Karnataka

ಪ್ರೇಮಿಗಳ ಆತ್ಮಹತ್ಯೆ

ಮಂಡ್ಯ : ಬೆಂಗಳೂರಿನ ಪಿ.ದಾಸರಹಳ್ಳಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ದೀಕ್ಷಿತ್ ಕೆಲಸ ಮಾಡುತ್ತಿದ್ದನು. ಈತ ತುಮಕೂರಿನ ಪಂಚಾಕ್ಷರಿ ಎಂಬ ಯುವತಿಯನ್ನು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ.
ಇವರಿಬ್ಬರು ಮದುವೆಯಾಗಲು ನಿರ್ಧರಿಸಿದ್ದು, ಇದಕ್ಕೆ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಯುವಕ ಮನೆಯಲ್ಲಿ ತನ್ನ ಪ್ರೀತಿಯ ವಿಷಯವನ್ನು ತಿಳಿಸಿದ್ದು, ಇದಕ್ಕೆ ಕುಟುಂಬಸ್ಥರು ಒಪ್ಪದ ಕಾರಣ ಕಳೆದ ಫೆ.೭ ರಂದು ಆತ್ಮಹತ್ಯೆ ಮಾಡಿಕೊಂಡಿದ್ದನು. ಮಂಡ್ಯಜಿಲ್ಲೆಯ, ಮದ್ದುರೂ ತಾಲ್ಲೂಕಿನ,ಕೊಪ್ಪ ಗ್ರಾಮದ ಹುಡುಗಿ ಪಂಚಾಕ್ಷರಿ ತುಮಕೂರು ಜಿಲ್ಲೆಯ ಚಿಕ್ಕನಾಯಕಹಳ್ಳಿಯಲ್ಲಿ ಆತ್ಮಹತ್ಯೆಗೆ ಶಾರಣಾಗಿದ್ದಾಳೆ. ಶರಣಾದ ಪ್ರೇಮಿಗಳು ದೀಕ್ಷಿತ್(೩೨) ಹಾಗೂ ಪಂಚಾಕ್ಷರಿ(೩೦) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಪ್ರಿಯತಮನ ಸಾವಿನ ಸುದ್ದಿ ಕೇಳಿದ ಯುವತಿ ಮೂರು ದಿನಗಳ ನಂತರ ಮನನೊಂದು ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker