Belagavi
ಪೌಷ್ಠಿಕ ಆಹಾರ ಅಧ್ಯಯನಕ್ಕೆ ಪೂರಕ: ಬಸಪ್ಪಾ ಉರಬಿನಹಟ್ಟಿ

ಅಂಕಲಗಿ. ೦೫ – ಸರ್ಕಾರದ ವಿವಿಧ ಯೋಜನೆಗಳಲ್ಲಿ ವಿದ್ಯಾರ್ಥಿಗಳಿಗೆ ಕೊಡಮಾಡಿದ ಬಿಸಿಯೂಟದ ಯೋಜನೆ ಅತ್ಯಂತ ಶ್ಲ್ಯಾಘನೀಯ. ಎಂದು ಕೆ.ಜೆ.ಎಸ್.ಶಿಕ್ಷಣ ಸಂಸ್ಥೆ ಯ ಹಿರಿಯ ನಿರ್ದೇಶಕ, ಬಸಪ್ಪಾ ಉರಬಿನಹಟ್ಟಿ ಹೇಳಿದರು. ಅವರು ಶುಕ್ರವಾರ. ಸಂಸ್ಥೆಯ ಅಕ್ಕತಂಗೇರಹಾಳ ಎಸ್.ಎ.ಫ್ರೌಢ ಶಾಲಾ ಸ್ಥಳಾಂತರ ಶಾಲೆಯ ವಿದ್ಯಾರ್ಥಿಗಳಿಗೆ ೫೫ ದಿನಗಳ ಆಹಾರ ಧಾನ್ಯ ವಿತರಿಸಿ ಮಾತನಾಡಿದರು. ಪೌಷ್ಟಿಕ ಆಹಾರ ಅಧ್ಯಯನ ಕ್ಕೆ ಪೂರಕ. ಬಡ ಮತ್ತು ಸಾಮಾನ್ಯ ಜನರಿಗೆ ಹೊರೆಯಾದ ಪೌಷ್ಟಿಕ ಆಹಾರ ಕೊರತೆ ನೀಗಿಸಲು ಸರ್ಕಾರ ಕೊಡ ಮಾಡಿದ ಈ ಯೋಜನೆ ಮತ್ತು ಕ್ರಮ ಅತ್ಯಂತ ಸೂಕ್ತ ಮತ್ತು ಪ್ರಶಂಶಾರ್ಹ ಎಂದರು. ಸುಮಾರು ೧೫೦ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ವಿತರಿಸಿದರು..
ಶಾಲೆಯ ಮೇಲ್ವಿಚಾರಕ ರಾದ ಬಿ.ಬಿ. ನಿರ್ವಾಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಯೋಜನೆಯ ಸದ್ಬಳಕೆಗೆ ಕರೆ ನೀಡಿದರು. ಸಹ ಶಿಕ್ಷಕರಾದ ಓ.ಕೆ.ಕಮ್ಮಾರ, ಎಲ್.ಎಮ್.
ಭಜಂತ್ರಿ, ಎಸ್.ಬಿ.ತಳವಾರ, ಮಹಾನಂದಾ ಕೊಳದೂರ, ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಉಪಸ್ತಿತರಿದ್ದರು.