Belagavi

ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಸಾಧನೆ   

ಸಂಕೇಶ್ವರ ಫೆ.ನಗರದ  ಶ್ರೀ.ಬಿರೇಶ್ವರ ಶಿಕ್ಷಣ ಸಂಸ್ಥೆಯ ಕೃಷ್ಣ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವಿದ್ಯಾರ್ಥಿನಿಯರಾದ ಕುಮಾರಿ ವೈಷ್ಣವಿ ಕಣಗಲಿ ಪ್ರಥಮ ಬಿ.ಎ.ಎಂ.ಎಸ್.ಪರೀಕ್ಷೆಯಲ್ಲಿ ಶರೀರ ಕ್ರಿಯಾ ವಿಷಯದಲ್ಲಿ 3 ನೇ ಸ್ಥಾನ ,ಪದಾರ್ಥ ವಿಜ್ಞಾನ ವಿಷಯದಲ್ಲಿ 4 ನೇ ಸ್ಥಾನ ,ಸಂಸ್ಕೃತ ವಿಷಯದಲ್ಲಿ 7 ನೇ ಸ್ಥಾನ . ಸನಾ ನಾಯಿಕ ದ್ವಿತೀಯ ಬಿ.ಎ.ಎಂ.ಎಸ್.ಚರಕ ಸಂಹಿತಾ ವಿಷಯದಲ್ಲಿ 6 ನೇ ಸ್ಥಾನ .ಮತ್ತು ರವೀನಾ ಬೆನಡೆ ಪ್ರಥಮ ಬಿ.ಎ.ಎಂ.ಎಸ್.ಶರೀರ ರಚನಾ ವಿಷಯದಲ್ಲಿ 20 ನೇ ಸ್ಥಾನವನ್ನು ರಾಜೀವಗಂಧಿ ಆರೋಗ್ಯ ವಿಶ್ವವಿದ್ಯಾಲಯ ಕರ್ನಾಟಕ ಪರೀಕ್ಷೆಯಲ್ಲಿ ಪಡೆದು ಕೊಂಡು ಸಂಸ್ಥೆಗೆ ಪಾಲಕರಿಗೆ ಹಾಗೂ ನಗರಕ್ಕೆ ಹೆಮ್ಮೆಯನ್ನು ತಂದಿದ್ದಾರೆ.

ಈ ವಿದ್ಯಾರ್ಥಿನಿಯರು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ.ನಾಗಪ್ಪಣ್ಣಾ ಕರಜಗಿ ಚೇರ್ ಮನ್ನರಾದ ಡಾ.ಜಯಪ್ರಕಾಶ ಕರಜಗಿ ,ಕಾರ್ಯದರ್ಶಿಗಳಾದ ಡಾ.ಸಂತೋಶಕುಮಾರ ಖಜ್ಜನ್ನವರ ಪ್ರಾಚಾರ್ಯರಾದ ಡಾ.ಮಂಜುನಾಥ ಗವಿಮಠ ಹಾಗೂ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರ ಹೃತ್ಪೂರ್ವಕವಾಗಿ ಅಭಿನಂದಿಸಿದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker