Belagavi

‘ಕೃತಕ ಬುದ್ಧಿಮತ್ತೆ ಮತ್ತು ಸಾಫ್ಟ್ ಕಂಪ್ಯೂಟಿAಗ್ ಐಸಿಎಐಎಸ್‌ಸಿ-ಕುರಿತ ಅಂತಾರಾಷ್ಟಿçÃಯ ಸಮ್ಮೇಳನ

ವಿಜಯಪುರ: ‘ಸಂಶೋಧನಾ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ಮಹತ್ವದ್ದಾಗಿದ್ದು, ಮುಂಬರುವ ವಿದ್ಯಾರ್ಥಿಗಳು ತಂತ್ರಜ್ಞಾನದ ಸಹಾಯದೊಂದಿಗೆ ಸಂಶೋಧನೆ ಕೈಗೊಂಡು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು’ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಪಿ.ಆಲಗೂರ ಹೇಳಿದರು.
ಅವರು ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ಅಧ್ಯಯನ ವಿಭಾಗ ಹಾಗೂ ನವದೆಹಲಿಯ ಡಿಎಸ್‌ಟಿ ಕ್ಯೂರಿ-ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇವರ ಸಹಯೋಗದಲ್ಲಿ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆ ಮತ್ತು ಸಾಫ್ಟ್ ಕಂಪ್ಯೂಟಿAಗ್ ಐಸಿಎಐಎಸ್‌ಸಿ-೨೦೨೧’ ಕುರಿತ ಮೂರು ದಿನಗಳÀ ಅಂತಾರಾಷ್ಟಿçÃಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
‘ಯಂತ್ರದ ಮತ್ತು ಮಾನವನ ಬುದ್ಧಿವಂತಿಕೆಯ ಸಹಾಯದಿಂದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಾರ್ಯನಿರ್ವಹಿಸುತ್ತದೆ. ಕೃತಕ ಬುದ್ಧಿಮತ್ತೆಯು ಯಾವುದೇ ಕೆಲಸವನ್ನು ಚುರುಕಾಗಿಸಲು ಹಾಗೂ ವೇಗವಾಗಿ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯಕವಾಗಿದೆ. ಆದ್ದರಿಂದ ವಿದ್ಯಾರ್ಥಿನಿಯರು ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದುಕೊಂಡು ಪರಿಣಿತಿ ಹೊಂದಬೇಕು’ ಎಂದರು.
ಅಲಹಾಬಾದ್‌ನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಪಿ.ನಾಗಭೂಷಣ ಆನ್‌ಲೈನ್ ಮೂಲಕ ವಿದ್ಯಾರ್ಥಿನಿಯರಿಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ನ ತಂತ್ರಗಳು ಮತ್ತು ಅದರ ಮಹತ್ವದ ಕುರಿತು ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಮಾತನಾಡಿ, ‘ತಂತ್ರಜ್ಞಾನದ ಬೆಳವಣಿಗೆಯು ಮಾನವನ ಪ್ರಯತ್ನವನ್ನು ಮತ್ತು ದೋಷಗಳನ್ನು ಕಡಿಮೆ ಮಾಡಿ ವೇಗವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಪ್ರತಿಯೊಂದು ತಾಂತ್ರಿಕ ಚಟುವಟಿಕೆಗೆ ಕೃತಕ ಬುದ್ಧಿಮತ್ತೆ ಅತ್ಯವಶ್ಯವಾಗಿದೆ’ ಎಂದರು.
‘ಮುAಬರುವ ಯುವ ಪೀಳಿಗೆ ಕೃತಕ ಬುದ್ಧಿಮತ್ತೆಯು ಮೇಲೆ ಮಾತ್ರ ಅವಲಂಬಿತರಾಗದೇ, ಮಾನವನ ಸಾಮರ್ಥ್ಯ ಮತ್ತು ಸಾಮಾಜಿಕ ಚಿಂತನೆಯನ್ನು ಸಹ ಗೌರವಿಸಬೇಕು’ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಮೌಲ್ಯಮಾಪನಾ ಕುಲಸಚಿವ ಪ್ರೊ.ಪಿ.ಜಿ.ತಡಸದ ಹಾಗೂ ಆರ್ಥಿಕ ಅಧಿಕಾರಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿದರು.
ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ಸ್ವಾಗತ ಗೀತೆಯನ್ನು ಹಾಡಿದರು. ಪ್ರೊ.ರಮೇಶ್ ಕೆ ಅತಿಥಿಗಳನ್ನು ಸ್ವಾಗತಿಸಿದರು. ಡಿಎಸ್‌ಟಿ ಕ್ಯೂರಿ-ಎಐನ ಸಂಯೋಜಕ ಪ್ರೊ.ಅಜೀಜ್ ಮಕಾನದಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ರೇಣುಕಾ ಮೇಟಿ, ಡಾ.ಸಂಜೀವಕುಮಾರ ಗಿರಿ ಅತಿಥಿಗಳನ್ನು ಪರಿಚಯಿಸಿದರು. ಡಾ.ಶೀತಲರಾಣಿ ಕವಳೆ ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ರಶ್ಮಿ ಸೋಮಶೇಖರ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker