bagalkotBallaryBelagavibidarGadaggulburgakarwar uttar kannadaKoppalStatevijayapur

ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಮುಖಕ್ಕೆ  ಮಸಿ!!


ಬೆಂಗಳೂರು : ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಮುಖಕ್ಕೆ ಅಡ್ವೋಕೇಟ್ ಒಬ್ಬರು  ಮಸಿ ಬಳಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹಿಂದು ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿರುವ ಸಾಹಿತಿ ಕೆ ಎಸ್ ಭಗವಾನ್ ಅವರಿಗೆ ಮಸಿ ಬಳಿದ ಘಟನೆ ಬೆಂಗಳೂರಿನ 2ನೇ ಎಸಿಎಂಎಂ ನ್ಯಾಯಾಲಯದ ಆವರಣದಲ್ಲಿ  ನಡೆದಿದ್ದು. ಹಿಂದು ಧರ್ಮಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಅಡ್ವೊಕೇಟ್  ಮೀರಾ ರಾಘವೇಂದ್ರ  ಭಗವಾನ್ ವಿರುದ್ಧ  ಖಾಸಗಿ ದೂರು ದಾಖಲಿಸಿದ್ದರು.

ಪ್ರಕರಣ ಸಂಬಂಧ ಭಗವಾನ್‍  ಅವರು ಇಂದು ಕೋರ್ಟ್ ಗೆ  ಹಾಜರಾಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದಾದ ಬಳಿಕ ಭಗವಾನ್ ಅವರು ಕೋರ್ಟ್‍ನಿಂದ ಹೊರಗೆ ಬಂದಾಗ ಮೀರಾ ರಾಘವೇಂದ್ರ ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿದ್ದಾರೆ.

ಮುಖಕ್ಕೆ ಮಸಿ ಬಳಿದ ಘಟನೆ ಸಂಬಂಧ ಅಡ್ವೋಕೇಟ್  ಮೀರಾ ರಾಘವೇಂದ್ರ ಅವರ ವಿರುದ್ಧ  ಕೆ.ಎಸ್.ಭಗವಾನ್ ದೂರು ಸಲ್ಲಿಸಿದ್ದಾರೆ.


Leave a Reply