Koppal

ಕ್ಷಯ ನಿರ್ಮೂಲನೆಯಲ್ಲಿ ಖಾಸಗಿ ವೈದ್ಯರ ಪಾತ್ರ ಮಹತ್ವದ್ದು : ಡಾ.ಮಹೇಶ ಎಂ.ಜಿ

ಕೊಪ್ಪಳ ಫೆ.೧೦ : ಕಳೆದ ಎರಡು ವರ್ಷಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಅತಿ ಹೆಚ್ಚು ಕ್ಷಯರೋಗಿಗಳನ್ನು ಪತ್ತೆಮಾಡಿ ಚಿಕಿತ್ಸೆಗೊಳಪಡಿಸಲಾಗಿದೆ. ಇದರಲ್ಲಿ ಖಾಸಗಿ ವೈದ್ಯರ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಮಹೇಶ್ ಎಂ.ಜಿ ಹೇಳಿದರು.
ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಟಿಬಿ ವಿಭಾಗ ಕೊಪ್ಪಳ ಹಾಗೂ ಭಾರತೀಯ ವೈದ್ಯಕೀಯ ಸಂಘ(ಐಎAಎ) ಗಂಗಾವತಿ ಇವರ ಸಹಯೋಗದೊಂದಿಗೆ ಖಾಸಗಿ ವೈದ್ಯರಿಗೆ ಭಾನುವಾರದಂದು ಸಂಗಾಪುರದ ಮಾನಸ ಗಂಗೋತ್ರಿ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ಮುಂದುವರೆದ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಾಗಾರದಲ್ಲಿ ರಾಷ್ಟಿçÃಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಖಾಸಗಿ ವೈದ್ಯರ ಪಾತ್ರದ ಕುರಿತು ಮಾತನಾಡಿದರು.
ಇಂದಿಗೂ ಬಹಳಷ್ಟು ಕ್ಷಯರೋಗಿಗಳು ಕಳಂಕ, ತಾರತಮ್ಯದ ಕಾರಣ ಹೊರಬರುತ್ತಿಲ್ಲ. ಅದರಲ್ಲಿ ಅನೇಕ ಜನರು ಖಾಸಗಿಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಖಾಸಗಿಯಲ್ಲಿ ಚಿಕಿತ್ಸೆ ಪಡೆಯುವಾಗ ಕ್ಷಯರೋಗಿಗಳಿಗೆ ಸಿಬಿನ್ಯಾಟ್ ಪರೀಕ್ಷೆ ಮಾಡಿಸಿ ಯಾವ ಹಂತದ ಚಿಕಿತ್ಸೆ ಅವಶ್ಯಕತೆಯಿದೆ ಎಂಬುದನ್ನು ತಿಳಿಯುವ ಅವಶ್ಯಕತೆ ತುಂಬಾ ಇರುತ್ತದೆ. ಖಾಸಗಿಯಲ್ಲಿ ಚಿಕಿತ್ಸೆ ಪಡೆಯುವ ಕ್ಷಯರೋಗಿಗಳಿಗೂ ಸರಕಾರ ನಿಕ್ಷಯ್ ಪೋಷಣ ಯೋಜನೆಯಡಿಯಲ್ಲಿ ಪ್ರತಿ ತಿಂಗಳೂ ರೂ.೫೦೦ ಡಿಬಿಟಿ ಮೂಲಕ ನೀಡಲು ಯೋಜನೆ ರೂಪಿಸಿದೆ. ಹಾಗೆಯೇ ಕ್ಷಯರೋಗಿಗಳ ಮಾಹಿತಿದಾರರಿಗೆ ರೂ.೫೦೦ ಗಳ ಪ್ರೋತ್ಸಾಹಧನ ಜಾರಿಗೆ ತಂದಿದೆ. ಯಾವುದೇ ಒಬ್ಬ ಕ್ಷಯರೋಗಿಯ ಸಾವು ಆ ಕುಟುಂಬಕ್ಕೆ ಭರಿಸಲಾರದ ನಷ್ಟ ಉಂಟುಮಾಡಿ ಅನೇಕ ಕುಟುಂಬಗಳು ಬೀದಿಪಾಲಾಗಿವೆ. ಕಾರಣ, ಕ್ಷಯರೋಗ ನಿರ್ಮೂಲನೆಗೆ ಖಾಸಗಿ ವೈದ್ಯರು ಸಹಕಾರ ನೀಡಿ ಕ್ಷಯರೋಗಿಗಳನ್ನು ಪತ್ತೆ ಮಾಡಿ ಸಿಬಿನ್ಯಾಟ್ ಮಾಡಿಸಿ ಚಿಕಿತ್ಸೆಗೊಳಪಡಿಸುವುದು ತುಂಬಾ ಅವಶ್ಯಕತೆ ಇದೆ ಎಂದು ತಿಳಿಸಿದ ಅವರು ಖಾಸಗಿ ವೈದ್ಯರ ಸಹಭಾಗಿತ್ವ ಕ್ಷಯ ನಿರ್ಮೂಲನೆಗೆ ಅಡಿಪಾಯವಾಗಿದ್ದು, ಇಲಾಖೆಯ ಜೊತೆ ಸಹಕರಿಸುವಂತೆ ಮನವಿ ಮಾಡಿದರು.
ಭಾರತೀಯ ವೈದ್ಯಕೀಯ ಸಂಘ, ಗಂಗಾವತಿ ಘಟಕದ ಅಧ್ಯಕ್ಷರಾದ ಹನುಮಂತಪ್ಪ ಅವರು ಮಾತನಾಡಿ, ಖಾಸಗಿ ವೈದ್ಯರ ಒಕ್ಕೂಟವನ್ನು ಶಶಿಧರ್ ಅವರ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಗಿದ್ದು, ಪ್ರತಿ ತಿಂಗಳು ಕ್ಷಯ ನಿರ್ಮೂಲನೆಗೆ ಸಹಕಾರಿಯಾಗುವಂತೆ ಸಮಸ್ಯಾತ್ಮಕ ಪ್ರದೇಶಗಳಲ್ಲಿ ಆರೋಗ್ಯ ಶಿಬಿರ, ಸಂಶಯಾಸ್ಪದ ಕ್ಷಯ ರೋಗಿಗಳನ್ನು ಪರೀಕ್ಷೆ ಮಾಡಿಸುವುದು ಮತ್ತು ಚಿಕಿತ್ಸೆಗೆ ಕಳುಹಿಸುವುದು, ಬಹು ಔಷಧ ನಿರೋಧಕ ಕ್ಷಯ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸಹಕರಿಸುವುದು ಮುಂತಾದ ಸಮಾಜ ಸೇವಾ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದರು.
ಕಾರ್ಯಗಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಡಾ.ಹಂಸವೇಣಿ, ಕಿಮ್ಸ್ ಕೊಪ್ಪಳದ ಡಾ.ಶಶಿಕಾಂತ್ ಹೂಗಾರ, ಗಂಗಾವತಿ ನಗರದ ವೈದ್ಯ ಡಾ.ನಾಗರಾಜ ರವರು ವಿಷಯಗಳನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಐಎಂಎ ಗಂಗಾವತಿ ಸದಸ್ಯರು ಹಾಗೂ ನಗರದ ವೈದ್ಯರಾದ ಡಾ.ಚಂದ್ರಪ್ಪ, ಡಾ.ಈಶ್ವರ್ ಸವದಿ, ಮಾನಿಕಪ್ಪ, ಹನುಮಂತಪ್ಪ, ಬಾಲಸುಬ್ರಹ್ಮಣ್ಯ, ಗುರುಮೂರ್ತಿ, ವೀರೇಶ್ ಕಟ್ಟಿ, ಮಾಧವ ಶೆಟ್ಟಿ, ಮಧುಸೂಧನ್, ಮಲ್ಲನಗೌಡ, ರಾಜು ಸೋಮರಾಜು, ಅರ್ಜುನ್ ಹೊಸಳ್ಳಿ, ಶ್ವೇತಾ ಹೊಸಳ್ಳಿ, ಸತೀಶ್ ರಾಯ್ಕರ್, ಪ್ರಭಾ ರಾಯ್ಕರ್, ಅರ್ಚನಾ ಅಮರೇಶ್, ದಿವ್ಯ ಭಾವಿಕಟ್ಟಿ, ಲತಾ ಮಲ್ಲನಗೌಡ, ಬಸವರಾಜ್ ಸಿಂಗನಾಳ ಸೇರಿದಂತೆ ಕ್ಷಯರೋಗ ವಿಭಾಗದ ಮಲ್ಲಿಕಾರ್ಜುನ, ಹುಸೇನ್ ಬಾಷಾ, ಗೋಪಾಲಕೃಷ್ಣ, ಇಬ್ರಾಹಿಂ, ರಾಘವೇಂದ್ರ ಜೋಶಿ, ನಾಗರಾಜ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker