ಸೊಪ್ಪಿಮಠರಿಗೆ ಸಹಕಾರ ರತ್ನ ಪ್ರಶಸ್ತಿ

ಬೈಲಹೊಂಗಲ ೮: ಕರ್ನಾಟಕ ರಾಜ್ಯ ನೀರಾವರಿ ನಿಗಮದ ಅಧಿಕಾರಿ
ಹಾಗೂ ಪಟ್ಟಣದ ನಿವಾಸಿ ವೀರಭದ್ರಯ್ಯಾ ಗು.ಸೊಪ್ಪಿಮಠ ಇವರಿಗೆ
ಕರ್ನಾಟಕ ಸಹಕಾರ ರತ್ನ ಪ್ರಶಸ್ತಿ ದೊರೆತಿದೆ.
ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜನೀಯರಿAಗ್
ಪ್ರತಿಷ್ಠಾನ ಟ್ರಸ್ಟ್ ಬೆಂಗಳೂರ ಇವರು ಪ್ರಶಸ್ತಿ ನೀಡಿ
ಗೌರವಿಸಿದ್ದಾರೆ. ಭಾರತೀಯ ಕ್ರಾಂತಿಕಾರಿ ಕಾರ್ಮಿಕ ಸಂಘಟನೆಗಳ
ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷರಾಗಿರುವ ವೀರಭದ್ರಯ್ಯಾ
ಅವರು ಮಾಡಿದ ಉದಾತ್ತ ಕಾರ್ಯಗಳನ್ನು ಪರಿಗಣಿಸಿ ಪ್ರಶಸ್ತಿ
ನೀಡಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ
ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ
ಚಂದ್ರಶೇಖರನಾಥ ಶ್ರೀಗಳು, ಕರ್ನಾಟಕ ಜಾನಪದ ಪರಿಷತ್
ಅಧ್ಯಕ್ಷ ಟಿ.ತಿಮ್ಮೇಗೌಡ, ಗೀತ ರಚನೆಕಾರ
ಡಾ.ದೊಡ್ಡರಂಗೇಗೌಡ, ಚಿತ್ರನಟಿ ಗಿರಿಜಾ ಲೋಕೇಶ,
ಪ್ರತಿಷ್ಠಾನದ ಅಧ್ಯಕ್ಷ ರಮೇಶ ಸುರ್ವೆ, ಗೌರವಾಧ್ಯಕ್ಷ
ಕೆ.ಮಹೇಂದ್ರಸಿAಗ್ ರಾಜ್ಪುರೋಹಿತ್, ಬೆಳಗಾವಿ ರಂಭಾಪುರಿ
ಶಾಖಾಮಠದ ಕಲ್ಮೇಶ್ವರ ಸ್ವಾಮಿಗಳು ಉಪಸ್ಥಿತರಿದ್ದರು ಧ್ಕ್ಕ್
ಲೋಕೇೇೇೇ