Belagavi

ಬಾಡ ಗ್ರಾಮಪಂಚಾಯತ ಅಧ್ಯಕ್ಷ ಸರಿತಾ ಕದಮ ಉಪಾಧ್ಯಕ್ಷ ಪ್ರಕಾಶ ಮೈಲಾಕೆ ಆಯ್ಕೆ


ಸಂಕೇಶ್ವರ ಫೆ.ಬಾಡ ಗ್ರಾಮಪಂಚಾಯತ ಅಧ್ಯಕ್ಷ ರಾಗಿ ಸೌ.ಸರಿತಾ ಗುರುನಾಥ ಕದಮ ಹಾಗೂ ಉಪಾಧ್ಯಕ್ಷ ರಾಗಿ ಪ್ರಕಾಶ ಯಮನಪ್ಪಾ ಮೈಲಾಕೆ ಇವರು ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ. ಗ್ರಾಮ ಸ್ವರಾಜ್ಯ ಪೆನಾಲದ ಕಾರ್ಯಕರ್ತರು ಆದ್ಯಕ್ಷ ಉಪದ್ಯಾಕ್ಷ ರಿಗೆ ಪುಷ್ಪಹಾರ ಹಾಕಿ ಸನ್ಮಾನಿಸಿ ವಿಜಯೋತ್ಸವ ಆಚರಿಸಿದರು . ಅಧ್ಯಕ್ಷ ಸೌ.ಸರಿತಾ ಗುರುನಾಥ ಕದಮ ಇವರು ಮಾತನಾಡುತ್ತಾ ಶಾಸಕ ಉಮೇಶ ಕತ್ತಿ ಮಾಜಿ ಸಂಸದ ರಮೇಶ ಕತ್ತಿ ಇವರ ಮಾರ್ಗದರ್ಶನದಲ್ಲಿ ಬಾಡ ಗ್ರಾಮದಲ್ಲಿ ವಿವಿಧ ಕಾಮಗಾರಿ ಅಭಿವೃದ್ಧಿ ಮಾಡಲು ಸಹಕರಿಸಿದ್ದೇನೆ ಎಂದು ಹೇಳಿದರು ಉಪಾಧ್ಯಕ್ಷ ಪ್ರಕಾಶ ಯಮನಪ್ಪಾ ಮೈಲಾಕೆ ಮಾತನಾಡುತ್ತಾ ಬಾಡ ಗ್ರಾಮದಲ್ಲಿ ರಸ್ತೆ ,ಚರಂಡಿ ,ಶೌಚಾಲಯ ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು . ಇದೆ ಸಂದರ್ಭದಲ್ಲಿ ಗ್ರಾಮ ಸ್ವರಾಜ್ಯ ಪೆನಾಲದ ಸದಸ್ಯರು ಉಪಸ್ಥಿತರಿದ್ದರು .


Leave a Reply