Belagavi

ಮಹಿಳೆ ಮತ್ತು ಮಕ್ಕಳು ನಾಪತ್ತೆ


ಬೆಳಗಾವಿ ಫೆ.೦೪ : ಧಾರವಾಡದ ನಿವಾಸಿಯಾದ ಹೀನಾಕೌಸರ ಮೊಹೀಯೋದ್ದೀನ ಶಿಬಾರಗಟ್ಟಿ ಅವರು ತಮ್ಮ ಮಕ್ಕಳಾದ ಅಹದ್ ಮತ್ತು ಅಕ್ಸಾ ಇವರನ್ನು ಡಿಸೆಂಬರ್ ೧೭, ೨೦೨೦ ರಂದು ತನ್ನ ತವರು ಮನೆಯಲ್ಲಿ ತನ್ನ ತಂಗಿಯ ಮಗಳ ತೊಟ್ಟಲು ಹಾಕುವ ಕಾರ್ಯಕ್ರಮ ಇದ್ದ ಕಾರಣ ಡಿಸೆಂಬರ್ ೧೬ ರಂದು ಧಾರವಾಡದಿಂದ ಖಾನಾಪೂರಕ್ಕೆ ಬಂದಿದ್ದು ನಂತರ ತೊಟ್ಟಿಲು ಹಾಕುವ ಕಾರ್ಯಕ್ರಮ ಮುಗಿಸಿ ಡಿಸೆಂಬರ್ ೨೧ರಂದು ಮರಳಿ ಧಾರವಾಡಕ್ಕೆ ಹೋಗುತ್ತೇನೆ ಅಂತಾ ಬೆಳಗಾವಿ ಕೇಂದ್ರ ಬಸ್‌ನಿಲ್ದಾಣದಲ್ಲಿ ಧಾರವಾಡ ಬಸ್‌ದಲ್ಲಿ ಕುಳಿತು ಮರಳಿ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ ಎಂದು ಮಾರ್ಕೆಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೀನಾಕೌಸರ ಗಂಡ ಮೊಹೀಯೋದ್ದೀನ ಶಿಬಾರಗಟ್ಟಿ (೩೦ ವರ್ಷ) ಧಾರವಾಡ ಹಾಗೂ ಅಹದ್ (೦೭ ವರ್ಷ) ಅಕ್ಸಾ (೦೬ ವರ್ಷ), ಮಹಿಳೆ ೫ ಫೂಟ್ ೩ ಇಂಚು ಇದ್ದು, ಗೋದಿಗೆಂಪು ಮೈಬಣ್ಣ, ದುಂಡುಮುಖ, ದಪ್ಪ ಮೂಗು, ಕಪ್ಪು ಕೂದಲು, ಸದೃಢ ಮೈಕಟ್ಟು ಹೊಂದಿರುತ್ತಾರೆ. ೧೦ನೇ ತರಗತಿ ಓದಿರುತ್ತಾರೆ. ಕಪ್ಪು ಬಣ್ಣದ ಬುರ್ಕಾ ಧರಿಸಿರುತ್ತಾರೆ. ಕನ್ನಡ, ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾರೆ.
ಈ ಪ್ರಕಾರ ಇದ್ದು ಸದರಿಯವರ ಬಗ್ಗೆ ಸುಳಿವು ಸಿಕ್ಕಲ್ಲಿ ಬೆಳಗಾವಿ ಮಾರ್ಕೆಟ ಪೊಲೀಸ್ ಠಾಣೆಗೆ ಅಥವಾ ಬೆಳಗಾವಿ ಕಂಟ್ರೋಲ್ ರೂಮ್‌ಗೆ ಮಾಹಿತಿ ತಿಳಿಸಲು ಕೋರಲಾಗಿದೆ. ದೂರವಾಣಿ ಸಂಖ್ಯೆಗಳು: ಮಾರ್ಕೆಟ ಪೊಲೀಸ್ ಠಾಣೆ ಫೋನ ನಂ ೦೮೩೧-೨೪೦೫೨೪೨ ಗೆ ಸಂಪರ್ಕಿಸಿ ಎಂದು ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply