KoppalState

ಫೆ.08 ರಿಂದ ಜಿಲ್ಲಾ ಕ್ರೀಡಾಶಾಲೆ/ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಆರಂಭ


ಕೊಪ್ಪಳ, ಫೆ.04  : ಜಿಲ್ಲಾ ಪಂಚಾಯತ್ ಕೊಪ್ಪಳ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕ್ರೀಡಾಶಾಲೆ/ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಫೆ.08 ರಿಂದ ಫೆ.18 ರವರೆಗೆ ನಡೆಯಲಿದೆ.
ಫೆ.08 ರಂದು ಗಂಗಾವತಿಯ ತಾಲೂಕು ಕ್ರೀಡಾಂಗಣದಲ್ಲಿ, ಫೆ.09 ರಂದು ಕನಕಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ, ಫೆ.10 ರಂದು ಕಾರಟಗಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ, ಫೆ.12 ರಂದು ಯಲಬುರ್ಗಾದ ತಾಲೂಕ ಕ್ರೀಡಾಂಗಣದಲ್ಲಿ, ಫೆ.13 ಕುಕನೂರಿನ ವಿದ್ಯಾನಂದ ಗುರುಕುಲದಲ್ಲಿ, ಫೆ.15 ರಂದು ಕುಷ್ಟಗಿಯ ತಾಲೂಕು ಕ್ರೀಡಾಂಗಣದಲ್ಲಿ, ಫೆ.16 ರಂದು ಮತ್ತು 18 ರಂದು ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 11 ಗಂಟೆಯಿAದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ವಿದ್ಯಾರ್ಥಿಗಳು ನಿಗದಿತ ದಿನಾಂಕಗಳAದು ಸರಿಯಾದ ಸಮಯಕ್ಕೆ ಕ್ರೀಡಾಂಗಣದಲ್ಲಿ ಹಾಜರಿರಬೇಕು. ಒಂದು ಕೇಂದ್ರದಲ್ಲಿ ಭಾಗವಹಿಸಲು ಅನಾನುಕೂಲವಾದಲ್ಲಿ ತಮಗೆ ಅನುಕೂಲವಾದ ಬೇರೆ ಕೇಂದ್ರದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಂದ ಶಾಲಾ ದೃಢೀಕರಣ ಪತ್ರ ಕಡ್ಡಾಯವಾಗಿರುತ್ತದೆ. ಆಧಾರ್ ಕಾರ್ಡ್ನಲ್ಲಿ ಜನ್ಮ ದಿನಾಂಕ ನಮೂದಿಸಿದ್ದರೂ ಅರ್ಹಗೊಳಿಸಲಾಗುವುದು. ಪ್ರಸ್ತುತ 2020-21ನೇ ಸಾಲಿನಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಜನ್ಮದಿನಾಂಕ 01.06.2010ರ ನಂತರ ಜನಸಿರಬೇಕು. ಜನ್ಮ ದಿನಾಂಕ 01-06-2021ಕ್ಕೆ 11 ವರ್ಷ ವಯೋಮಿತಿ ಒಳಗಿನವರಿರಬೇಕು, ಮುಂದಿನ ಸಾಲಿಗೆ 5ನೇ ತರಗತಿಗೆ ಪ್ರವೇಶ ಪಡೆಯುವ ಅರ್ಹತೆ ಇರಬೇಕು.
ಪ್ರಸಕ್ತ ಸಾಲಿನಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಉತ್ತೀರ್ಣಗೊಂಡಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ 5ನೇ ತರಗತಿಗೆ ಪ್ರವೇಶಾತಿ ಒದಗಿಸಲಾಗುತ್ತದೆ. 4ನೇ ತರಗತಿಯ ವಿದ್ಯಾರ್ಥಿಗಳಿಗೆ ಕನಿಷ್ಠ ಎತ್ತರ – 145 ಸೆಂ.ಮೀ ಇರತಕ್ಕದ್ದು. ಕ್ರೀಡಾ ಕಿಟ್‌ನೊಂದಿಗೆ ಆಯ್ಕೆಯಲ್ಲಿ ಭಾಗವಹಿಸತಕ್ಕದ್ದು. ಸರ್ಕಾರದ ಕೋವಿಡ್-19 ಮಾರ್ಗಸೂಚಿಯನ್ವಯ ವಿದ್ಯಾರ್ಥಿಗಳು ಆಯ್ಕೆ ಕೇಂದ್ರಗಳಲ್ಲಿ ಭಾಗವಹಿಸತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಎ.ಎನ್ ಯತಿರಾಜು, ಖೋಖೋ ತರಬೇತುದಾರರು ಮೊ.94486-33146. ಸುರೇಶ, ವಾಲಿಬಾಲ್ ತರಬೇತುದಾರರು ಮೊ.ಸಂ.99015-27333, ಶರಣಬಸವ ಬಂಡಿಹಾಳ, ತಾಲೂಕು ಕ್ರೀಡಾಧಿಕಾರಿಗಳು, ಕೊಪ್ಪಳ ಮೊ : 90367-73070, ರಂಗಸ್ವಾಮಿ, ತಾಲೂಕು ಕ್ರೀಡಾಧಿಕಾರಿಗಳು, ಗಂಗಾವತಿ ಮೊ:74117-55523, ಮಹಾಂತೇಶ ಜಾಲಿಗಿಡದ, ತಾಲೂಕು ಕ್ರೀಡಾಧಿಕಾರಿಗಳು, ಕುಷ್ಟಗಿ ಮೊ.99455-01033, ಹನುಮಂತಪ್ಪ ವಗ್ಯಾನವರ್, ತಾಲೂಕು ಕ್ರೀಡಾಧಿಕಾರಿಗಳು, ಯಲಬುರ್ಗಾ ಮೊ:89702-88857, ಹನುಮೇಶ ಪೂಜಾರ, ಕ್ರೀಡಾಶಾಲೆ ಸಹಾಯಕರು ಮೊ.80959-36395 ಅಥವಾ ಸಹಾಯಕ ನಿರ್ದೇಶಕರ ಕಚೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ಇಲ್ಲಿಗೆ ಖುದ್ದಾಗಿ ಸಂಪರ್ಕಿಸಬಹುದು ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply