KoppalState

ಕ್ರಿಯಾಶೀಲತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅವಶ್ಯ: ಭಾಗ್ಯವತಿ ಮಾಣಿಕ ಬೋಲಾ

????????????????????????????????????

????????????????????????????????????
????????????????????????????????????

ಕೊಪ್ಪಳ, ಫೆ.04  : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಸಹಯೋಗದಲ್ಲಿ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದ ಸಭಾಂಗಣದಲ್ಲಿ ಗುರುವಾರ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರುಗಿತು.
ಜಿಲ್ಲಾ ಪಂಚಾಯತ್‌ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯವತಿ ಮಾಣಿಕ್ ಬೋಲಾ ಕ್ರೀಡಾ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜೀವನದಲ್ಲಿ ಕ್ರಿಯಾಶೀಲವಾಗಿರಲು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅವಶ್ಯವಾಗಿವೆ. ಕ್ರೀಡೆ ಮಾನವನಿಗೆ ದಿವ್ಯೌಷಧವಾಗಿದೆ. ಅಲ್ಲದೇ ಮನಸ್ಸು ಉಲ್ಲಾಸವಾಗಿರುತ್ತದೆ. ಎಲ್ಲರಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಅನಾವರಣಗೊಳಿಸಲು ಇದೊಂದು ಮುಖ್ಯ ವೇದಿಕೆಯಾಗಿದೆ. ಕೆಲಸದಲ್ಲಿ ಒತ್ತಡಗಳು ಸಾಮಾನ್ಯ, ಮತ್ತೆ ಬಾಲ್ಯದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ, ಸಂತೋಷವಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಅವರು ಹೇಳಿದರು.
ಜಿ.ಪಂ ಅಧ್ಯಕ್ಷರಾದ ಕೆ.ರಾಜಶೇಖರ ಹಿಟ್ನಾಳ ಮಾತನಾಡಿ, ಸರ್ಕಾರಿ ನೌಕರರು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿ ಭಾಗವಹಿಸುವುದು ಸಂತಸ. ಹಲವು ವರ್ಷಗಳ ಹಿಂದೆ ಸರ್ಕಾರಿ ನೌಕರಿ ಪಡೆದುಕೊಳ್ಳಬೇಕು ಎನ್ನುವ ಆಸೆ ಬಹುತೇಕರಿಗಿತ್ತು. ನೌಕರರ ಒತ್ತಡವನ್ನು ನೆನೆದು ಇಂದಿನವರು ಒಕ್ಕಲುತನ ಸೇರಿದಂತೆ ತಮ್ಮಿಷ್ಟದ ಕಾರ್ಯಗಳ ಕಡೆ ಹೋಗುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರಿ ನೌಕರರಿಗೆ ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಇಂತಹ ಕಾರ್ಯಕ್ರಮಗಳು ಅವಶ್ಯಕ ಎಂದರು.
ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ ಮಾತನಾಡಿ, ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಅದು ವಿವಿಧ ಹಣ್ಣುಗಳ ಮಿಶ್ರಣದಿಂದ ಮಾಡಿದ ‘ಸಲಾಡ್’ ಇದ್ದಂತೆ. ಅದನ್ನು ಸವಿಯಬೇಕು. ಸರ್ಕಾರಿ ನೌಕರರು ಒಂದು ವರ್ಷ ಕಾಲ ಕೋವಿಡ್-19 ನಿಂದ ಪರದಾಡಿದ್ದೀರಿ, ಕೋವಿಡ್ ಗುಂಗಿನಿAದ ಹೊರಬನ್ನಿ. ಹಬ್ಬ ಮಾಡಿ, ಆನಂದಿಸಿ, ದೈಹಿಕ ಹಾಗೂ ಮಾನಸಿಕ ಸದೃಢರಾಗಿ , ಕ್ರೀಡಾ ಸ್ಪೂರ್ತಿ ಹೊಂದಬೇಕು ಎಂದರು.
ತಾ.ಪಂ ಅಧ್ಯಕ್ಷ ಬಾಲಚಂದ್ರನ್ ಮಾತನಾಡಿ, ಕ್ರೀಡೆಯು ವ್ಯಾಯಾಮದ ಭಾಗವಾಗಿದೆ. ಕ್ರೀಡೆಗಳಲ್ಲಿ ಗೆಲ್ಲುವುದಷ್ಟೇ ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ. ಸರ್ಕಾರಿ ನೌಕರರು ಸಾರ್ವಜನಿಕ ಒತ್ತಡದಲ್ಲಿರುತ್ತೀರಿ. ಒತ್ತಡದಿಂದ ಹೊರಬನ್ನಿ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಜುಮ್ಮನ್ನನವರ ಮಾತನಾಡಿ, ಸರ್ಕಾರಿ ನೌಕರರು ಇಂತಹ ಸ್ಪರ್ಧೆಗಳ ಆಯೋಜನೆಯಿಂದ ಮಾನಸಿಕ ಹಾಗೂ ದೈಹಿಕ ಸಶಕ್ತರಾಗುತ್ತಾರೆ. ಅಲ್ಲದೇ ನಮ್ಮ ಜಿಲ್ಲೆಯಲ್ಲಿ ಸರ್ಕಾರಿ ನೌಕರರು ಪ್ರತಿಸಲವೂ ರಾಜ್ಯ, ರಾಷ್ಟç ಮಟ್ಟದವರೆಗೂ ತಲುಪಿ ಯಶಸ್ಸನ್ನು ಕಾಣುತ್ತಿದ್ದು, ಇದು ನಮ್ಮ ಕೊಪ್ಪಳ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಜಿ.ಪಂ. ಉಪಾಧ್ಯಕ್ಷೆ ಬೀನಾ ಗೌಸ್ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಗುಂಡು ಎಸೆಯುವುದರ ಮೂಲಕ ಕ್ರೀಡೆಗೆ ಚಾಲನೆ ನೀಡಿದರು. ಕ್ರೀಡಾಪಟುಗಳು ಪಥ ಸಂಚಲನ ಮಾಡಿದರು. ಸದಾಶಿವ ಪಾಟೀಲ್ ರಾಷ್ಟಗೀತೆ ಹಾಗೂ ರೈತಗೀತೆ ಪ್ರಸ್ತುತ ಪಡಿಸಿದರು.
ಈ ಸಂದರ್ಭದಲಿ ಕ.ರಾ.ಸ.ನೌಕರರ ಸಂಘದ ಗೌರವಾಧ್ಯಕ್ಷ ಮುಸ್ತಫಾ ಕುದರಿಮೋತಿ, ಕಾರ್ಯಾಧ್ಯಕ್ಷ ಶಿವಪ್ಪ ಜೋಗಿ, ಪ್ರಧಾನ ಕಾರ್ಯದರ್ಶಿ ಶಂಕರಗೌಡ ಮಾಲಿಪಾಟೀಲ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಯಲಬುರ್ಗಾ, ಕುಷ್ಟಗಿ, ಗಂಗಾವತಿ, ಕನಕಗಿರಿ, ಕಾರಟಗಿ, ಕುಕನೂರು ತಾಲ್ಲೂಕಾ ಘಟಕ ಮತ್ತು ಯೋಜನಾ ಘಟಕ ಮುನಿರಾಬಾದ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.


Leave a Reply