುವ ಜವಾಬ್ದಾರಿ ಸಂಶೋಧಕರ ಮೇಲಿದೆ ಎಂದು ಹೇಳಿದರು.
ಮಂಜುಳಾ ಎಲಿಗಾರ, ಪ್ರೊ. ಅಶೋಕ ಶೆಟ್ಟರ, ಪ್ರೊ. ಎಸ್.ವೈ. ಮುಗಳಿ, ಪ್ರಾಂಶುಪಾಲ ಪ್ರೊ. ಎಸ್.ಬಿ. ಪಾಟೀಲ ವಿಚಾರ ಸಂಕೀರಣ ಕುರಿತು ಮಾತನಾಡಿದರು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಎಚ್. ಮೋರೆ ಅವರು ರಾಜ್ಯ ಮಟ್ಟದ ವಿಚಾರ ಸಂಕಿರಣದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ರಾಜ್ಯಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಂಗೀತಾ ಕಟ್ಟಿಮನಿ ಅವರು ನಿರೂಪಿಸಿ, ವಂದಿಸಿದರು.


Leave a Reply