bagalkotBallaryBelagavibidarGadaggulburgaKarnatakakarwar uttar kannadaKoppalvijayapur

ಶಿಬಿರಾರ್ಥಿಗಳಿಂದ ಪ್ರದರ್ಶನಗೊಂಡ ” ವಿದೂಷಕ ” ನಾಟಕ

ಬೆಳಗಾವಿ : ಮೊಬೈಲ್ ಬದಿಗಿಟ್ಟು ಹಲವು ತಿಂಗಳುಗಳ ಕಾಲ ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿ೦ದ ದಿ. ಚಂದ್ರಕಾಂತ ಕುಸನೂರವರ ” ವಿದೂಷಕ “ನಾಟಕ ಬೆಳಗಾವಿಯಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡಿತು.

ನಾಟಕಕಾರ ನಿರ್ದೇಶಕ ಬಾಬಾಸಾಹೇಬ ಕಾಂಬಳೆ ಅವರ ನೇತೃತ್ವದಲ್ಲಿ ನಡೆದ ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದರು , ಅಷ್ಟೇ ಪರಿಣಾಮಕಾರಿಯಾಗಿ ಅಭಿನಯಿಸಿದರು ,ಇದು ಅವರ ಮೊದಲ ಪ್ರದರ್ಶನ ಎಂದು ಅನ್ನಿಸಲೇ ಇಲ್ಲ .
ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರವನ್ನು ಬಿಟ್ಟು ಹೊರಗಡೆ ಆವರಣದ ಬಯಲಿನಲ್ಲಿ ಪ್ರದರ್ಶನ ಗೊಂಡ ” ವಿದೂಷಕ ” ನಿಗೆ ಪ್ರೇಕ್ಷಕರು ಭರಪೂರ ಸಂಖ್ಯೆಯಲ್ಲಿ ಬಂದು ಎಂಜಾಯ್ ಮಾಡಿದರು.
ಹಿರಿಯ ಗಾಂಧೀವಾದಿ ಶಿವಾಜಿ ಕಾಗಣಿಕರ ಅವರು ನಾಟಕಕ್ಕೆ ಚಾಲನೆ ನೀಡಿ ಸಾಂದರ್ಭಿಕವಾಗಿ ಮಾತನಾಡಿದರು .
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ರಾಮಕೃಷ್ಣ ಮರಾಠೆ ಮಾತನಾಡಿ ದಿ .ಕೂಸನೂರ್ ಅವರ ಅಸಂಗತ ನಾಟಕ “ವಿದೂಷಕ “ಕುಸನೂರ ಅವರು ಬರೆದ ಮೂವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಇದು ವಿಶೇಷವಾಗಿದೆ , ಅವರಿಲ್ಲದ ಈ ಸಂದರ್ಭದಲ್ಲಿ ಅವರ ನಾಟಕ ಪ್ರದರ್ಶನವೇ ಅವರಿಗೆ ನಿಜವಾದ ಶ್ರದ್ಧಾಂಜಲಿ ಎಂದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು ಮಾತನಾಡಿ ಸಾಂಸ್ಕೃತಿಕ ಕ್ಷೇತ್ರಕ್ಕಾಗಿಯೇ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಇರುವ ಯೋಜನೆಗಳನ್ನು ಮತ್ತು ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು,ಕಲೆಗಳು ಉಳಿಯಬೇಕು ಅವುಗಳನ್ನು ಉಳಿಸುವ ಕಾರ್ಯ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಮತ್ತು ನಿರ್ಮಾಪಕ ಮುರುಗೇಶ್ ಶಿವಪೂಜಿ , ನಟ ನಿರ್ದೇಶಕ ನಾಟಕಕಾರ ಬಾಬಾ ಸಾಹೇಬ್ ಕಾಂಬಳೆ, ಸಾಮಾಜಿಕ ಕಾರ್ಯಕರ್ತರಾದ ಅಶೋಕ್ ರೆಡ್ಡಿ ಪ್ರೊ ವಿಜಯಕುಮಾರ್ ಜವರೇ ಅನೀಲ ಕಾಂಬಳೆ ನಂದಾದೀಪ ಸೈನಿಕ್ ಮೊದಲಾದವರು ಉಪಸ್ಥಿತರಿದ್ದರು .ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಯನ್ನು ಮಾಡಿದ ವಿನಾಯಕ ಕೇಸರಕರ್ ಕಿರಣ ಮಾಳನ್ನವರ ಮಹದೇವ್ ಮೊಕಾಶಿ ಮಹಾಬಳೇಶ್ವರ ಸಾಬಣ್ಣವರ ಅವರನ್ನು ಸನ್ಮಾನಿಸಲಾಯಿತು .
ಇತ್ತೀಚೆಗೆ ಅಗಲಿದ ಸಾಹಿತಿ ಚಂದ್ರಕಾಂತ ಕುಸನೂರ ,ರಂಗಕರ್ಮಿ ದಿಲಾವರ್ ನದಾಫ್ ಹಾಗೂ ನಟ ಚೇತನ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು .ರಂಗ ಕಲಾವಿದರಾದ ಕಿರಣ್ ಒಬ್ಬ ಭಾರತಿ ಪಾಟೀಲ ವಿನೋದ ವಿಶ್ವನಾಥ ಶಿವಕುಮಾರ್ ಬಸವರಾಜ್ ಪ್ರೇಮಾ ಕ್ರಿಸ್ತಾ ಬಸವರಾಜ ತಳವಾರ ಮುಂತಾದವರು ತಮ್ಮ ವಿಶೇಷ ಅಭಿನಯದ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.ಬಾಬಾ ಸಾಹೇಬ್ ಕಾಂಬಳೆ  ಅವರು ಕಾರ್ಯಕ್ರಮದಲ್ಲಿ ಸ್ವಾಗತಿಸಿದರು. ಬಸವರಾಜ ತಳವಾರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು .

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker